ವರ್ಲ್ಡ್ ಟೂರ್ ಫೈನಲ್: ಬಿಂಗ್ಜಿಯಾವೊಗೆ ಸೋಲುಣಿಸಿದ ಪಿವಿ ಸಿಂಧು

ಗುವಾಂಗ್ಝೌ, ಡಿಸೆಂಬರ್ 13: ಶುಕ್ರವಾರ (ಡಿಸೆಂಬರ್ 13) ನಡೆದ ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ ಫೈನಲ್ ಬ್ಯಾಡ್ಮಿಂಟನ್ ಗ್ರೂಪ್‌ 'ಎ'ಯ ಮೂರನೇ ಪಂದ್ಯದಲ್ಲಿ ಭಾರತದ ಪಿವಿ ಸಿಂಧು, ಚೀನಾ ಆಟಗಾರ್ತಿ ಬಿಂಗ್ಜಿಯಾವೊ ವಿರುದ್ಧ ಸಮಾಧಾನಕರ ಜಯ ದಾಖಲಿಸಿದ್ದಾರೆ.

ಭಾರತದ 4ನೇ ಕ್ರಮಾಂಕಕ್ಕೆ ಅವನಂತ ಬ್ಯಾಟ್ಸ್‌ಮನ್ ಬೇಕು: ಅನಿಲ್ ಕುಂಬ್ಳೆ

ಶುಕ್ರವಾರದ ಪಂದ್ಯದಲ್ಲಿ ಸಿಂಧು, ಎದುರಾಳಿಯನ್ನು 21-19 21-19ರ ಅಂತರದಿಂದ ಮಣಿಸಿದರು. ಇದರೊಂದಿಗೆ ಸಿಂಧು 2019ರ ಕೊನೆಯ ಪಂದ್ಯವನ್ನು ಸಕಾರಾತ್ಮಕವಾಗಿ ಮುಗಿಸಿದಂತಾಗಿದೆ. ಇಬ್ಬರ ಮಧ್ಯೆ ಸುಮಾರು 42 ನಿಮಿಷಗಳ ಕಾದಾಟ ನಡೆಯಿತು. ಈ ಪಂದ್ಯದೊಂದಿಗೆ ಸಿಂಧು ಟೂರ್ನಿಯ ಗ್ರೂಪ್‌ನಲ್ಲಿ 3ನೇ ಸ್ಥಾನದಲ್ಲಿ ಆಟ ಮುಗಿಸಿದ್ದಾರೆ.

ಈ ಪಂದ್ಯದ ಗೆಲುವು, ಸಿಂಧು ಅವರು ಚೀನಾ ಆಟಗಾರ್ತಿಯ ವಿರುದ್ಧ ಕಂಡ ಸತತ ನಾಲ್ಕು ಸೋಲುಗಳ ಓಟಕ್ಕೆ ಬ್ರೇಕ್‌ ನೀಡಿದೆ. ಪಂದ್ಯದ ಆರಂಭದ ಸೆಟ್‌ನ ಆರಂಭದಲ್ಲಿ ಸಿಂಧು 7-3ರ ಹಿನ್ನಡೆಯಲ್ಲಿದ್ದರು. ಅನಂತರ ಚತುರ ಆಟವಾಡಿದ ಸಿಂಧು ಗೆಲುವು ತನ್ನದಾಗಿಸಿಕೊಂಡರು. ಇದಕ್ಕೂ ಹಿಂದಿನ ಅಂದರೆ, ದ್ವಿತೀಯ ಪಂದ್ಯದಲ್ಲಿ ಸಿಂಧು, ಚೀನಾದ ಚೆನ್ ಯು ಫೀ ಎದುರು ಸೋತಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, December 13, 2019, 21:26 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X