20ನೇ ಗ್ರ್ಯಾನ್ ಸ್ಲಾಮ್ ಗೆದ್ದು ಭಾವುಕರಾದ ಫೆಡರರ್

Posted By:
Federer edges Cilic in thriller to win 20th grand slam title

ಮೆಲ್ಬರ್ನ್, ಜನವರಿ 28 : ಟೆನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಆಸ್ಟ್ರೇಲಿಯನ್ ಓಪನ್ ಫೈನಲ್ ನಲ್ಲಿ ರೋಚಕವಾಗಿ ಗೆಲುವು ಸಾಧಿಸುವ ಮೂಲಕ ದಾಖಲೆಯ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದು ರೋಜರ್ ಗೆದ್ದ 6ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದೆ. ರಾಡ್ ಅಲ್ವೇರ್ ಅರೇನಾದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಕ್ರೋವೇಷಿಯಾದ ಮರಿನ್ ಸಿಲಿಕ್ ವಿರುದ್ಧ 6-2, 6-7(5-7), 6-3, 3-6, 6-1 ಅಂತರದಲ್ಲಿ ಸ್ವಿಡ್ಜರ್ಲೆಂಡ್ ನ ಫೆಡರರ್ ಗೆಲುವು ಸಾಧಿಸಿದರು.

36 ವರ್ಷ ವಯಸ್ಸಿನ ರೋಜರ್ ಅವರು 24 ಏಸ್ ಹಾಗೂ 4 ಡಬ್ಬಲ್ ಫಾಲ್ಟ್ ಎಸಗಿದರೆ, ಸಿಲಿಕ್ 16 ಏಸ್ ಹಾಗೂ 5 ಡಬ್ಬಲ್ ಫಾಲ್ಟ್ ಮಾಡಿದರು.

Story first published: Sunday, January 28, 2018, 18:14 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ