ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

GPBL ಚೊಚ್ಚಲ ಬ್ಯಾಡ್ಮಿಂಟನ್ ಲೀಗ್: ಭಾನುವಾರ ನಡೆಯುವ ಹರಾಜಿನಲ್ಲಿ 200 ಆಟಗಾರರ ಅದೃಷ್ಟ ಪರೀಕ್ಷೆ

GPBL Auction

ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ (ಜಿಪಿಬಿಎಲ್) ನ ಉದ್ಘಾಟನಾ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಭಾನುವಾರ (ಜೂ. 12) ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆಯಲಿದೆ. ಸುಮಾರು 200 ಯುವ ಬ್ಯಾಡ್ಮಿಂಟನ್ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಆಗಲಿದ್ದಾರೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಬೆಂಬಲದೊಂದಿಗೆ ಜಿಪಿಬಿಎಲ್ ಎಂಟು ಫ್ರಾಂಚೈಸಿಗಳನ್ನು ಹೊಂದಿದೆ. ಬೆಂಗಳೂರು ಲಯನ್ಸ್, ಮಂಗಳೂರು ಶಾರ್ಕ್ಸ್, ಮಂಡ್ಯ ಬುಲ್ಸ್, ಮೈಸೂರು ಪ್ಯಾಂಥರ್ಸ್, ಮಲ್ನಾಡ್ ಫಾಲ್ಕನ್ಸ್, ಬಂಡೀಪುರ ಟಸ್ಕರ್ಸ್, ಕೆಜಿಎಫ್ ವೂಲ್ಫ್ಸ್ ಮತ್ತು ಕೊಡಗು ಟೈಗರ್ಸ್ ಅವರು ತಮ್ಮ ತಂಡಗಳನ್ನು ರಚಿಸಲು ಬಿಡ್ಡಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

"ನಮ್ಮಲ್ಲಿ ಅತ್ಯಂತ ಪ್ರತಿಭಾವಂತ ಆಟಗಾರರ ಬಳಗವಿದೆ. ಮೊದಲ ಋತುವಿನಲ್ಲಿ ಕರ್ನಾಟಕದ ಆಟಗಾರರನ್ನು ಮಾತ್ರ ಒಳಗೊಂಡಿರುತ್ತದೆ. GPBL ತರಬೇತುದಾರರ ಫಲಕ ಮತ್ತು ಆಡಳಿತ ಮಂಡಳಿಯೊಂದಿಗೆ ಎಲ್ಲಾ ನಮೂದುಗಳನ್ನು ಮೌಲ್ಯಮಾಪನ ಮಾಡಿದ ನಂತರ, ನಾವು ಆಟಗಾರರನ್ನು ಐಕಾನ್, ಶ್ರೇಣಿ-1 ಮತ್ತು ಶ್ರೇಣಿ-2 ವಿಭಾಗಗಳಾಗಿ ವರ್ಗೀಕರಿಸಿದ್ದೇವೆ. ಆಟಗಾರರ ಶ್ರೇಯಾಂಕ, ಪಂದ್ಯಾವಳಿಗಳಲ್ಲಿನ ಪ್ರದರ್ಶನ, ಕೌಶಲ್ಯ, ಸಕ್ರಿಯ ತರಬೇತಿ ಮತ್ತು ಆಟಗಾರರನ್ನು ಗುಂಪು ಮಾಡುವಾಗ ಗಾಯಗಳು ಸೇರಿದಂತೆ ಹಲವಾರು ಅಂಶಗಳನ್ನು ತರಬೇತುದಾರರು ಪರಿಗಣಿಸಿದ್ದಾರೆ"ಎಂದು ಸಿಇಒ ಬಿಟ್ಸ್‌ಪೋರ್ಟ್ ಮತ್ತು ಜಿಪಿಬಿಎಲ್ ಕಮಿಷನರ್ ಪ್ರಶಾಂತ್ ರೆಡ್ಡಿ ಹೇಳಿದರು.

ಪ್ರತಿ ತಂಡದಲ್ಲಿ 8 ಆಟಗಾರರು

ಪ್ರತಿ ತಂಡದಲ್ಲಿ 8 ಆಟಗಾರರು

ಪ್ರತಿ ತಂಡವು ತಲಾ ಗರಿಷ್ಠ ಎಂಟು ಆಟಗಾರರನ್ನು ಒಳಗೊಂಡಿರುತ್ತದೆ ಮತ್ತು ಒಬ್ಬ ಐಕಾನ್ ಪ್ಲೇಯರ್, ಕನಿಷ್ಠ ಇಬ್ಬರು ಟೈರ್-1 ಮತ್ತು ಟೈರ್-2 ಆಟಗಾರರು ಕ್ರಮವಾಗಿ ಮತ್ತು ಐಕಾನ್ ವಿಭಾಗ ಸೇರಿದಂತೆ ಕನಿಷ್ಠ ಇಬ್ಬರು ಮಹಿಳಾ ಆಟಗಾರರನ್ನು ಒಳಗೊಂಡಿರಬೇಕು.

ಪ್ರತಿ ತಂಡದಲ್ಲಿ ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಅಶ್ವಿನಿ ಪೊನಪ್ಪ, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಎಚ್‌ಎಸ್ ಪ್ರಣೋಯ್, ಪಿವಿ ಸಿಂಧು ಮತ್ತು ಜ್ವಾಲಾ ಗುಟ್ಟಾರಂತಹ ಸ್ಟಾರ್ ಮೆಂಟರ್ ಇದ್ದಾರೆ.

ಬೆಂಗಳೂರು ಲಯನ್ಸ್‌ನ ಮೆಂಟರ್ ಆಗಿ ಎರಡು ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಆಯ್ಕೆಯಾಗಿದ್ದು, ನಮ್ಮ ತಂಡದ ಆಟಗಾರರು ಯಾರು ಎಂಬುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಇದು ಮೊದಲ ಋತುವಾಗಿದ್ದು, ಬಹಳಷ್ಟು ಪ್ರತಿಭಾವಂತ ಆಟಗಾರರು ಇದ್ದಾರೆ ಮತ್ತು ಪ್ರತಿ ತಂಡವು ಸಮತೋಲಿತ ತಂಡವನ್ನು ಆಯ್ಕೆ ಮಾಡಲು ಎದುರು ನೋಡುತ್ತಿದೆ.

ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಪರ್ಸ್ ವ್ಯಾಲ್ಯೂ

ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಪರ್ಸ್ ವ್ಯಾಲ್ಯೂ

ಸಾಧನೆ ಮಾಡಿದ ಶಟ್ಲರ್‌ಗಳಾದ ಮಿಥುನ್ ಮಂಜುನಾಥ್, ರಘು ಮರಿಸ್ವಾಮಿ, ಡೇನಿಯಲ್ ಫರೀದ್, ಸನೀತ್ ದಯಾನಂದ್, ಪ್ರಕಾಶ್ ರಾಜ್, ಸಾಯಿ ಪ್ರತೀಕ್, ಜನನಿ ಅನಂತಕುಮಾರ್ ಮತ್ತು ತಾನ್ಯಾ ಹಿರೇಮಠ್ ಅವರಿಗೆ ಐಕಾನ್ ಆಟಗಾರರ ಸ್ಥಾನಮಾನ ನೀಡಲಾಗಿದೆ.

ಪ್ರತಿ ತಂಡಕ್ಕೆ ಆಟಗಾರರ ಪರ್ಸ್ ಗರಿಷ್ಠ 12 ಲಕ್ಷ ರೂ.ಗಳಾಗಿದ್ದರೆ, ಐಕಾನ್ ಆಟಗಾರರ ಮೂಲ ಬೆಲೆ ರೂ. 2.5 ಲಕ್ಷ ಮತ್ತು ಬಿಡ್ಡಿಂಗ್‌ನ ಗರಿಷ್ಠ ಮಿತಿ ರೂ. 3.5 ಲಕ್ಷ ರೂಪಾಯಿ ಆಗಿದೆ.

ಟೈರ್-1 ಆಟಗಾರರಿಗೆ ಕನಿಷ್ಠ ಬೆಲೆ 75,000 ರೂ.ಗೆ ನಿಗದಿಪಡಿಸಲಾಗಿದ್ದು, 2 ಲಕ್ಷ ರೂ. ಗರಿಷ್ಠ ಮಿತಿಗೊಳಿಸಲಾಗಿದೆ. ಇನ್ನು ಟೈರ್-3 ಆಟಗಾರರು ಕನಿಷ್ಠ ರೂ.25,000 ಮೂಲ ಬೆಲೆ ಮತ್ತು ಗರಿಷ್ಠ ರೂ. 50,000 ಮೊತ್ತ ಪಡೆಯುತ್ತಾರೆ.

ಪ್ರಶಸ್ತಿ ಮೊತ್ತ ಎಷ್ಟಿರಲಿದೆ?

ಪ್ರಶಸ್ತಿ ಮೊತ್ತ ಎಷ್ಟಿರಲಿದೆ?

ಒಟ್ಟು ಪ್ರಶಸ್ತಿ ಮೊತ್ತ 60 ಲಕ್ಷ ರೂಪಾಯಿ
ಲೀಗ್ ವಿಜೇತರಿಗೆ: 24 ಲಕ್ಷ ರೂಪಾಯಿ
ರನ್ನರ್ ಅಪ್: 12 ಲಕ್ಷ ರೂಪಾಯಿ
ಸೆಮಿಫೈನಲ್ ತಲುಪಿದವರಿಗೆ: 6 ಲಕ್ಷ ರೂಪಾಯಿ
ಐದನೇ ಸ್ಥಾನ ಪಡೆದವರಿಗೆ: 4 ಲಕ್ಷ ರೂಪಾಯಿ
ಕೊನೆಯ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ: 3, 2, 1 ಲಕ್ಷ ರೂಪಾಯಿ

ತಂಡದ ಪ್ರಶಸ್ತಿ ಗೌರವಗಳ ಹೊರತಾಗಿ, ಪ್ರತಿ ಪಂದ್ಯ ಮತ್ತು ಒಟ್ಟಾರೆ ಋತುವಿನಲ್ಲಿ ವಿವಿಧ ವೈಯಕ್ತಿಕ ಪ್ರದರ್ಶನಗಳಿಗೆ ಬಹುಮಾನ ನೀಡಲಾಗುವುದು, ಇದಕ್ಕಾಗಿ 4 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ.

Story first published: Saturday, June 11, 2022, 18:11 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X