ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಂ.1 ಪಟ್ಟ ಕಳೆದುಕೊಂಡ ಸೈನಾ ನೆಹ್ವಾಲ್

By Mahesh

ಕೌಲಲಂಪುರ, ಏ.4: ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ಅವರು ವಿಶ್ವದ ನಂ.1 ಸ್ಥಾನಕ್ಕೇರಿದ್ದ ಕೆಲ ದಿನಗಳಲ್ಲೇಪಟ್ಟ ಕಳೆದುಕೊಂಡಿದ್ದಾರೆ. ಮಲೇಷಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್ ನಲ್ಲಿ ಚೀನಾದ ಎದುರಾಳಿ ವಿರುದ್ಧ ಸೋಲು ಕಂಡ ಸೈನಾ ಅವರು

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲೀ ಸೂಜಿಯಾ ಎದುರು 21-13, 17-21, 20-22ರ ಸೆಟ್‌ಗಳ ಅಂತರದಲ್ಲಿಮೂರನೇ ಸೀಡ್ ನ ಸೈನಾ ಸೋಲು ಕಂಡರು. ['ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ]

Saina Nehwal loses World No 1 ranking after Malaysian Open semi-final defeat

ಮೊದಲ ಸೆಟ್‌ನಲ್ಲಿ ಸೋತರೂ 2ನೇ ಸೆಟ್‌ನಲ್ಲಿ ಗೆಲುವು ಸಾಧಿಸಿ ಸೈನಾ ಉತ್ತಮ ಆಟ ಪ್ರದರ್ಶಿಸಿದರು ಅದರೆ, ಮೂರನೇ ಸೆಟ್ ನಲ್ಲಿ ತೀವ್ರ ಸ್ಪರ್ಧೆಯೊಡ್ಡಿದರೂ ಚೀನಾದ ಲೀ ಮುಂದೆ ಸೋಲು ಕಾಣಬೇಕಾಯಿತು. ಈ ಮೂಲಕ ಟೂರ್ನಿಯಿಂದ ಹೊರ ಬಿದ್ದ ಸೈನಾ ಅವರು ನಂ.1 ಪಟ್ಟವನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.[ಸೈನಾ ನೆಹ್ವಾಲ್ ನಂಬರ್ 1]

ಇತ್ತೀಚಿಗೆ ಇಂಡಿಯಾ ಓಪನ್ ಸೂಪರ್ ಸರಣಿ ಬಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ಎನಿಸಿದ್ದರು. ಈ ಪಟ್ಟಕ್ಕೇರಿದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಮ್ಮೆ ಹೊಂದಿದರು. ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ, ಕಾಮನ್ ವೆಲ್ತ್ ನಲ್ಲಿ ಚಿನ್ನದ ಪದಕ ಪಡೆದಿರುವ ಸೈನಾ ಅವರು ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ.

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆತಗಾರ್ತಿಯಾದ ಸೈನಾ ನೆಹ್ವಾಲ್ ಸಾಧನೆಗಳನ್ನು ಪರಿಗಣಿಸಿ ಇದುವರೆಗೆ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ ಅರ್ಜುನ ಪ್ರಶಸ್ತಿ (2009), ರಾಜೀವ್ ಗಾಂಧಿ ಖೇಲ್ ರತ್ನ (2010) ಪದ್ಮಶ್ರೀ (2010)ಗಳು ಸೇರಿವೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X