ಕುಸ್ತಿಪಟು ಗೀತಾ ಮದುವೆಯಲ್ಲಿ ಅಮೀರ್ ಮಿಂಚಿಂಗ್!

Posted By:

ಹರ್ಯಾಣ, ನವೆಂಬರ್ 21: ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ಗೀತಾ ಫೋಗತ್ ಅವರ ಮದುವೆ ಸಂಭ್ರಮವನ್ನು ನಟ ಅಮೀರ್ ಖಾನ್ ಅವರು ಇನ್ನಷ್ಟು ಹೆಚ್ಚಿಸಿದ್ದಾರೆ. ಭಾನುವಾರ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ಅಮೀರ್ ಅವರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು.

ಕುಸ್ತಿಪಟು ಪ್ರವೀಣ್ ಕುಮಾರ್ ಅವರನ್ನು ಹರ್ಯಾಣದ ತಮ್ಮ ಪೂರ್ವಜರ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ವರಿಸಿದ ಗೀತಾ ಫೋಗತ್ ಅವರಿಗೆ ಶುಭ ಹಾರೈಸಲು ಅಮೀರ್ ಖಾನ್ ಬಂದಿದ್ದರು.

ದಂಗಲ್ ಚಿತ್ರದಲ್ಲಿ ಗೀತಾ ಫೋಗತ್ ಅವರ ತಂದೆಯ ಪಾತ್ರವನ್ನು ಅಮೀರ್ ಖಾನ್ ಮಾಡುತ್ತಿದ್ದು, ಈ ಮದುವೆಗೆ ವಿಶೇಷ ಅತಿಥಿಯಾಗಿ ಬಂದು ಗೀತಾ ಅವರ ತಂದೆ ಮಹಾವೀರ್ ಸಿಂಗ್ ಜತೆ ಕಾಣಿಸಿಕೊಂಡರು.

ಬಿಳಿ ಕುರ್ತಾ ಪೈಜಾಮಾ ತೊಟ್ಟು, ಕೆಂಪು ಸಾಫಾದೊಂದಿಗೆ ಬಂದಿದ್ದ ಅಮೀರ್ ಜತೆಗೆ ನಟಿ ಸಾಕ್ಷಿ ತನ್ವರ್, ನಿರ್ದೇಶಕ ನಿತೇಶ್ ತಿವಾರಿ, ಸನ್ಯಾ ಮಲ್ಹೋತ್ರಾ ಮುಂತಾದವರಿದ್ದರು.

2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 55 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿ ಮೊಟ್ಟ ಮೊದಲ ಬಾರಿಗೆ ಚಿನ್ನ ಗೆದ್ದ ಸಾಧನೆ ಗೀತಾ ಫೋಗತ್ ಅವರ ಹೆಸರಿನಲ್ಲಿದೆ. ಗೀತಾ ಅವರ ಸಾಧನೆ ಕುರಿತಾದ ಚಿತ್ರವೇ ದಂಗಲ್.

ಹೆಣ್ಣಿನ ಮನೆ ಕಡೆಯರಾಗಿ ಬಂದ ಅಮೀರ್

ಹೆಣ್ಣಿನ ಮನೆ ಕಡೆಯರಾಗಿ ಬಂದ ಅಮೀರ್

ಹೆಣ್ಣಿನ ಮನೆ(ಗೀತಾ ಫೋಗತ್) ಕಡೆಯರಾಗಿ ಬಂದ ಅಮೀರ್ ಅವರು ಕುರ್ತಾ ಪೈಜಾಮ ಹಾಗೂ ಕರಿ ಕೋಟು ಧರಿಸಿ ಪಕ್ಕಾ ಹರ್ಯಾಣದ ಸಂಪ್ರದಾಯಸ್ಥ ತಂದೆಯಂತೆ ಕಾಣಿಸಿಕೊಂಡಿದ್ದು ಎಲ್ಲರಿಗೂ ಮೆಚ್ಚುಗೆಯಾಯಿತು.

ದಂಗಲ್ ತಂಡದೊಡನೆ ಬಂದ ಅಮೀರ್

ದಂಗಲ್ ತಂಡದೊಡನೆ ಬಂದ ಅಮೀರ್

ನಟಿ ಸಾಕ್ಷಿ ತನ್ವರ್, ನಿರ್ದೇಶಕ ನಿತೇಶ್ ತಿವಾರಿ, ಸನ್ಯಾ ಮಲ್ಹೋತ್ರಾ ಮುಂತಾದವರಿದ್ದರು. ವಧುವಿನ ಕಡೆಯಲ್ಲಿದ್ದ ಅಮೀರ್ ಅವರು ಗೀತಾ ಅವರಿಗೆ ಗಿಫ್ಟ್ ಕೊಡಲು ಕೂಡಾ ಮನೆಯವರು ಬಿಡಲಿಲ್ಲ. ಗೀತಾ ಅವರು ತಮ್ಮ ಮಾವನ ಮನೆ ಸೇರಿದ ಬಳಿಕವಷ್ಟೆ ನಿಮ್ಮ ಉಡುಗೊರೆ ತಲುಪಿಸಬಹುದು ಎಂದು ಸಂಪ್ರದಾಯವನ್ನು ನೆನಪಿಸಿದರು.

ಗೀತಾ ಅವರ ತಂದೆ ಮಹಾವೀರ್ ಫೋಗತ್

ಗೀತಾ ಅವರ ತಂದೆ ಮಹಾವೀರ್ ಫೋಗತ್

ಗೀತಾ ಅವರ ತಂದೆ ಮಹಾವೀರ್ ಫೋಗತ್ ಅವರ ಪಾತ್ರ ಮಾಡುತ್ತಿರುವ ಅಮೀರ್ ಖಾನ್ ಅವರು ದಂಗಲ್ ಚಿತ್ರದ ಮೂಲಕ ಮಹಿಳಾ ಕುಸ್ತಿಪಟುಗಳ ಬದುಕಿನ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಬಹುನಿರೀಕ್ಷೆ ಹುಟ್ಟಿಸಿರುವ ದಂಗಲ್

ಬಹುನಿರೀಕ್ಷೆ ಹುಟ್ಟಿಸಿರುವ ದಂಗಲ್

ಸಲ್ಮಾನ್ ಅವರ ಸುಲ್ತಾನ್ ಚಿತ್ರ ಯಶಸ್ವಿಯಾದ ಬಳಿಕ ದಂಗಲ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಸಾನ್ಯ ಮಲ್ಹೋತ್ರಾ ಹಾಗೂ ಫಾತಿಮಾ ಸನಾ ಶೇಖ್ ಅವರು ಅಮೀರ್ ಖಾನ್ ಪುತ್ರಿಯರಾಗಿ ನಟಿಸಿದ್ದಾರೆ. ಸಾಕ್ಷಿ ಅವರು ಪತ್ನಿ ಪಾತ್ರವಹಿಸಿದ್ದಾರೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇನು ಕಡಿಮೆಯಿಲ್ಲ ಎಂಬ ಸಂದೇಶವನ್ನು ಈ ಚಿತ್ರ ಹೊತ್ತುಕೊಂಡಿದೆ.

ಅಮೀರ್ ಖಾನ್ ನೋಡಲು ಮುಗಿಬಿದ್ದ ಜನ

ಹರ್ಯಾಣ ಬಲ್ಲಾಲಿ ಗ್ರಾಮದಲ್ಲಿ ನಡೆದ ಮದುವೆಗೆ ಆಗಮಿಸಿದ್ದ ಅಮೀರ್ ಖಾನ್ ಹಾಗೂ ದಂಗಲ್ ತಂಡವನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು.

ಗುರು ಗೀತಾ ಜತೆ ಕುಸ್ತಿಪಟು ಸಾಕ್ಷಿ ಮಲಿಕ್

ಗೀತಾ ಫೋಗತ್ ಅವರನ್ನು ಗುರುವಿನಂತೆ ಕಾಣುವ ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಮದುವೆಗೆ ಆಗಮಿಸಿದ್ದರು.


Story first published: Monday, November 21, 2016, 15:42 [IST]
Other articles published on Nov 21, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ