ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶರಪೋವಾ ಎದುರಿನ ಕುತೂಹಲಕಾರಿ ಆಟದಿಂದ ಹಿಂಸರಿದ ಸೆರೆನಾ

ಶರಪೋವಾ ಎದುರಿನ ಕುತೂಹಲಕಾರಿ ಆಟದಿಂದ ಹಿಂಸರಿದ ಸೆರೆನಾ | Oneindia Kannada
Serena Williams pulls out of Maria Sharapova French Open clash

ಪ್ಯಾರೀಸ್, ಜೂ. 4: ರಷ್ಯಾ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ವಿರುದ್ಧ ಆಡಲಿದ್ದ ರೋಲ್ಯಾಂಡ್ ಗ್ಯಾರೋಸ್ (ಪ್ರೆಂಚ್ ಓಪನ್) ನಾಲ್ಕನೇ ಸುತ್ತಿನ ಪಂದ್ಯದಿಂದ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ತಾನು ಈ ಮಹತ್ವದ ಪಂದ್ಯದಿಂದ ಹಿಂಸರಿಯುತ್ತಿರುವುದಾಗಿ ಸೆರೆನಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದಿದ್ದ ಸೆರೆನಾ, ತೋಳಿನ ಗಾಯದ ಸಮಸ್ಯೆಯಿಂದಾಗಿ ಶರಪೋವಾ ಎದುರಿನ ಪಂದ್ಯವನ್ನಾಡಲು ತನಗೆ ತಾಧ್ಯವಾಗುತ್ತಿಲ್ಲ. ತಾನು ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ನಾಲ್ಕನೇ ಸುತ್ತಿನಲ್ಲಿ ಶರಪೋವಾ-ಸೆರೆನಾ ಮುಖಾಮುಖಿಯಾಗಿದ್ದು ಪಂದ್ಯ ತುಂಬಾ ಕುತೂಹಲ ಮೂಡಿಸಿತ್ತು. ಹಿಂದಿನ ಮುಖಾಮುಖಿಗಳ ಹೆಚ್ಚಿನ ಪಂದ್ಯಗಳಲ್ಲಿ ಶರಪೋವಾ ಸೋತಿದ್ದರು. ಹೀಗಾಗಿ ಶರಪೋವಾ ಇಂದಿನ ಪಂದ್ಯದಲ್ಲಿ ಸೆರೆನಾ ಎದುರು ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿದ್ದರು.

ಶನಿವಾರ ನಡೆದ 3ನೇ ಸುತ್ತಿನ ಸ್ಪರ್ಧೆಯಲ್ಲಿ ಸೆರೆನಾ, ಜೂಲಿಯಾ ಜಾರ್ಜಸ್ ವಿರುದ್ಧ ಜಯ ಸಾಧಿಸಿದ್ದರು. ಮಾಜಿ ವಿಶ್ವ ನಂ. 1 ಆಟಗಾರ್ತಿ ಸೆರೆನಾ 4ನೇ ಸುತ್ತಿನ ಸ್ಪರ್ಧೆಯಲ್ಲಿ ರಷ್ಯಾ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಎದುರುಗೊಳ್ಳುವುದರಲ್ಲಿದ್ದರು. 3ನೇ ಸುತ್ತಿನ ಹಣಾಹಣಿಯಲ್ಲಿ ಶರಪೋವಾ ಅವರು ಜೆಕ್ ಆಟಗಾರ್ತಿ ಕ್ರಿಸ್ಟೀನಾ ಪ್ಲಿಸ್ಕೋವಾ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದ್ದರು. ಆದರೆ ಇಬ್ಬರು ಸ್ಟಾರ್ ಆಟಗಾರ್ತಿಯರ ಸೆಣಸಾಟ ಕಾಣಲು ಕ್ರೀಡಾಭಿಮಾನಿಗಳಿಗೆ ಸಾಧ್ಯವಾಗಿಲ್ಲ.

ಫ್ರೆಂಚ್ ಓಪನ್ ಆರಂಭಿಕ ಪಂದ್ಯದಲ್ಲಿ ಸೆರೆನಾ ವಿಭಿನ್ನ ದಿರಿಸಿನಲ್ಲಿ ಮಿಂಚಿದ್ದರು. ಬ್ಲ್ಯಾಕ್ ಪ್ಯಾಂಥರ್ ಕ್ಯಾಟ್ ಸೂಟ್ ನಲ್ಲಿ ಸೆರೆನಾ ಆವೆಮಣ್ಣಿನಂಗಳಕ್ಕೆ ಇಳಿದ್ದಷ್ಟೇ ಅಲ್ಲ, ಆರಂಭಿಕ ಪಂದ್ಯದಲ್ಲೇ ಜೆಕ್ ಆಟಗಾರ್ತಿ ಕ್ರಿಸ್ಟೀನಾ ಪ್ಲಿಸ್ಕೋವಾ ವಿರುದ್ಧ ಗೆದ್ದು ಆರ್ಭಟಿದ್ದರು.

ಫ್ರೆಂಚ್ ಓಪನ್ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಯೋಜನೆ ಹಾಕಿಕೊಂಡಿದ್ದ ಸೆರೆನಾ ಅಂದುಕೊಂಡಂತೆಯೇ ಗೆಲುವಿನ ದಾರಿಯಲ್ಲಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಈಗ ಅವರಿಗೆ ಹಿನ್ನಡೆಯಾಗಿದೆ.

Story first published: Monday, June 4, 2018, 19:56 [IST]
Other articles published on Jun 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X