ಯುಎಸ್ ಓಪನ್: ದಿಗ್ಗಜ ಫೆಡರರ್ ಮಣಿಸಿದ ಯುವ ಮಾರ್ಟಿನ್

Posted By:

ನ್ಯೂಯಾರ್ಕ್, ಸೆಪ್ಟೆಂಬರ್ 6: ಈ ಬಾರಿಯ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ನ ರಾಫೆಲ್ ನಡಾಲ್ ಹಾಗೂ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಎಂಬ ಮದಗಜಗಳ ನಡುವೆ ಭರ್ಜರಿ ಕಾದಾಟವೊಂದನ್ನು ನಿರೀಕ್ಷಿಸುತ್ತಿದ್ದ ಟೆನಿಸ್ ಪ್ರಿಯರಿಗೆ ನಿರಾಸೆಯಾಗಿದೆ.

ದಾಖಲೆಯ 8ನೇ ಬಾರಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ ಫೆಡರರ್

ಗುರುವಾರ ಬೆಳಗ್ಗೆ ನಡೆದ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 24ನೇ ಶ್ರೇಯಾಂಕಿತರಾದ ಅರ್ಜೈಂಟೈನಾದ ಹದಿಹರೆಯದ ಟೆನಿಸಿಗ ಮಾರ್ಟಿನ್ ಡೆಲ್ ಪೊಟ್ರೋ, ಸ್ವಿಜರ್ಲೆಂಡ್ ನ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರನ್ನು, 7-5, 3-6, 7-6 (10), 6-4 ಸೆಟ್ ಗಳ ಅಂತರದಲ್ಲಿ ಸೋಲಿಸಿ, ಸೆಮಿಫೈನಲ್ ಗೆ ಕಾಲಿಟ್ಟಿದ್ದಾರೆ. ಈ ಮೂಲಕ, ವಿಶ್ವದ ನಂಬರ್ 3 ಆಟಗಾರ ಫೆಡರರ್ ಅಚ್ಚರಿಯ ಸೋಲು ಕಂಡಂತಾಗಿದೆ.

Martin Del Potro defeats Roger Federer in US Open Quarter final

ಬುಧವಾರ ರಾತ್ರಿ ನಡೆದಿದ್ದ ಇದೇ ಟೂರ್ನಿಯ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಅವರು, ರಷ್ಯಾದ ಯುವ ಆಟಗಾರ ಆ್ಯಂಡ್ರಿ ರುಬ್ಲೆವ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಪದಾರ್ಪಣೆ ಮಾಡಿದರು. ಹಾಗಾಗಿ, ಟೆನಿಸ್ ಪ್ರಿಯರ ಚಿತ್ತ ಫೆಡರರ್ ಆಡಲಿದ್ದ ಕ್ವಾರ್ಟರ್ ಫೈನಲ್ ಪಂದ್ಯದ ಮೇಲೆ ನೆಟ್ಟಿತ್ತು.

ಆ ಪಂದ್ಯದಲ್ಲಿ ಫೆಡರರ್ ಗೆದ್ದರೆ, ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ನಡಾಲ್ ಜತೆಗೆ ಸೆಮಿಫೈನಲ್ ನಲ್ಲಿ ಕದನಕ್ಕಿಳಿಯಲಿದ್ದಾರೆಂದು ಆಶಿಸಿದ್ದರು. ಆದರೆ, ಅವರ ಲೆಕ್ಕಾಚಾರ ತಿರುಗು ಮುರುಗಾಗಿದೆ. ಇಂದು (ಸೆಪ್ಟೆಂಬರ್ 7) ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಹಾಗೂ ಮಾರ್ಟಿನ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

Story first published: Thursday, September 7, 2017, 10:58 [IST]
Other articles published on Sep 7, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ