ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದಿಬಾಬಾಗೆ ಸವಾಲು: ವಿಶ್ವ ದಾಖಲೆಯ ಜೆಪ್ಕೋಸ್ಜಿ ದಿಲ್ಲಿ ಮ್ಯಾರಥಾನ್ ನಲ್ಲಿ!

World record holder Jepkosgei joins Delhi Half Marathon to challenge Dibaba

ನವದೆಹಲಿ, ಅಕ್ಟೋಬರ್ 13: ಹಾಫ್ ಮ್ಯಾರಥಾನ್ ಓಟದಲ್ಲಿ ಇಂದಿಗೂ ವಿಶ್ವದಾಖಲೆಯನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡಿರುವ ಕೀನ್ಯಾದ ಜಾಯ್ಸ್ಸಿನ್ ಜೆಪ್ಕೋಸ್ಜೀ ಅವರು ಏರ್‌ಟೆಲ್ ದಿಲ್ಲಿ ಹಾಫ್ ಮ್ಯಾರಥಾನ್ ಮಹಿಳಾ ವಿಭಾಗದ ಎಲೈಟ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ vs ಚೀನಾ ಕುತೂಹಲಕಾರಿ ಸೌಹಾರ್ದ ಫುಟ್ಬಾಲ್ ಪಂದ್ಯ ಸಮಬಲಭಾರತ vs ಚೀನಾ ಕುತೂಹಲಕಾರಿ ಸೌಹಾರ್ದ ಫುಟ್ಬಾಲ್ ಪಂದ್ಯ ಸಮಬಲ

ಒಲಿಂಪಿಕ್ ನಲ್ಲಿ ಮೂರುಬಾರಿ ಚಿನ್ನ ಪದಕ ಗೆದ್ದಿರುವ ಇಥಿಯೋಫಿಯಾ ಬಲಾಡ್ಯೆ ತಿರುನೇಶ್ ದಿಬಾಬಾ ಅವರೂ ಈ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ದಿಬಾಬಾಗೆ ಸವಾಲೆಸೆದು ವಿಶ್ವ ದಾಖಲೆಯ ಓಟಗಾರ್ತಿ ಜೆಪ್ಕೋಸ್ಜೀ ಕೂಡ ಹಾಫ್ ಮ್ಯಾರಥಾನ್ ನಲ್ಲಿ ರೇಸಿಗಿಳಿಯಲಿದ್ದಾರೆ.

ಈವರೆಗೆ ಈ ಜೋಡಿ ಎರಡು ಸಾರಿ ಜಿದ್ದಾಜಿದ್ದಿಗಿಳಿದಿತ್ತು. ಮೊದಲು, ಕಳೆದ ವರ್ಷ ಯುಎಯಿಯಲ್ಲಿ ನಡೆದಿದ್ದ ರಾಸ್ ಅಲ್ ಖೈಮಾ ಹಾಲ್ ಮ್ಯಾರಥಾನ್ ನಲ್ಲಿ ಜೆಪ್ಕೋಸ್ಜಿ ಮೂರನೇ ಸ್ಥಾನಿಗರಾಗಿ ಮತ್ತು ದಿಬಾಬಾ ಐದನೆಯವರಾಗಿ ಓಟ ಮುಗಿಸಿದ್ದರು. ಇನ್ನೊಂದು, ಈ ವರ್ಷ ಬ್ರಿಟನ್ ನಲ್ಲಿ ನಡೆದಿದ್ದ 10ಕೆ ರೇಸ್ ನಲ್ಲಿ ದಿಬಾಬ ಮೊದಲನೆಯವರಾಗಿ, ಜೆಪ್ಕೋಸ್ಜಿ ಎರಡನೆಯವರಾಗಿ ಮಿಂಚಿದ್ದರು.

ಅಕ್ಟೋಬರ್ 21ರಂದು ಆಕರ್ಷಣೀಯ ರೇಸ್ ನಡೆಯಲಿದೆ. ಜೆಪ್ಕೋಸ್ಜಿ ಈ ಬಗ್ಗೆ ಪ್ರತಿಕ್ರಿಯಿಸಿ, 'ಎಡಿಎಚ್‌ಎಂ 2018ಗಾಗಿ ನಾನು ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಪ್ರಬಲ ಪೈಪೋಟಿ ದಿಬಾಬ ಸವಾಲು ಸ್ವೀಕರಿಸಲೂ ನಾನು ಕಾತರಳಾಗಿದ್ದೇನೆ' ಎಂದಿದ್ದಾರೆ. 1 ಗಂಟೆ 4 ನಿಮಿಷ 51 ಸೆಕೆಂಡ್ ಗಳಲ್ಲಿ ಹಾಫ್ ಮ್ಯಾರಥಾನ್ (21.5 ಕಿ.ಮೀ.) ಓಡಿ ಮುಗಿಸಿದ ವಿಶ್ವ ದಾಖಲೆ ಜೆಪ್ಕೋಸ್ಜಿ ಹೆಸರಿನಲ್ಲಿದೆ.

Story first published: Saturday, October 13, 2018, 20:43 [IST]
Other articles published on Oct 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X