ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಜಾಗೃತಿಗಾಗಿ 'ಟಾಪ್ ಲೆಸ್' ಆದ ಟೆನಿಸ್ ತಾರೆ ಸೆರೆನಾ

Topless, singing Serena sparks internet breast cancer stir

ಸಿಡ್ನಿ, ಸೆಪ್ಟೆಂಬರ್ 30: ಸ್ತನ ಕ್ಯಾನ್ಸರ್ ಕುರಿತ ಜಾಗೃತಿಗಾಗಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಟಾಪ್​ಲೆಸ್​ಆಗಿ ಪೋಸ್ ನೀಡಿದ್ದಾರೆ. ಜೊತೆಗೆ ಸಂದೇಶವನ್ನು ಸಾರುವ ಹಾಡೊಂದನ್ನು ಹಾಡಿದ್ದಾರೆ. ಸೆರೆನಾ ಹಾಕಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

ಸೆರೆನಾ ಅವರು ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ವಿಡಿಯೋದಲ್ಲಿ, ಸೆರೆನಾ ತಮ್ಮ ಸ್ತನಗಳನ್ನು ಕೈನಿಂದ ಮುಚ್ಚಿಕೊಂಡು, 1991ರಲ್ಲಿ ಆಸ್ಟ್ರೇಲಿಯನ್ ಬ್ಯಾಂಡ್​ನ ಜನಪ್ರಿಯ ಗೀತೆಯೊಂದನ್ನು ಹಾಡುವುದನ್ನು ಕಾಣಬಹುದು.

ಪಂದ್ಯದ ವೇಳೆ ರೇಗಾಡಿದ ಸೆರೆನಾ, ಒಸಾಕಾ ಯುಎಸ್ ಓಪನ್ ಚಾಂಪಿಯನ್ ಪಂದ್ಯದ ವೇಳೆ ರೇಗಾಡಿದ ಸೆರೆನಾ, ಒಸಾಕಾ ಯುಎಸ್ ಓಪನ್ ಚಾಂಪಿಯನ್

ಸ್ತನ ಕ್ಯಾನ್ಸರ್​ ಕುರಿತ 'ಐ ಟಚ್​ ಮೈಸೆಲ್ಫ್' ಹಾಡನ್ನು ಬಳಸಿಕೊಂಡು, ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತರಾಗಿರಬೇಕು. ತಮ್ಮ ಸ್ತನಗಳನ್ನು ನಿಯಮಿತವಾಗಿ ಸ್ವಯಂ ಪರೀಕ್ಷಿಸಿಕೊಳ್ಲಬೇಕು. ಈ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಲ್ಲಿ ನಾನು 'ಐ ಟಚ್ ಮೈಸೆಲ್ಫ್' ಆವೃತ್ತಿಯನ್ನು ರೆಕಾರ್ಡ್ ಮಾಡಿದ್ದೀನಿ ಎಂದು ಹೇಳಿಕೊಂಡಿದ್ದಾರೆ.

ಸ್ತನ ಕ್ಯಾನ್ಸರ್ ವಿಶ್ವದ ಎಲ್ಲ ವರ್ಣದ ಮಹಿಳೆಯರಿಗೂ ಹಾನಿ ಮಾಡುತ್ತದೆ. ಹಾಗಾಗಿ ಈ ಕುರಿತು ಜಾಗೃತಿ ಮೂಡಿಸಲು, ನನ್ನ ಕಂಫರ್ಟ್ ಝೋನ್​ನಿಂದ ಹೊರ ಬಂದು ಈ ವಿಡಿಯೋ ಮಾಡಬೇಕಾಯಿತು. ಪ್ರಾಥಮಿಕ ಹಂತದ ರೋಗದ ಪತ್ತೆ ಅನೇಕ ಜೀವಗಳನ್ನು ಉಳಿಸುವ ಕೀಲಿ ಎಂದು ಹೇಳಿಕೊಂಡಿದ್ದಾರೆ.

ಸೆರೆನಾ ಈ ವಿಡಿಯೋ ಪೋಸ್ಟ್ ಮಾಡಿದ 10 ಗಂಟೆಯೊಳಗೆ 1.3 ಮಿಲಿಯನ್​ಬಾರಿ ವೀಕ್ಷಿಸಲಾಗಿದೆ. ಹಾಗೇ ನೆಟ್ಟಿಗರು ಸೆರೆನಾ ಕಾರ್ಯಕ್ಕೆ ಮತ್ತು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆರೆನಾ ಅವರ ದಿಟ್ಟತನ ಹಾಗೂ ಜಾಗೃತಿ ಮೂಡಿಸುವ ವಿಧಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಂಬಲ್ಡನ್ ಸೋತ ಸೆರೆನಾ ಅವರಿಂದ ಅಮ್ಮಂದಿರಿಗೊಂದು ಸಂದೇಶ! ವಿಂಬಲ್ಡನ್ ಸೋತ ಸೆರೆನಾ ಅವರಿಂದ ಅಮ್ಮಂದಿರಿಗೊಂದು ಸಂದೇಶ!

ಯುಎಸ್ ಓಪನ್ ಫೈನಲ್ ಪಂದ್ಯ ಸೋತು, ಸಿಟ್ಟಿಗೆದ್ದು ರಂಪಾಟ ಮಾಡಿಕೊಂಡಿದ್ದ ಸೆರೆನಾ ಅವರು ನಾಲ್ಕು ದಿನಗಳ ಮುಂಚೆ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Story first published: Sunday, September 30, 2018, 17:03 [IST]
Other articles published on Sep 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X