ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬಾಡ್ಮಿಂಟನ್ ಚಾಂಪಿಯನ್ : ಪಿವಿ ಸಿಂಧು ಬೆಳ್ಳಿಗೆ ತೃಪ್ತಿ, ಮರೀನ್ ಗೆ ಚಿನ್ನ

By Mahesh
BWF World Championships: Carolina Marin scripts history as PV Sindhu loses fourth final of 2018

ನಂಜಿಂಗ್(ಚೀನಾ), ಆಗಸ್ಟ್ 05: ಬಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಅವರನ್ನು ಸೋಲಿಸಿ, ಸ್ಪೇನಿನ ಮರೀನ್ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಮರೀನ್ ಅವರು 46 ನಿಮಿಷಗಳ ಪಂದ್ಯದಲ್ಲಿ 21-19, 21-10ರಲ್ಲಿ ಸಿಂಧು ವಿರುದ್ಧ ಗೆಲುವು ಸಾಧಿಸಿದರು.

ಈ ಮೂಲಕ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಗೆದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಸಿಂಧು ಅವರು ಸತತ ಎರಡನೇ ಬಾರಿಗೆ ಬೆಳ್ಳಿಗೆ ತೃಪ್ತಿಪಟ್ಟರು. ವಿಶ್ವದ ನಂ.3ನೇ ಆಟಗಾರ್ತಿ ಸಿಂಧು ಅವರು 2017ರ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಜಪಾನಿನ ನಜೋಮಿ ಒಕುಹರಾ ವಿರುದ್ಧ ಸೋಲು ಕಂಡಿದ್ದರು.

ವಿಶ್ವ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಿಂದ ಸೈನಾ ಹೊರಕ್ಕೆ! ವಿಶ್ವ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಿಂದ ಸೈನಾ ಹೊರಕ್ಕೆ!

25ವರ್ಷ ವಯಸ್ಸಿನ ಮರೀನ್ ಅವರು 2014 ಹಾಗೂ 2015ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ವಿರುದ್ಧವೇ ಗೆಲುವು ಸಾಧಿಸಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ಭಾನುವಾರದ ಪಂದ್ಯದಲ್ಲಿ ಸಿಂಧು ಅವರು ಮೊದಲ ಗೇಮ್ ನಲ್ಲಿ 11-8ರಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ 14-9ಕ್ಕೆ ಅಂಕಗಳು ಬಂದಿತ್ತು. ಆದರೆ, ಮರೀನ್ ವೇಗಕ್ಕೆ ಪ್ರತ್ಯುತ್ತರ ನೀಡಲಾಗದೆ ಶರಣಾದರು.

23 ವರ್ಷ ವಯಸ್ಸಿನ ಸಿಂಧು ಅವರು 2013 ಹಾಗೂ 2014ರಲ್ಲಿ ಕಂಚಿನ ಪದಕ ಹಾಗೂ 2017 ಹಾಗೂ 2018ರಲ್ಲಿ ಬೆಳ್ಳಿ ಪದಕ ಗೆದ್ದು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಶಿಪ್ ಪೋಡಿಯಂ ಏರಿದ ಸಾಧನೆ ಮಾಡಿದ್ದಾರೆ.

Story first published: Sunday, August 5, 2018, 16:22 [IST]
Other articles published on Aug 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X