ಜಕಾರ್ತಾ, ಆಗಸ್ಟ್ 24: ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಟೆನಿಸ್ ವಿಭಾಗದಿಂದ ಉತ್ತಮ ಪ್ರದರ್ಶನ ಕಂಡುಬಂದಿದೆ. ಪುರುಷರ ಡಬಲ್ಸ್ ನಲ್ಲಿ ಚಿನ್ನ ಭಾರತದ ಪಾಲಾಗಿದ್ದು, ಪುರುಷರ ಸಿಂಗಲ್ಸ್ ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅವರಿಗೆ ಕಂಚು ಒಲಿದಿದೆ.
ಕೆಪಿಎಲ್ ಪಂದ್ಯಗಳಿಗೆ ಸಂಪೂರ್ಣ ಸಜ್ಜಾಗಿದೆ ಸಾಂಸ್ಕೃತಿಕ ನಗರಿ ಮೈಸೂರು
ಶುಕ್ರವಾರ (ಆಗಸ್ಟ್ 24) ನಡೆದ ಏಷ್ಯನ್ ಗೇಮ್ಸ್ ಪುರುಷರ ಟೆನಿಸ್ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಪ್ರಜ್ಞೇಶ್ ಸೋತರು. ಉಜ್ಬೇಕಿಸ್ತಾನದ ಆಟಗಾರ ಡೆನಿಸ್ ಇಸ್ಟೊಮಿನ್ ಅವರು 6-2, 6-2ರ ನೇರ ಸೆಟ್ ನಿಂದ ಪ್ರಜ್ಞೇಶ್ ಅವರನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡರು. ಇಲ್ಲಿಗೆ ಭಾರತ ಕಂಚಿಗೆ ತೃಪ್ತಿ ಪಡುವಂತಾಗಿದೆ.
ಗುರುವಾರ ವನಿತಾ ಸಿಂಗಲ್ಸ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಅಂಕಿತಾ ರೈನಾ ಕಂಚು ತಂದಿದ್ದರೆ, ಶುಕ್ರವಾರ ಪುರುಷರ ಡಬಲ್ಸ್ ನಲ್ಲಿ ಬೋಪಣ್ಣ-ಶರಣ್ ಜೋಡಿ ಭಾರತಕ್ಕೆ ಬಂಗಾರ ಗೆದ್ದಿತ್ತು. ಭಾರತದ ಪದಕ ಖಾತೆಯಲ್ಲಿ ಒಟ್ಟು 25 ಪದಕಗಳು ಸೇರಿಕೊಂಡಂತಾಗಿವೆ.
Medal Alert🥉
— Doordarshan Sports (@ddsportschannel) August 24, 2018
Prajnesh Gunneswaran Prabhakaran takes home a #BronzeMedal after losing men's singles #Tennis semifinal.#IndiaAtAsianGames #AsianGames2018 pic.twitter.com/zaj8kcxYA9
ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಇರಾನ್ ವಿರುದ್ಧ 27-24 ಅಂತರದ ಸೋಲನುಭವಿಸಿದರು. ಹೀಗಾಗಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಕಬಡ್ಡಿ ತಂಡ ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೆಮಿಫೈನಲ್ ನಲ್ಲಿ ಸೋತಿತ್ತು.