ರಾಜಮನೆತನದ ಭಯಾನಕ ಸತ್ಯ ಬಿಚ್ಚಿಟ್ಟ ಮೇಘನ್ ಮಾರ್ಕೆಲ್‌ಗೆ ಸೆರೆನಾ ವಿಲಿಯಮ್ಸ್ ಬೆಂಬಲ

ಖ್ಯಾತ ನಿರೂಪಕಿ ಓಫ್ರಾ ವಿನ್‌ಫ್ರೇಗೆ ಬ್ರಿಟನ್ ಪ್ರಿನ್ಸ್ ಹ್ಯಾರಿ ಹಾಗೂ ಪತ್ನಿ ಮೇಘನ್ ಮಾರ್ಕೆಲ್ ನೀಡಿದ ಸಂದರ್ಶನ ಈಗ ವಿಶ್ವಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ರಾಜಮನೆತನದಿಂದ ಜನಾಂಗೀಯ ತಾರತಮ್ಯದಂತಾ ವಿಲಕ್ಷಣ ಘಟನೆಗಳಿಗೆ ಒಳಗಾಗಿದ್ದೇನೆ ಎಂಬ ಮೇಘನ್ ಮಾರ್ಕೆಲ್ ಅವರ ಆರೋಪ. ಈ ಬಗ್ಗೆ ಅಮೆರಿಕಾದ ದಿಗ್ಗಜ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ.

ದಿಗ್ಗಜ ಟೆನ್ನಿಸ್ ಆಟಗಾರ್ತಿಯಾಗಿದ್ದರೂ ಟೆನ್ನಿಸ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಬಾರಿ ಜನಾಂಗೀಯ ನಿಂದನೆಗಳಿಗೆ ಒಳಗಾದ ಸೆರೆನಾ ವಿಲಿಯಮ್ಸ್ ತನ್ನನ್ನು ಮೇಘನ್ ಮಾರ್ಕೆಲ್ ಅವರೊಂದಿಗೆ ಗುರುತಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಇಬ್ಬರೂ ಸೆಕ್ಸಿಸ್ಟ್ ಹಾಗೂ ಜನಾಂಗೀಯ ನಿಂದನೆ ವಿರುದ್ಧ ಇಬ್ಬರೂ ಹೋರಾಡುತ್ತಿರುವುದಾಗಿ ಸೆರೆನಾ ಪ್ರತಿಕ್ರಿಯಿಸಿದ್ದಾರೆ.

ನೊವಾಕ್ ಜೊಕೋವಿಕ್‌ಗೆ 9ನೇ ಆಸ್ಟ್ರೇಲಿಯನ್ ಓಪನ್ ಕಿರೀಟ!

ಆಫ್ರಿಕನ್-ಅಮೆರಿಕನ್ ಮೂಲದವರಾದ ಮೇಘನ್ 2018ರಲ್ಲಿ ಪ್ರಿನ್ಸ್ ಹ್ಯಾರಿಯನ್ನು ವರಿಸಿದ ನಂತರ ಬ್ರಿಟಿಷ್ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಟ್ಯಾಬ್ಲಾಯ್ಡ್‌ಗಳಿಂದ ಸೆಕ್ಸಿಸ್ಟ್ ಮತ್ತು ಜನಾಂಗೀಯವಾಗಿ ಸಾಕಷ್ಟು ನಿಂದನೆಗೆ ಗುರಿಯಾದರು. ರಾಜಮನೆತನದ ಭಾಗವಾದೆ ಎಂಬ ಕಾರಣಕ್ಕೆ ನಕಾರಾತ್ಮಕ ಮಾಧ್ಯಮ ಪ್ರಸಾರಗಳಿಂದಾಗಿ ತಾನು ಆತ್ಮಹತ್ಯೆಯಂತಾ ಯೋಚನೆಗಳನ್ನು ಹೊಂದಿದ್ದೆ ಎಂಬುದಾಗಿ ಮೇಘನ್ ಓಪ್ರಾ ವಿನ್‌ಫ್ರೇ ಜೊತೆಗೆ ಹಂಚಿಕೊಂಡಿದ್ದರು. ಇದರ ಜೊತೆಗೆ ರಾಜ ಮನೆತನ ತನ್ನೊಂದಿಗೆ ವರ್ತಿಸಿದ ರೀತಿಯನ್ನೂ ಮೇಘನ್ ವಿವರವಾಗಿ ಬಿಚ್ಚಿಟ್ಟಿದ್ದಾರೆ.

ಸೆರೆನಾ ವಿಲಿಯಮ್ಸ್ ಈ ಸಂದರ್ಶನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೇಘನ್ ಮಾರ್ಕೆಲ್ ಅವರನ್ನು ತನ್ನ ನಿಸ್ವಾರ್ಥ ಗೆಳತಿ ಎಂದಿದ್ದು "ಆಕೆ ತನ್ನ ಜೀವನವನ್ನು ಉದಾಹರಣೆಯಂತೆ ಸಾಗಿಸುತ್ತಿದ್ದಾರೆ. ಉದಾರ ಮನೋಭಾವದಿಂದ ಜೀವನ ಸಾಗಿಸುತ್ತಿರುವುದರಿಂದಾಗಿ ಏನು ಪಡೆಯುತ್ತೇವೆ ಎಂಬುದನ್ನು ನಿತ್ಯವೂ ಅರ್ಥೈಸಿದ್ದಾರೆ. ಆಕೆಯ ಮಾತುಗಳು ಆಕೆ ಅನುಭವಿಸಿದ ನೋವು ಮತ್ತು ನಿರ್ದಯತೆಯನ್ನು ವ್ಯಕ್ತಪಡಿಸುತ್ತಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

2014ರಲ್ಲಿ ಮೇಘನ್ ಮಾರ್ಕೆಲ್ ಹಾಗೂ ಸೆರೆನಾ ವಿಲಿಯಮ್ಸ್ ಭೇಟಿಯಾಗಿ ಬಳಿಕ ಆಪ್ತ ಗೆಳತಿಯರಾದರು. 2018ರಲ್ಲಿ ಮೇಘನ್ ಅವರ ರಾಯಲ್ ವೆಡ್ಡಿಂಗ್‌ಗೆ ಆಹ್ವಾನವನ್ನು ಪಡೆದುಕೊಂಡವರಲ್ಲಿ ಸೆರೆನಾ ಕೂಡ ಒಬ್ಬರು. ಈಗ ತನ್ನ ಆಪ್ತ ಗೆಳತಿಯ ವಿಚಾರವಾಗಿ ಸೆರೆನಾ ಧ್ವನಿಯೆತ್ತಿದ್ದಾರೆ. ಭಾನುವಾರ ಸಿಬಿಎಸ್‌ ವಾಹಿನಿಯಲ್ಲಿ ಪ್ರಸಾರವಾದ ಈ ಸಂದರ್ಶನದಲ್ಲಿ ಪ್ರಿನ್ಸ್ ಹ್ಯಾರಿ ಕೂಡ ಭಾಗಿಯಾಗಿದ್ದರು.

For Quick Alerts
ALLOW NOTIFICATIONS
For Daily Alerts
Story first published: Monday, March 8, 2021, 16:38 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X