ಎಟಿಪಿ ನಂ.1 ಸ್ಥಾನದಲ್ಲಿ ಬರೋಬ್ಬರಿ 334 ವಾರಗಳ ಕಳೆದ ನೊವಾಕ್ ಜೊಕೋವಿಕ್!

ಪ್ಯಾರಿಸ್: ಈ ವರ್ಷ ಪ್ರಮುಖ ಮೂರು ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ನೊವಾಕ್ ಜೊಕೋವಿಕ್ ಮತ್ತೊಂದು ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ವಿಶ್ವ ನಂ.1 ರ್‍ಯಾಂಕಿಂಗ್‌ನಲ್ಲಿ ಜೊಕೋವಿಕ್ ಬರೋಬ್ಬರಿ 334 ವಾರಗಳ ಕಾಲ ಉಳಿದಿದ್ದಾರೆ. ಸೋಮವಾರ (ಆಗಸ್ಟ್ 16) ಪ್ರಕಟಿತ ಎಟಿಪಿ (ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್) ರ್‍ಯಾಂಕಿಂಗ್‌ನಲ್ಲಿ ಜೊಕೋವಿಕ್ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಮುಂಬರಲಿರುವ ಯುಎಸ್ ಓಪನ್‌ನಲ್ಲೂ ಜೊಕೋವಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಈ ವರ್ಷದ ಕೊನೇವೆಗೂ ನಂ.1 ಸ್ಥಾನದಲ್ಲೇ ಮುಂದುವರೆಯುವ ನಿರೀಕ್ಷೆಯಿದೆ.

ಮೊಯೀನ್ ಅಲಿ ಎಸೆತಕ್ಕೆ ಭರ್ಜರಿ ಸಿಕ್ಸ್ ಚಚ್ಚಿದ ಮೊಹಮ್ಮದ್ ಶಮಿ: ವಿಡಿಯೋಮೊಯೀನ್ ಅಲಿ ಎಸೆತಕ್ಕೆ ಭರ್ಜರಿ ಸಿಕ್ಸ್ ಚಚ್ಚಿದ ಮೊಹಮ್ಮದ್ ಶಮಿ: ವಿಡಿಯೋ

ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ 334 ವಾರಗಳನ್ನು ಕಳೆದಿರುವ ನೊವಾಕ್ ಜೊಕೋವಿಕ್ ಅವರು ಸ್ವಿಜರ್‌ಲ್ಯಾಂಡ್ ದಂತಕತೆ ರೋಜರ್ ಫೆಡರರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಫೆಡರರ್ ಅವರು 310 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು. ಈಗ 9ನೇ ಶ್ರೇಯಾಂಕದಲ್ಲಿರುವ ಫೆಡರರ್, ಗಾಯದಿಂದಾಗಿ ಹಲವಾರು ಕಾಲ ಟೆನಿಸ್ ನಿಂದ ದೂರ ಇದ್ದಿದ್ದರಿಂದ ಸ್ವಲ್ಪ ಮಟ್ಟಿಗೆ ತನ್ನ ಪ್ರಖರತೆ ಕಳೆದುಕೊಂಡಿದ್ದಾರೆ.

ಮೂರು ಗ್ರ್ಯಾಂಡ್‌ಸ್ಲ್ಯಾಮ್‌ಗಳ ಗೆದ್ದಿದ್ದ ನೊವಾಕ್ ಜೊಕೋವಿಕ್
ನೊವಾಕ್ ಜೊಕೋವಿಕ್ ಪಾಲಿಗೆ ಈ ವರ್ಷ ಚಿನ್ನದ ವರ್ಷವಾಗಿತ್ತು. ಜೊಕೋವಿಕ್ ಇದೇ ವರ್ಷ ಒಟ್ಟಿಗೆ ಮೂರು ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದರು. ಪ್ಯಾರಿಸ್ ಓಪನ್, ಆಸ್ಟ್ರೇಲಿಯಾ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಜೊಕೋವಿಕ್ ಚಾಂಪಿಯನ್ ಆಗಿ ಮಿನುಗಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸುವ ಯೋಜನೆಯಲ್ಲಿ ಜೊಕೋವಿಕ್ ಕಣಕ್ಕಿಳಿದಿದ್ದರಾದರೂ ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೋತಿದ್ದರು. ಆ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ಆ ಬಳಿಕ ನಡೆದ ಮಿಶ್ರ ಡಬಲ್ಸ್‌ನಲ್ಲೂ ಜೊಕೋವಿಕ್, ನೀನಾ ಸ್ಟೊಜನೊವಿಕ್ ಜೋಡಿಗೆ ಸೋಲಾಗಿತ್ತು.

ಬೌಲಿಂಗ್‌ ಅಲ್ಲ ಭರ್ಜರಿ ಬ್ಯಾಟಿಂಗ್‌: ಟೆಸ್ಟ್‌ನಲ್ಲಿ 2ನೇ ಅರ್ಧ ಶತಕ ಚಚ್ಚಿದ ಮೊಹಮ್ಮದ್ ಶಮಿ!ಬೌಲಿಂಗ್‌ ಅಲ್ಲ ಭರ್ಜರಿ ಬ್ಯಾಟಿಂಗ್‌: ಟೆಸ್ಟ್‌ನಲ್ಲಿ 2ನೇ ಅರ್ಧ ಶತಕ ಚಚ್ಚಿದ ಮೊಹಮ್ಮದ್ ಶಮಿ!

ಫೆಡರರ್‌ಗೆ ಮತ್ತೆ ಗಾಯ, ಕೆಲ ತಿಂಗಳ ಕಾಲ ಟೆನಿಸ್‌ನಿಂದ ದೂರ
ಸ್ವಿಸ್ ದಂತಕತೆ ರೋಜರ್ ಫೆಡಡರ್ ಮತ್ತೆ ಮೊಣಕಾಲು ಗಾಯಕ್ಕೀಡಾಗಿರುವುದರಿಂದ ಕೆಲವಾರ ತಿಂಗಳ ಕಾಲ ಟೆನಿಸ್ ಅಂಕಣದಿಂದ ದೂರ ಇರಲಿದ್ದಾರೆ. ಭಾನುವಾರ (ಆಗಸ್ಟ್ 15) ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡಿದ ಫೆಡರರ್ ಈ ಸಂಗತಿ ಹೇಳಿಕೊಂಡಿದ್ದಾರೆ. "ನಾನು ಒಂದಿಷ್ಟು ತಿಂಗಳ ಕಾಲ ಟೆನಿಸ್‌ನಿಂದ ಹೊರಗಿರಲಿದ್ದೇನೆ. ನಾನು ಹಲವು ವಾರಗಳ ಕಾಲ ನಡೆಯಲಾರದ ಸ್ಥಿತಿಯಲ್ಲಿರಲಿದ್ದೇನೆ ಮತ್ತು ಹಲವು ತಿಂಗಳು ಆಟದಿಂದ ಹೊರಗುಳಿಯಲಿದ್ದೇನೆ," ಎಂದು 40ರ ಹರೆಯದ ರೋಜರ್ ಫೆಡರರ್ ಹೇಳಿದ್ದಾರೆ. ಫೆಡರರ್ ಹೆಸರಿನಲ್ಲಿ 20 ಗ್ರ್ಯಾಂಡ್‌ ಸ್ಲ್ಯಾಮ್‌ಗಳ ದಾಖಲೆಯಿದೆ. 20 ಗ್ರ್ಯಾಂಡ್‌ಸ್ಲ್ಯಾಮ್‌ಗಳ ದಾಖಲೆಯಿರುವುದು ನೊವಾಕ್ ಜೊಕೋವಿಕ್, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಹೆಸರಿನಲ್ಲಿ.

ಆಗಸ್ಟ್ 16ರಂದಿನಂತೆ ATP ಶ್ರೇಯಾಂಕಗಳು
1. ನೊವಾಕ್ ಜೊಕೊವಿಕ್ (SRB) 12,113 ಅಂಕಗಳು
2. ಡೇನಿಲ್ ಮೆಡ್ವೆಡೆವ್ (RUS) 10,620 ಅಂಕಗಳು
3. ಸ್ಟೆಫಾನೋಸ್ ಸಿಟ್ಸಿಪಾಸ್ (ಜಿಆರ್ಇ) 8,350 ಅಂಕಗಳು
4. ರಾಫೆಲ್ ನಡಾಲ್ (ESP) 7,815 ಅಂಕಗಳು
5. ಅಲೆಕ್ಸಾಂಡರ್ ಜ್ವೆರೆವ್ (GER) 7,263 ಅಂಕಗಳು
6. ಡೊಮಿನಿಕ್ ಥೀಮ್ (AUT) 7,005 ಅಂಕಗಳು
7. ಆಂಡ್ರೆ ರುಬ್ಲೆವ್ (RUS) 6,005 ಅಂಕಗಳು
8. ಮ್ಯಾಟಿಯೊ ಬೆರೆಟ್ಟಿನಿ (ITA) 5,533 ಅಂಕಗಳು
9. ರೋಜರ್ ಫೆಡರರ್ (SUI) 4,215 ಅಂಕಗಳು
10. ಡೆನಿಸ್ ಶಪೊವಲೊವ್ (CAN) 3,625 ಅಂಕಗಳು
11. ಕ್ಯಾಸ್ಪರ್ ರೂಡ್ (NOR) 3,350 (+1) ಅಂಕಗಳು
12. ಹಬರ್ಟ್ ಹರ್ಕಸ್ (POL) 3,288 (+1) ಅಂಕಗಳು
13. ಪ್ಯಾಬ್ಲೊ ಕ್ಯಾರೆನೊ ಬುಸ್ಟಾ (ESP) 3,260 (-2) ಅಂಕಗಳು
14. ಡಿಯಾಗೋ ಶ್ವಾರ್ಟ್ಜ್ಮನ್ (ARG) 2,980 ಅಂಕಗಳು
15. ಜಾನಿಕ್ ಸಿನ್ನರ್ (ITA) 2,745 ಅಂಕಗಳು
16. ರಾಬರ್ಟೊ ಬಟಿಸ್ಟಾ (ESP) 2,720 (+1) ಅಂಕಗಳು
17. ಫೆಲಿಕ್ಸ್ ಅಗರ್-ಅಲಿಯಾಸಿಮ್ (CAN) 2,693 (-1) ಅಂಕಗಳು
18. ಅಲೆಕ್ಸ್ ಡಿ ಮಿನೌರ್ (AUS) 2,600 ಅಂಕಗಳು
19. ಡೇವಿಡ್ ಗಾಫಿನ್ (ಬಿಇಎಲ್) 2,513 ಅಂಕಗಳು
20. ಕ್ರಿಸ್ಟಿಯನ್ ಗ್ಯಾರನ್ (CHI) 2,510 ಅಂಕಗಳು

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 16, 2021, 22:08 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X