ಯುಎಸ್ ಓಪನ್: ನಡಾಲ್‌ಗೆ ಆಘಾತ ನೀಡಿದ ಫ್ರಾನ್ಸಿಸ್ ಟೈಫೋ: 4ನೇ ಸುತ್ತಿನಲ್ಲಿ ಹೊರಬಿದ್ದ ದಿಗ್ಗಜ

ದಿಗ್ಗಜ ಆಟಗಾರ ರಾಫೆಲ್ ನಡಾಲ್ ಯುಎಸ್ ಓಪನ್‌ನ 2022ರ ಆವೃತ್ತಿಯಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಅಮೆರಿಕಾದ ಯುವ ಆಟಗಾರ ಫ್ರಾನ್ಸಿಸ್ ಟೈಫೋ ವಿರುದ್ಧ ನಡೆದ ಪಂದ್ಯದಲ್ಲಿ ನಡಾಲ್ ಸೋಲು ಅನುಭವಿಸಿದ್ದು ಹೊರಬಿದ್ದಿದ್ದಾರೆ. ಈ ಗೆಲುವಿನಿಂದಿಗೆ ಟೈಫೋ ಚೊಚ್ಚಲ ಬಾರಿಗೆ ತವರು ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ನಡೆದ ಸೆಣೆಸಾಟದಲ್ಲಿ ಅಮೆರಿಕಾದ ಯುವ ಆಟಗಾರ 22 ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್ ರಾಫೆಲ್ ನಡಾಲ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಯುಎಸ್ ಓಪನ್‌ನಲ್ಲಿ ಟೈಫೋ ಸತತ ಮೂರನೇ ಬಾರಿಗೆ ನಾಳ್ಕನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದರೂ ಕ್ವಾರ್ಟರ್‌ಫೈನಲ್‌ಗೇರಿದ್ದು ಇದು ಮೊದಲ ಬಾರಿಯಾಗಿದೆ.

ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!

ಫ್ರಾನ್ಸಿಸ್ ಟೈಫೋ ಭರ್ಜರಿ ಪ್ರದರ್ಶನ

ಫ್ರಾನ್ಸಿಸ್ ಟೈಫೋ ಭರ್ಜರಿ ಪ್ರದರ್ಶನ

ರಾಫೆಲ್ ನಡಾಲ್ ಹಾಗೂ ಫ್ರಾನ್ಸಿಸ್ ಟೈಫೋ ಇದಕ್ಕೂ ಮುನ್ನ ಎರಡು ಬಾರಿ ಮೂಖಾಮುಖಿಯಾಗಿದ್ದರು. ಆ ಎರಡು ಬಾರಿಯೂ ರಾಫೆಲ್ ನಡಾಲ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ದಿಗ್ಗಜ ಆಟಗಾರನಿಗೆ 24ರ ಹರೆಯದ ಯುವ ಆಟಗಾರ ಅದ್ಭುತ ಪೈಪೋಟಿ ನೀಡಿದ್ದು ಸೋಲಿನ ರುಚಿ ತೋರಿಸಿದ್ದಾರೆ. 6-4, 4-6, 6-4, 6-3 ಅಂತರದಿಂದ ಫ್ರಾನ್ಸಿಸ್ ಟೂಫೋ ಗೆಲುವು ಸಾಧಿಸಿದ್ದಾರೆ.

ಬಲಿಷ್ಠ ಪ್ರದರ್ಶನ ನೀಡಿದ ಯುವ ಆಟಗಾರ

ಬಲಿಷ್ಠ ಪ್ರದರ್ಶನ ನೀಡಿದ ಯುವ ಆಟಗಾರ

ಅಮೆರಿಕದ ಆಟಗಾರ ಪಂದ್ಯದುದ್ದಕ್ಕೂ ಬಲಿಷ್ಠವಾಗಿ ಕಂಡು ಬಂದಿದ್ದರು. ಈ ಮುಖಾಮುಖಿಯಲ್ಲಿ ನಡಾಲ್ ಅವರ ಸರ್ವ್ ಅನ್ನು ಎಂಟರಲ್ಲಿ ಐದು ಬಾರಿ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರ ಕೆಲವು ಕಳಪೆ ಸರ್ವಿಂಗ್ ಮತ್ತು ರಿಟರ್ನ್ ಪ್ರದರ್ಶನವನ್ನು ಅದ್ಭುತವಾಗಿ ಬಳಸಿಕೊಂಡ ಟೈಫೋ ಎದುರಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಈ ಮುಖಾಮುಖಿಯಲ್ಲಿ ನಡಾಲ್ ಒಟ್ಟು ಒಂಬತ್ತು ಡಬಲ್ ಫಾಲ್ಟ್‌ಗಳನ್ನು ಮಾಡಿದ್ದಾರೆ.

ಎರಡನೇ ಸೆಟ್ ನಡಾಲ್ ವಶಕ್ಕೆ

ಎರಡನೇ ಸೆಟ್ ನಡಾಲ್ ವಶಕ್ಕೆ

ಟೈಫೋ ಈ ಪಂದ್ಯದಲ್ಲಿ ಆರಂಭದಿಂದಲೂ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಸೆಟ್ ಅನ್ನು 6-4 ಅಂಕಗಳೊಂದಿಗೆ ವಶಕ್ಕೆ ಪಡೆದ ಬಳಿಕ ಎರಡನೇ ಸೆಟ್‌ನಲ್ಲಿ ನಡಾಲ್ ಕಮ್‌ಬ್ಯಾಕ್ ಮಾಡಿದರು. ಎರಡನೇ ಸೆಟ್ 6-4 ಅಂತರದಿಂದ ನಡಾಲ್ ವಶವಾಯಿತು. ಆದರೆ ಮುಂದಿನ ಎರಡು ಸೆಟ್‌ಗಳಲ್ಲಿ ನಡಾಲ್ ಅವರನ್ನು ಮತ್ತೆ ಹಿಮ್ಮೆಟ್ಟಿಸಿದ ಅಮೆರಿಕಾದ ಯುವ ಆಟಗಾರ ಗೆಲುವು ಸಾಧಿಸಿದರು.

ನಡಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದ ಟೈಫೋ

ನಡಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದ ಟೈಫೋ

ಇನ್ನು ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಫ್ರಾನ್ಸಿಸ್ ಟೈಫೋ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಗೆಲುವಿನಿಂದಾಗಿ ತಾನು ಭಾವುಕನಾಗಿದ್ದೇನೆ ಎಂದು ಹೇಳಿರುವ ಟೈಫೋ ಈ ಗೆಲುವು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. "ನನಗೆ ಈ ಸಂದರ್ಭದಲ್ಲಿ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಖುಷಿಗೂ ಮೀರಿದ ಅನುಭವವಾಗುತ್ತಿದೆ. ಬಹುತೇಕ ಕಣ್ಣೀರು ಬರುತ್ತಿದೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಖಂಡಿತವಾಗಿಯೂ ಒಬ್ಬರಾಗಿದ್ದಾರೆ. ನಾನಿಂದು ನಂಬಲು ಸಾಧ್ಯವಾಗದ ಪ್ರದರ್ಶನ ನೀಡಿದ್ದೇನೆ. ಏನಾಯಿತು ಎಂದು ನನಗೇ ತಿಳಿಯಲಿಲ್ಲ"ಎಂದಿದ್ದಾರೆ ಯುಎಸ್‌ನ ಯುವ ಆಟಗಾರ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 6, 2022, 10:03 [IST]
Other articles published on Sep 6, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X