ಚಿನ್ನದ ಪದಕ ಕೊಡಗಿನ ಸಂತ್ರಸ್ತರಿಗೆ ಅರ್ಪಿಸಿದ ರೋಹನ್ ಬೋಪಣ್ಣ

ಜಖಾರ್ತ, ಆಗಸ್ಟ್ 25: ಏಷಿಯನ್ ಗೇಮ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ರೋಹನ್ ಬೋಪಣ್ಣ ಅವರು ಪದಕವನ್ನು ಕೊಡಗು ನೆರೆ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.
ಕೊಡಗಿನವರೇ ಆದ ರೋಹನ್ ಬೋಪಣ್ಣ ಅವರು, ಜಖಾರ್ತಾದಲ್ಲಿದ್ದರೂ ನನ್ನ ಮನಸ್ಸು ಕೊಡಗಿನಲ್ಲೇ ಇದೆ. ಕುಟುಂಬಕ್ಕೆ ಸ್ನೇಹಿತರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳತ್ತಲೇ ಇದ್ದೇನೆ ಎಂದು ಅವರು ಹೇಳಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ರೋಹನ್ ಬೋಪಣ್ಣ ಅವರು ದಿವಿಜ್ ಅವರ ಜೊತೆ ಡಬಲ್ಸ್ ಟೆನ್ನಿಸ್‌ನಲ್ಲಿ ನಿನ್ನೆ ಚಿನ್ನದ ಪದಕ ಗೆದ್ದಿದ್ದರು. ಈಗ ಅದನ್ನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿದ್ದಾರೆ.
ಕರ್ನಾಟಕ ಜನರ ಪ್ರೀತಿ, ಕೊಡಗಿನ ಜನರು ತೋರಿದ ಅಕ್ಕರೆಯಿಂದ ಪದಕ ಗೆಲ್ಲುವುದು ಸಾಧ್ಯವಾಗಿದೆ ಹಾಗಾಗಿ ಈ ಪದಕವನ್ನು ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಚಿನ್ನ ಗೆದ್ದ ಬೋಪಣ್ಣ ಮತ್ತು ದಿವಿಜ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
Story first published: Saturday, August 25, 2018, 10:20 [IST]
Other articles published on Aug 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications