ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಕಿಂಗ್‌ ಆಫ್‌ ಕ್ಲೇ' ನಡಾಲ್‌ ಮುಡಿಗೆ 12ನೇ ಫ್ರೆಂಚ್‌ ಓಪನ್‌ ಕಿರೀಟ!

Rafael Nadal sweeps to 12th French Open and 18th Grand Slam title

ಪ್ಯಾರಿಸ್‌, ಜೂನ್‌ 09: ಕಿಂಗ್‌ ಆಫ್ ಕ್ಲೇ ರಾಫೆಲ್‌ ನಡಾಲ್‌ ರೊಲ್ಯಾಂಡ್‌ ಗ್ಯಾರೋಸ್‌ ಅಂಗಣದಲ್ಲಿ ನವ ಇತಿಹಾಸ ಬರೆದಿದ್ದು, ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಡಾಮಿನಿಕ್‌ ಥೀಮ್‌ ಅವರನ್ನು ಮಣಿಸಿ ವೃತ್ತಿ ಬದುಕಿನ 12ನೇ ಫ್ರೆಂಚ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕ್ಲೇ ಕೋರ್ಟ್‌ ಟೂರ್ನಿಗಳಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿರುವ 33 ವರ್ಷದ ಅನುಭವಿ ಆಟಗಾರ ನಡಾಲ್‌, ಫೈನಲ್‌ ಪಂದ್ಯದಲ್ಲಿ 6-3, 5-7, 6-1, 6-1 ಸೆಟ್‌ಗಳಿಂದ 5ನೇ ಶ್ರೇಯಾಂಕಿತ ಆಟಗಾರ ಆಸ್ಟರಿಯಾದ ಥೀಮ್‌ ಅವರ ಕಠಿಣ ಸವಾಲನ್ನು ಮೆಟ್ಟಿನಿಂತರು. ಈ ಮೂಲಕ 12 ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ವಿಶ್ವದ ಏಕಮಾತ್ರ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. ಕಳೆದ ವರ್ಷವೂ ಫೈನಲ್‌ ತಲುಪಿ ರನ್ನರ್‌ಅಪ್‌ ಸ್ಥಾನ ಪಡೆದಿದ್ದ 24 ವರ್ಷದ ಯುವ ಪ್ರತಿಭೆ ಥೀಮ್‌ ಈ ಬಾರಿಯೂ ಅದೇ ಫಲಿತಾಂಶಕ್ಕೆ ತೃಪ್ತಿಪಟ್ಟಿದ್ದಾರೆ.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

ಈ ಗೆಲುವಿನೊಂದಿಗೆ ವೃತ್ತಿ ಬದುಕಿನಲ್ಲಿ 18ನೇ ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಡಾಲ್‌, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆದ್ದವರ ಪೈಕಿ ರೋಜರ್‌ ಫೆಡರರ್‌ (20) ಅವರಿಗಿಂತಲೂ ಕೇವಲ 2 ಪ್ರಶಸ್ತಿಗಳ ಅಂತರಕ್ಕೆ ತಲುಪಿದ್ದಾರೆ. ಮತ್ತು ವಿಶ್ವದ ಹಾಲಿ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ (15) ಅವರಿಗಿಂತಲೂ 3 ಪ್ರಶಸ್ತಿಗಳ ಮುನ್ನಡೆ ಪಡೆದಿದ್ದಾರೆ.

ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!

"ಡಾಮಿನಿಕ್‌ ಅವರಿಗೆ ಶುಭಾಶಯ ಹೇಳಲು ಬಯಸುತ್ತೇನೆ. ಈ ಗೆಲುವಿಗೆ ಅವರೂ ಕೂಡ ಅರ್ಹರಾಗಿದ್ದರು. ಭವಿಷ್ಯದಲ್ಲಿ ಅವರು ಖಂಡಿತಾ ಜಯ ದಾಖಲಿಸುತ್ತಾರೆ. ಅವರು ಅದ್ಭುತ ಪ್ರತಿಭೆ. ಭವಿಷ್ಯದಲ್ಲಿ ಅವರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ನಡಾಲ್‌ ಎದುರಾಳಿ ಥೀಮ್‌ ಅವರನ್ನು ಹೊಗಳಿದ್ದಾರೆ.

ನಡಾಲ್‌ ಸಾಧನೆಯ ಪ್ರಮುಖ ಅಂಕಿ ಅಂಶಗಳ ದಾಖಲೆ ಇಲ್ಲಿದೆ.

18

ನಡಾಲ್‌ ತಮ್ಮ ವೃತ್ತಿ ಬದುಕಿನಲ್ಲಿ ಗೆದ್ದಿರುವ ಒಟ್ಟು ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿಗಳು.
ಆಸ್ಟ್ರೇಲಿಯನ್‌ ಓಪನ್‌ (01)
ಫ್ರೆಂಚ್‌ ಓಪನ್‌ (12)
ವಿಂಬಲ್ಡನ್‌ (02)
ಯುಎಸ್‌ ಓಪನ್‌ (03)

12

ಫ್ರೆಂಚ್‌ ಓಪನ್‌ನಲ್ಲಿ ನಡಾಲ್‌ ಗೆದ್ದಿರುವ ಒಟ್ಟು ಪ್ರಶಸ್ತಿಗಳು (2005, 2006, 2007, 2008, 2010, 2011, 2012, 2013, 2014, 2017, 2018, 2019).

742 ಕೋಟಿ ರೂ.

ರಾಫೆಲ್‌ ನಡಾಲ್‌ ತಮ್ಮ ಬೃತ್ತಿ ಬದುಕಿನಲ್ಲಿ ಗೆದ್ದಿರುವ ಒಟ್ಟು ಬಹುಮಾನ ಮೊತ್ತ. ಭಾನುವಾರ ಗೆದ್ದ ಫ್ರೆಂಚ್‌ ಓಪನ್‌ ಪ್ರಶಸ್ತಿಯೊಂದಿಗೆ 18 ಕೋಟಿ ರೂ. ಜೇಬಿಗಿಳಿಸಿದ್ದಾರೆ. ರನ್ನರ್‌ಅಪ್‌ ಸ್ಥಾನ ಪಡೆದ ಥೀಮ್‌ಗೆ 9 ಕೋಟಿ ರೂ. ಬಹುಮಾನ ಸಿಕ್ಕಿದೆ.

ಸಾರ್ವಕಾಲಿಕ ಅತಿ ಹೆಚ್ಚು ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದ ಅಗ್ರ ಐವರು

1. ರೋಜರ್‌ ಫೆಡರರ್‌ (ಸ್ವಜರ್ಲೆಂಡ್‌): 20
2. ರಾಫೆಲ್‌ ನಡಾಲ್‌ (ಸ್ಪೇನ್‌): 18
3. ನೊವಾಕ್‌ ಜೊಕೊವಿಕ್‌ (ಸರ್ಬಿಯಾ): 15
4. ಪೀಟ್‌ ಸ್ಯಾಂಪ್ರಸ್‌ (ಅಮೆರಿಕ): 14
5. ರಾಯ್‌ ಎಮರ್ಸನ್‌ (ಆಸ್ಟ್ರೇಲಿಯಾ): 12

Story first published: Sunday, June 9, 2019, 22:52 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X