ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿನ್ನದ ಆರಂಭ ನೀಡಿದ ಮೇರಿ ಕೋಮ್, ಗೌರವ್ ಸೋಲಂಕಿ

CWG 2018: Boxers Mary Kom, Gaurav Solanki grab gold

ಬೆಂಗಳೂರು, ಏಪ್ರಿಲ್ 14: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಶನಿವಾರದ ಆರಂಭದಲ್ಲಿಯೇ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಬಾಕ್ಸಿಂಗ್ನಲ್ಲಿ ಮೇರಿ ಕೋಮ್ ಮತ್ತು ಗೌರವ್ ಸೋಲಂಕಿ ಎರಡು ಚಿನ್ನ ತಂದಿತ್ತಿದ್ದಾರೆ.

ಚಿನ್ನ ಗೆದ್ದ ಈ ಹುಡುಗನ ವಯಸ್ಸು ಕೇವಲ 15ಚಿನ್ನ ಗೆದ್ದ ಈ ಹುಡುಗನ ವಯಸ್ಸು ಕೇವಲ 15

ಮಹಿಳೆಯರ 48 ಕೆಜಿ ವಿಭಾಗದ ಫೈನಲ್ಸ್ನಲ್ಲಿ ಮೇರಿ ಕೋಮ್, ಉತ್ತರ ಐರ್ಲೆಂಡಿನ ಕ್ರಿಸ್ಟಿನಾ ಒಹರಾ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಗೌರವ್ ಸೋಲಂಕಿ ಪುರುಷರ 52 ಕೆಜಿ ವಿಭಾಗದಲ್ಲಿ ಉತ್ತರ ಐರ್ಲೆಂವಿನ ಬ್ರೆಂಡನ್ ಇರ್ವಿನ್ ಅವರನ್ನು ಸೋಲಿಸಿದರು.

ಐದು ಬಾರಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ 35 ವರ್ಷದ ಮೇರಿ ಕೋಮ್ ಅವರಿಗೆ ಇದು ಮೊದಲ ಕಾಮನ್ವೆಲ್ತ್ ಕ್ರೀಡಾಕೂಟವಾಗಿದೆ. ಪ್ರಾಯಶಃ ಕೊನೆಯದೂ ಹೌದು. ಆದರೆ, ಈ ಕ್ರೀಡಾಕೂಟವನ್ನು ಅವರು ಸ್ಮರಣೀಯವನ್ನಾಗಿಸಿಕೊಂಡರು.

ಆರಂಭದಿಂದಲೇ ಮೇಲುಗೈ ಸಾಧಿಸಿದ ಮೇರಿ ಕೋಮ್, ಎದುರಾಳಿಯ ಮೇಲೆ ಸವಾರಿ ನಡೆಸಿದರು. 5-0ಯಿಂದ ನೇರವಾಗಿ ಗೆಲುವು ಕಂಡರು.

ಪುರುಷರ 49 ಕೆಜಿ ವಿಭಾಗದಲ್ಲಿ ಅಮಿತ್ ಫಂಗಲ್ ಇಂಗ್ಲೆಂಡಿನ ಗಲಾಲ್ ಯಫಾಯ್ ಅವರೆದುರು ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಡೆದುಕೊಂಡರು.

20 ಚಿನ್ನ, 13 ಬೆಳ್ಳಿ ಮತ್ತು 14 ಪದಗಳನ್ನು ಗಳಿಸಿರುವ ಭಾರತ ಒಟ್ಟು 47 ಪದಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Story first published: Tuesday, April 17, 2018, 9:13 [IST]
Other articles published on Apr 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X