ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಸ್ವಿಟ್ಜರ್ಲ್ಯಾಂಡ್‌ ತಂಡದಲ್ಲಿ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್

Tokyo olympics: Roger Federer to be represent Switzerland team

ಟೆನ್ನಿಸ್ ಲೋಕದ ದಂತಕತೆ ರೋಜರ್ ಫೆಡರರ್ ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಸ್ವಿಸ್ ಒಲಿಂಪಿಕ್ಸ್ ಅಸೋಸಿಯೇಶನ್ ಸೋಮವಾರ ಟೆನ್ನಿಸ್ ತಂಡವವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಫೆಡರರ್ ಕೂಡ ಭಾಗವಾಗಿದ್ದಾರೆ. ಈ ಮೂಲಕ ಫೆಡರರ್ ಮೂರನೇ ಬಾರಿಗೆ ಫೆಡರರ್ ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ.

20 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿರುವ ದಾಖಲೆ ಹೊಂದಿರುವ ರೋಜರ್ ಫೆಡರರ್ ಈಗ ವಿಂಬಲ್ಡನ್‌ನಲ್ಲಿ ಆಡುತ್ತಿದ್ದಾರೆ. ಸೋಮವಾರ ನಡೆಯುವ ಪಂದ್ಯದಲ್ಲಿ ಲಾರೆನ್ಸೋ ಸೊನೆಗೋ ವಿರುದ್ಧ ಸೆಣೆಸಾಡಲಿದ್ದಾರೆ. ಲಾರೆನ್ಸ್ ಸೊನೆಗೋ ಕೂಡ ಜಪಾನ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಇಟೆಲಿಯನ್ನು ಪ್ರತಿನಿಧಿಸಲಿದ್ದಾರೆ.

ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟುದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು

39ರ ಹರೆಯದ ರೋಜರ್ ಫೆಡರರ್ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾ ಕೂಡ ಅಂತ್ಯದ ವೇಳೆಗೆ 40ನೇ ವರ್ಷಕ್ಕೆ ಕಾಲಿಡಲಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ತನ್ನ ಜೊತೆಗಾರ ಸ್ಟ್ಯಾನ್ ವಾರ್ವಿಂಕಾ ಜೊತೆಗೆ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಮೊಣಕಾಲಿನ ಗಾಯದಿಂದಾಗಿ 2016ರ ರಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು.

ಸ್ವಿಸ್ ಪುರುಷರ ತಂಡದಲ್ಲಿರುವ ಏಕೈಕ ಸದಸ್ಯನಾಗಿದ್ದಾರೆ ರೋಜರ್ ಫೆಡರರ್. ಮಹಿಳಾ ತಂಡದಲ್ಲಿ ಬೆಲಿಂಡಾ ಬೆನ್ಸಿಕ್ ಮತ್ತು ವಿಕ್ಟೊರಿಜಾ ಗೊಲುಬಿಕ್ ಸ್ವಿಟ್ಜರ್ಲ್ಯಾಂಡ್ ತಂಡವನ್ನು ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರತಿನಿಧಿಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್ ಸ್ಪರ್ಧೆ ಜುಲೈ 24ರಿಂದ ಆರಂಭವಾಗಲಿದ್ದು ಆಗಸ್ಟ್ 1ರಂದು ಅಂತ್ಯವಾಗಲಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಸ್ಪರ್ಧೆ, ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಸ್ಪರ್ಧೆ ಹಾಗೂ ಮಿಕ್ಸ್‌ಡ್ ಡಬಲ್ಸ್ ಸ್ಪರ್ಧೆ ಇರಲಿದೆ. ಜುಲೈ 23ರಿಂದ ಆರಂಭವಾಗುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವಿಟ್ಜರ್ಲ್ಯಾಂಟ್‌ನ 116 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Story first published: Monday, July 5, 2021, 17:35 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X