ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮರ್ರೆ Vs ಫೆಡರರ್ : ನಿಮ್ಮ ಫ್ರೆಂಡ್ಲಿ ಬೆಟ್ಟಿಂಗ್ ಯಾರ ಮೇಲೆ?

By Mahesh

ಲಂಡನ್, ಜುಲೈ 09: ದಾಖಲೆಗಳ ಬೆನ್ನು ಹತ್ತಿರುವ ಸ್ವಿಜರ್ಲೆಂಡಿನ ವೀರ ರೋಜರ್ ಫೆಡರರ್ ಹಾಗೂ ಸ್ಥಳೀಯ ಹೀರೋ ಆಂಡಿ ಮರೆ ನಡುವಿನ ವಿಂಬಲ್ಡನ್ ಸೆಮಿಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಇನ್ನೊಂದೆಡೆ ವಿಶ್ವ ನಂ. 1 ಆಟಗಾರ ನೋವಾಕ್ ಜೋಕೊವಿಕ್ ಅವರು ಫ್ರಾನ್ಸ್​ನ ರಿಚರ್ಡ್ ಗ್ಯಾಸ್ಕೆವೆಟ್ ವಿರುದ್ಧ ಸೆಣಸಾಡಲಿದ್ದಾರೆ.

ಮೂರು ವರ್ಷದ ಹಿಂದೆ ಆಲ್ ಇಂಗ್ಲೆಂಡ್ ಕ್ಲಬ್​ನಲ್ಲೇ ತಮ್ಮ 17ನೇ ಗ್ರಾಂಡ್ ಸ್ಲಾಂ ಗೆದ್ದಿದ್ದ ಫೆಡರರ್, 8 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಆಟಗಾರ ಎನಿಸಿಕೊಳ್ಳಲು ಇನ್ನೆರಡೇ ಗೆಲುವು ಸಾಕಾಗಿದೆ. 33 ವರ್ಷದ ಫೆಡರರ್ 1 ಗಂಟೆ 34 ನಿಮಿಷಗಳ ಹೋರಾಟದಲ್ಲಿ 6-3, 7-5, 6-2 ರಿಂದ ಫ್ರಾನ್ಸ್​ನ ಜೈಲ್ಸ್ ಸಿಮೋನ್​ರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು.

ನಾಲ್ಕನೇ ಕ್ವಾರ್ಟರ್ ​ಫೈನಲ್ ಪಂದ್ಯದಲ್ಲಿ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಸ್ವಿಜರ್ಲೆಂಡ್​ನ ಸ್ಟ್ಯಾನಿಸ್ಲಾಸ್ ವಾವ್ರಿಂಕ ಆಘಾತ ಅನುಭವಿಸಿದರು. 3 ಗಂಟೆ 27 ನಿಮಿಷದ ಹೋರಾಟದಲ್ಲಿ ವಾವ್ರಿಂಕ 4-6, 6-4, 6-3, 4-6, 9-11 ರಿಂದ ಫ್ರಾನ್ಸ್​ನ ರಿಚರ್ಡ್ ಗ್ಯಾಸ್ಕೆವೆಟ್ ಗೆ ಶರಣಾದರು. ಈ ನಡುವೆ ಮಹಿಳಾ ಡಬಲ್ಸ್​ನಲ್ಲಿ ವಿಶ್ವ ನಂ.1 ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಸೆಮಿಫೈನಲ್​ಗೇರಿದೆ.

ಫ್ರೆಂಚ್ ಓಪನ್ ಚಾಂಪಿಯನ್ ಗೂ ಆಘಾತ

ಫ್ರೆಂಚ್ ಓಪನ್ ಚಾಂಪಿಯನ್ ಗೂ ಆಘಾತ

ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಸ್ವಿಜರ್ಲೆಂಡ್​ನ ಸ್ಟ್ಯಾನಿಸ್ಲಾಸ್ ವಾವ್ರಿಂಕ ಅವರು ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಆಘಾತ ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸುಮಾರು 3 ಗಂಟೆ 27 ನಿಮಿಷದ ಹೋರಾಟದಲ್ಲಿ ವಾವ್ರಿಂಕ 4-6, 6-4, 6-3, 4-6, 9-11 ರಿಂದ ಫ್ರಾನ್ಸ್​ನ ರಿಚರ್ಡ್ ಗ್ಯಾಸ್ಕೆವೆಟ್​ಗೆ ಶರಣಾದರು. ಗ್ಯಾಸ್ಕೆವೆಟ್ ಈಗ ಚಿತ್ರದಲ್ಲಿರುವ ಜೋಕವಿಕ್ ವಿರುದ್ಧ ಸೆಣಸಲಿದ್ದಾರೆ.

ರೋಜರ್ ಫೆಡರರ್

ರೋಜರ್ ಫೆಡರರ್

3ನೇ ಶ್ರೇಯಾಂಕದ ಆಂಡಿ ಮರ್ರೆ 2 ಗಂಟೆ 11 ನಿಮಿಷದ ಪಂದ್ಯದಲ್ಲಿ ಕೆನಡಾದ ವಾಸೆಕ್ ಪಾಸ್ಪಿಸಿಲ್​ರನ್ನು 6-4, 7-5, 6-4 ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಉಪಾಂತ್ಯದಲ್ಲಿ ಎರಡನೇ ಸೀಡ್ ನ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್​ಗೆ ಸಾನಿಯಾ-ಹಿಂಗಿಸ್

ಸೆಮಿಫೈನಲ್​ಗೆ ಸಾನಿಯಾ-ಹಿಂಗಿಸ್

ಮಹಿಳಾ ಡಬಲ್ಸ್​ನಲ್ಲಿ ವಿಶ್ವ ನಂ.1 ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಸೆಮಿಫೈನಲ್​ಗೇರಿತು.ಅಗ್ರಶ್ರೇಯಾಂಕದ ಜೋಡಿ 7-5, 6-3 ರಿಂದ 9ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಸೀಸಿ ಡೆಲೆಕ್ವಾ ಹಾಗೂ ಕಜಾಖಿಸ್ತಾನದ ಯಾರೋಸ್ಲಾವ ಶ್ವೆಡೋವ ಜೋಡಿಯನ್ನು ಮಣಿಸಿತು.5ನೇ ಶ್ರೇಯಾಂಕದ ಅಮೆರಿಕದ ರಾಕೆಲ್ ಕಾಪ್ಸ್ ಜೋನ್ಸ್ ಹಾಗೂ ಅಬಿಗೆಲ್ ಸ್ಪಿಯರ್ಸ್ ಜೋಡಿಯನ್ನು ಸಾನಿಯಾ ಹಾಗೂ ಹಿಂಗಿಸ್ ಎದುರಿಸಲಿದ್ದಾರೆ.

ಟೆನಿಸ್ ದಿಗ್ಗಜರ ಸಮಾಗಮ

ಟೆನಿಸ್ ದಿಗ್ಗಜರ ಸಮಾಗಮ

ಇಂಗ್ಲೆಂಡಿನ ಟಿಮ್ ಹೆನ್ಮನ್(ಎಡಗಡೆ) ಹಾಗೂ ಕ್ರೋಷಿಯಾದ ಗೋರಾನ್ ಇವಾನಿಸೆವಿಚ್(ಬಲಗಡೆ) ಅವರು ಯುವ ಟೆನಿಸ್ ಆಟಗಾರರನ್ನು ವಿಂಬಲ್ಡನ್ ಗೆ ತಯಾರಿ ಮಾಡುವ ಕಾಯಕದಲ್ಲಿ PTI Photo by Kamal Kishore

ಕ್ವಾರ್ಟರ್ ಫೈನಲಿನಲ್ಲಿ ಮರ್ರೆಗೆ ಸುಲಭ ಜಯ

ಕ್ವಾರ್ಟರ್ ಫೈನಲಿನಲ್ಲಿ ಮರ್ರೆಗೆ ಸುಲಭ ಜಯ

ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕದ ಆಂಡಿ ಮರ್ರೆ 2 ಗಂಟೆ 11 ನಿಮಿಷದ ಪಂದ್ಯದಲ್ಲಿ ಕೆನಡಾದ ವಾಸೆಕ್ ಪಾಸ್ಪಿಸಿಲ್​ರನ್ನು 6-4, 7-5, 6-4 ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ವಾವ್ರಿಂಕ ಸೋಲಿಸಿದ ಫ್ರೆಂಚ್ ಆಟಗಾರ

ವಾವ್ರಿಂಕ ಸೋಲಿಸಿದ ಫ್ರೆಂಚ್ ಆಟಗಾರ

ವಾವ್ರಿಂಕ ಸೋಲಿಸಿದ ಫ್ರೆಂಚ್ ಆಟಗಾರ ರಿಚರ್ಡ್ ಗ್ಯಾಸ್ಕೆವೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X