ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಎಟಿಕೆಗೆ ಸೋಲುಣಿಸಿದ ಬೆಂಗಳೂರು

Advantage Bengaluru with gritty win over ATK

ಬೆಂಗಳೂರು: ದೆಶಾರ್ನ್ ಬ್ರೌನ್ 31ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಎಟಿಕೆ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಗೆ ಒಂದು ಹೆಜ್ಜೆ ಇಟ್ಟಿದೆ. ಕೊನೆಯ 10 ನಿಮಿಷಗಳ ಕಾಲ ಕೇವಲ 10 ಆಟಗಾರರನ್ನು ಹೊಂದಿದ್ದರೂ ಬೆಂಗಳೂರು ತನ್ನ ಮನೆಯಂಗಣದಲ್ಲಿ ಎಟಿಕೆಗೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಮುಂದಿನ ವಾರ ಕೋಲ್ಕೊತಾದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಖಚಿತ.

ಬೆಂಗಳೂರಿಗೆ ಮುನ್ನಡೆ:
ದೆಶಾರ್ನ್ ಬ್ರೌನ್ (31ನೇ ನಿಮಿಷ) ಗಳಿಸಿದ ಗೋಲಿನಿಂದ ಆತಿಥೇಯ ಬೆಂಗಳೂರು ಎಫ್ ಸಿ ತಂಡ ಎಟಿಕೆ ವಿರುದ್ಧ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು. ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಬೆಂಗಳೂರು ತಂಡ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, 7ನೇ ನಿಮಿಷದಲ್ಲೇ ಗೋಲಿನ ಖಾತೆ ತೆರಯುವ ಅವಕಾಶ ಸಿಕ್ಕಿತ್ತು, ಆದರೆ ರಾಹುಲ್ ಬಿಖೆ ಮಾಡಿದ ಹೆಡರ್ ಗೋಲ್ ಬಾಕ್ಸ್ ಮೇಲಿಂದ ಹಾದು ಹೋಯಿತು, ಎಟಿಕೆ ದಿಟ್ಟ ಹೋರಾಟ ನೀಡಿದರೂ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. 17ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಅವಕಾಶವನ್ನು ಕೈಚೆಲ್ಲಿದರು, ಹ್ಯಾಂಡ್ ಬಾಲ್ ಆದ ಕಾರಣ ಗೋಲನ್ನು ನಿರಾಕರಿಸಲಾಯಿತು. ಬೆಂಗಳೂರು ಈ ಹಿಂದಿನ ಲೀಗ್ ಪಂದ್ಯದಲ್ಲೂ ಆರಂಭದಲ್ಲೇ ಗೋಲು ಗಳಿಸದರೂ ಪಂದ್ಯ ಗೆಲ್ಲುವಲ್ಲಿ ವಿಫಲವಾಗಿತ್ತು, ಎಟಿಕೆ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು.

ಭವಿಷ್ಯದ ಸ್ಟಾರ್ಸ್ ರೂಪಿಸಲು ಐಎಸ್‍ಎಲ್ ಹಾಗೂ ಪ್ರೀಮಿಯರ್ ಲೀಗ್ ಒಪ್ಪಂದಭವಿಷ್ಯದ ಸ್ಟಾರ್ಸ್ ರೂಪಿಸಲು ಐಎಸ್‍ಎಲ್ ಹಾಗೂ ಪ್ರೀಮಿಯರ್ ಲೀಗ್ ಒಪ್ಪಂದ

ಹಾಲಿ, ಮಾಜಿ ಚಾಂಪಿಯನ್ನರ ಸೆಣಸು:
ಒಂದು ತಂಡಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬಲ, ಇನ್ನೊಂದು ತಂಡಕ್ಕೆ ಮೂರನೇ ಪ್ರಶಸ್ತಿ ಗೆಲ್ಲುವ ತವಕ. ಇದು ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೊದಲ ಹಂತದ ಸೆಮಿಫೈನಲ್ ನ ಎರಡನೇ ಪಂದ್ಯಕ್ಕೆ ಬೆಂಗಳೂರು ಮತ್ತು ಎಟಿಕೆ ತಂಡಗಳು ಇಟ್ಟುಕೊಂಡ ಗುರಿ. ಹೆಚ್ಚಾಗಿ ಮೊದಲ ಸೆಮಿಫೈನಲ್ ಪಂದ್ಯದಲ್ಲೆ ಫೈನಲ್ ತಲಪುವ ತಂಡಯಾವುದೆಂದು ಸ್ಪಷ್ಟವಾಗುತ್ತದೆ, ಏಕೆಂದರೆ ಎರಡನೇ ಪಂದ್ಯದಲ್ಲಿ ಹೆಚ್ಚಿನ ಒತ್ತಡ ಸೋತ ತಂಡದ ಮೇಲಿರುತ್ತದೆ. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಸಮಬಲ ಸಾಧಿಸಿದ್ದವು.

ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಪಂದ್ಯದಲ್ಲಿ ಮುಖಾಮುಖಿಯಾಗುವುದರೊಂದಿಗೆ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣ ಫುಟ್ಬಾಲ್ ನ ಸಂಭ್ರಮಕ್ಕೆಸಾಕ್ಷಿಯಾಯಿತು. ಬೆಂಗಳೂರು ತಂಡ ಮನೆಯಂಗಣದ ಪ್ರೇಕ್ಷಕರ ಬೆಂಬಲದೊಂದಿಗೆ ಜಯ ಗಳಿಸುವ ಗುರಿಹೊಂದಿದೆ ಅಂಗಣಕ್ಕಿಐಇತು. ಎಎಫ್ ಸಿ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ತಂಡ ಮಾಲ್ದೀವ್ಸ್ ನ ಮಾಜಿಯಾ ತಂಡದ ವಿರುದ್ಧ ಅನುಭವಿಸಿದ ಸೋಲನ್ನು ಮರೆತು, ಎಟಿಕೆಗೆ ಸೋಲಿನ ಆಘಾತ ನೀಡುವುದು ತಂಡದ ಗುರಿಯಾಗಿತ್ತು.
ಬೆಂಗಳೂರು ತಂಡ ಈ ಬಾರಿ ಹಿಂದಿನ ಎರಡು ಲೀಗ್ ಗಳಲ್ಲಿ ಗಳಿಸಿರುವಂತೆ ಗೋಲು ಗಳಿಸಿಲ್ಲ,18 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 22 ಗೋಲುಗಳು. ಆದ್ದರಿಂದ ತಂಡಕ್ಕೆ ಈಗ ತನ್ನ ನೈಜ ಪ್ರದರ್ಶನ ತೋರುವ ಅನಿವಾರ್ಯತೆ ಇದೆ.

Story first published: Monday, March 2, 2020, 11:32 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X