ಬಾಕ್ಸರ್ ವಿಜೇಂದರ್ ಗೆ ಜಿಂದರ್ ಮಹಲ್ ರಿಂದ ತರಬೇತಿ!

Posted By:

ಬೆಂಗಳೂರು, ಡಿಸೆಂಬರ್ 08: 32 ವರ್ಷ ವಯಸ್ಸಿನ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್​ ಕಣಕ್ಕೆ ಇಳಿದಾಗಿನಿಂದ ಸೋಲು ಕಂಡಿಲ್ಲ. ವಿಜೇಂದರ್ ಅವರು ಬಹುತೇಕ ಎಲ್ಲಾ ಪಂದ್ಯಗಳನ್ನು ನಾಕೌಟ್ ಮೂಲಕ ಗೆಲುವು ಸಾಧಿಸಿದ್ದಾರೆ.

WWE ಚಾಂಪಿಯನ್ ಶಿಪ್ ಕಳೆದುಕೊಂಡ ಭಾರತದ ಕುಸ್ತಿಪಟು

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಪರ ಕಂಚಿನ ಪದಕ ಗೆದ್ದಿದ್ದ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ಮಿಂಚುತ್ತಿದ್ದಾರೆ.

WWE superstar Jinder Mahal trains with star India boxer Vijender Singh at gym

ಈಗ ವಿಜೇಂದರ್ ಸಿಂಗ್ ಅವರಿಗೆ ತರಬೇತಿ ನೀಡಲು WWE ಮಾಜಿ ಚಾಂಪಿಯನ್ ಜಿಂದರ್ ಮಹಲ್ ಮುಂದೆ ಬಂದಿದ್ದಾರೆ. ಜಿಮ್ ನಲ್ಲಿ ಜಿಂದರ್ ಮಹಲ್ ಹಾಗೂ ವಿಜೇಂದರ್ ಸಿಂಗ್ ಅವರು ಕಸರತ್ತು ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ.

ಕವಿತಾ ಕನಸು ನನಸು, WWE ಸ್ಟಾರ್ ಆಗಲು ತಯಾರಿ

WWE ಸೂಪರ್ ಸ್ಟಾರ್ ಜಿಂದರ್ ಅವರು ಸದ್ಯ ಭಾರತ ಪ್ರವಾಸದಲ್ಲಿದ್ದು ಟ್ರಿಪಲ್ ಎಚ್ ವಿರುದ್ಧ ಭಾರತದಲ್ಲಿ ಸೆಣೆಸಲಿದ್ದಾರೆ. ಭಾರತೀಯ ಮೂಲದ ಕೆನಡಾ ಕುಸ್ತಿ ಪಟು ಮಹಲ್ ಅವರು ನವದೆಹಲಿಯಲ್ಲಿ ಡಿಸೆಂಬರ್ 09ರಂದು ನಡೆಯಲಿರುವ WWE ಲೈವ್ ಶೋನಲ್ಲಿ ಹೋರಾಟ ನಡೆಸಲಿದ್ದಾರೆ.

WWE superstar Jinder Mahal trains with star India boxer Vijender Singh at gym

ಈ ಕುಸ್ತಿ ಪಂದ್ಯವನ್ನು ವೀಕ್ಷಿಸಲು ವಿಜೇಂದರ್ ಸಿಂಗ್ ಅವರಿಗೆ ಜಿಂದರ್ ಆಹ್ವಾನ ನೀಡಿದರು. ಇದಕ್ಕೆ ಪ್ರತಿಯಾಗಿ ವಿಜೇಂದರ್ ಅವರು ಡಿಸೆಂಬರ್ 23ರಂದು ನಡೆಯಲಿರುವ ತಮ್ಮ ಬಾಕ್ಸಿಂಗ್ ಪಂದ್ಯ ನೋಡಲು ಬನ್ನಿ ಎಂದಿದ್ದಾರೆ. ನಂತರ ಇಬ್ಬರು ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ್ದಾರೆ.

ಗ್ರೇಟ್ ಖಲಿ ಜತೆ ಕೊಹ್ಲಿ, ಟ್ವಿಟ್ಟಿಗ್ಗರು ನೀಡಿದ ಪ್ರತಿಕ್ರಿಯೆ

ಡಿಸೆಂಬರ್ 23ರಂದು ರಾಜಸ್ಥಾನ್ ರಂಬಲ್ ನಲ್ಲಿ ಘಾನಾದ ಎರ್ನೆಸ್ಟ್ ಅಮುಜು ವಿರುದ್ಧ ವಿಜೇಂದರ್ ಸಿಂಗ್ ಸೆಣಸಲಿದ್ದಾರೆ. ಡಿಸೆಂಬರ್ 09ರಂದು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ರೆಸ್ಲಿಂಗ್ ಪಂದ್ಯ ನಡೆಯಲಿದೆ.

ಯುಎಸ್ ಅಧ್ಯಕ್ಷ ಸ್ಥಾನ ಬಯಸಿದ WWE ಸ್ಟಾರ್

14 ಬಾರಿ ರೆಸ್ಲಿಂಗ್ ಚಾಂಪಿಯನ್ ಆಗಿರುವ ಟ್ರಿಪಲ್ ಎಚ್ ವಿರುದ್ಧ ಮಹಾರಾಜ ಜಿಂದರ್ ಮಹಲ್ ಸೆಣೆಸುವುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Story first published: Friday, December 8, 2017, 13:23 [IST]
Other articles published on Dec 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ