ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಆರ್‌ಸಿಬಿ ಈ ಸ್ಫೋಟಕ ಆಟಗಾರನನ್ನು ಖರೀದಿಸಬಹುದು ಎಂದ ಆಕಾಶ್ ಚೋಪ್ರಾ

Aakash Chopra Feels RCB Would Go For Rilee Rossouw In IPL Mini Auction

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಸಂಭವನೀಯ ಬ್ಯಾಕಪ್ ಆಗಿ ಐಪಿಎಲ್ 2023 ಹರಾಜಿನಲ್ಲಿ ರಿಲೀ ರೊಸ್ಸೌವ್ ಅವರನ್ನು ಖರೀದಿಸಲು ಆಸಕ್ತಿ ಹೊಂದಿರಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ20 ವಿಶ್ವಕಪ್ 2022 ರಲ್ಲಿ ಬಾಂಗ್ಲಾದೇಶದ ವಿರುದ್ಧ 56 ಎಸೆತಗಳಲ್ಲಿ 109 ರನ್ ಗಳಿಸಿದರು. ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಎರಡು ಶತಕ ದಾಖಲಾಗಿದೆ. ರೊಸೊವ್ ಭಾರತದ ವಿರುದ್ಧದ ಸರಣಿಯಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

Ind Vs Eng: ಟೀಂ ಇಂಡಿಯಾದ ಆತಂಕ ದೂರ ಮಾಡಿದ ನಾಯಕ ರೋಹಿತ್ ಶರ್ಮಾInd Vs Eng: ಟೀಂ ಇಂಡಿಯಾದ ಆತಂಕ ದೂರ ಮಾಡಿದ ನಾಯಕ ರೋಹಿತ್ ಶರ್ಮಾ

ಆರ್‌ಸಿಬಿಯ ಸ್ಫೋಟಕ ಆಲ್‌ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್ ಇದುವರೆಗೆ ರನ್ ಗಳಿಸಲು ಪರದಾಡುತ್ತಿದ್ದಾರೆ. ಕೆಲವು ತಿಂಗಳಿನಿಂದ ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲೂ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದರು. ಒಂದು ವೇಳೆ ಮ್ಯಾಕ್ಸ್‌ವೆಲ್‌ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರೆ, ಮಧ್ಯಮ ಕ್ರಮಾಂಕದಲ್ಲಿ ಅವರ ಬದಲಿಗೆ ರಿಲೀ ರೊಸೊವ್‌ರನ್ನು ಆಡಿಸಬಹುದಾಗಿದೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಮುಂಬರುವ ಹರಾಜಿನಲ್ಲಿ ರೊಸೊರನ್ನು ಖರೀದಿಸಲು ಭಾರಿ ಪೈಪೋಟಿ ಎದುರಾಗಬಹುದು ಎಂದು ಕಾಶ್ ಚೋಪ್ರಾ ಹೇಳಿದ್ದಾರೆ.

ಸ್ಪಿನ್, ವೇಗಿಗಳ ವಿರುದ್ಧ ಆಕ್ರಮಣಕಾರಿ ಆಟ

ಸ್ಪಿನ್, ವೇಗಿಗಳ ವಿರುದ್ಧ ಆಕ್ರಮಣಕಾರಿ ಆಟ

ರಿಲೀ ರೊಸೊವ್ ಸ್ಫೋಟಕ ಆಟಗಾರ. ಮುಖ್ಯವಾಗಿ ಆತ ಎಡಗೈ ಬ್ಯಾಟರ್, ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಸ್ಪಿನ್ ಮತ್ತು ವೇಗದ ಬೌಲಿಂಗ್‌ ವಿರುದ್ಧ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಅವರು ಭರ್ಜರಿ ಶತಕ ಗಳಿಸಿದ್ದರು. ನಂತರ ಟಿ20 ವಿಶ್ವಕಪ್‌ನಲ್ಲಿ ಸಿಡ್ನಿಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕೂಡ ಅರ್ಧಶತಕ ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಟಿ20 ವಿಶ್ವಕಪ್ ಸೆಮಿಫೈನಲ್: ಈ 4 ವಿಚಾರಗಳಲ್ಲಿ ಅಂದುಕೊಂಡಂತೆ ಆದರೆ ಭಾರತ ಫೈನಲ್‌ಗೇರುವುದು ನಿಶ್ಚಿತ

ಸಿಎಸ್‌ಕೆ ಅವರ ಖರೀದಿಸುವ ಸಾಧ್ಯತೆ ಇಲ್ಲ

ಸಿಎಸ್‌ಕೆ ಅವರ ಖರೀದಿಸುವ ಸಾಧ್ಯತೆ ಇಲ್ಲ

ಅನೇಕ ತಂಡಗಳಿಗೆ ಎಡಗೈ ಅಗ್ರ ಕ್ರಮಾಂಕದ ಬ್ಯಾಟರ್ ಬೇಕಾಗಬಹುದು, ಚೆನ್ನೈ ಸೂಪರ್ ಕಿಂಗ್ಸ್ ರಿಲೀ ರೊಸೊವ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಚೋಪ್ರಾ ಅವರಿಗೆ ಬಿಡ್ ಮಾಡಬಹುದಾದ ಫ್ರಾಂಚೈಸಿಗಳಲ್ಲಿ ಆರ್‌ಸಿಬಿ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು. "ಆರ್‌ಸಿಬಿಯ ದೃಷ್ಟಿಕೋನದಿಂದ ಯೋಚಿಸುತ್ತಿದ್ದರೆ ಅವರು ಮ್ಯಾಕ್ಸ್‌ವೆಲ್‌ನ ಬ್ಯಾಕಪ್ ಆಗಬಹುದೇ? ಫಾಫ್ ಡು ಪ್ಲೆಸಿಸ್ ಕೂಡ ನಿಯಮಿತವಾಗಿ ಕ್ರಿಕೆಟ್ ಆಡುವುದಿಲ್ಲ. ಕೆಲವು ಹಂತದಲ್ಲಿ, ಅಲ್ಲಿ ಬದಲಾವಣೆಯ ಅಗತ್ಯವಿದೆ. ರಿಲೀ ರೊಸೊವ್ ಅವರಿಗೆ ಉತ್ತಮ ಆಯ್ಕೆಯಾಗುತ್ತಾರೆ. ಇತರೆ ಫ್ರಾಂಚೈಸಿಗಳು ಕೂಡ ಅವರನ್ನು ಖರೀದಿಸಲು ಉತ್ಸುಕರಾಗಿರಬಹುದು" ಎಂದು ಹೇಳಿದರು.

ಈ ಬೌಲರ್ ಗಳನ್ನು ಖರೀದಿಸಬಹುದು

ಈ ಬೌಲರ್ ಗಳನ್ನು ಖರೀದಿಸಬಹುದು

ನೆದರ್ಲ್ಯಾಂಡ್ಸ್ ತಂಡದ ಪಾಲ್ ವ್ಯಾನ್ ಮೀಕೆರೆನ್ ಮತ್ತು ಬಾಸ್ ಡಿ ಲೀಡೆ ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಆಕಾಶ್ ಚೋಪ್ರಾ ನಿರೀಕ್ಷಿಸಿದ್ದಾರೆ. "ವ್ಯಾನ್ ಮೀಕೆರೆನ್ ಸರಿಯಾದ ವೇಗದ ಬೌಲರ್ ಮತ್ತು ಬಾಸ್ ಡಿ ಲೀಡ್ ಆಲ್-ರೌಂಡರ್. ಆಲ್ ರೌಂಡರ್ ಐಪಿಎಲ್‌ನಲ್ಲಿ ಹೆಚ್ಚು ಕೆಲಸ ಮಾಡದಿರಬಹುದು ಏಕೆಂದರೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುವವರಿಗೆ ಅವಕಾಶ ಸಿಗುವುದು ಕಡಿಮೆ" ಎಂದು ಹೇಳಿದರು.

ಆರ್‌ಸಿಬಿ ನೆದರ್ಲ್ಯಾಂಡ್ಸ್ ವೇಗಿಗಳ ಬಗ್ಗೆಯೂ ಆಸಕ್ತಿ ತೋರಿಸಬಹುದೆಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. "ಪಾಲ್ ವ್ಯಾನ್ ಮೀಕೆರೆನ್ ಒಬ್ಬ ವಿಕೆಟ್-ಟೇಕಿಂಗ್ ಬೌಲರ್. ಆ ರೀತಿಯ ಬೌಲರ್‌ಗಳು ಭಾರತದಲ್ಲಿ ಕೆಲಸ ಮಾಡುತ್ತಾರೆ. ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿ ಪರವಾಗಿ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ, ಅವರಿಗೆ ಬ್ಯಾಕಪ್ ಆಗಿ ತೆಗೆದುಕೊಳ್ಳಬಹುದೇ ಪಾಲ್ ವ್ಯಾನ್ ಮೀಕೆರೆನ್ ಅವರನ್ನು ಖರೀದಿಸಬಹುದು ಅಥವಾ ಬ್ರಾಂಡನ್ ಗ್ಲೋವರ್ ಅಥವಾ ಲೋಗನ್ ವ್ಯಾನ್ ಬೀಕ್ ಆಯ್ಕೆ ಕೂಡ ಉತ್ತಮವಾಗಿರುತ್ತದೆ" ಎಂದು ಹೇಳಿದ್ದಾರೆ.

Story first published: Tuesday, November 8, 2022, 20:30 [IST]
Other articles published on Nov 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X