ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ ಶಿಸ್ತಿಗೆ ಸಾಕ್ಷ್ಯ ನೀಡುತ್ತಿದೆ ಅನುಷ್ಕಾ ಶರ್ಮಾ ಹಂಚಿಕೊಂಡ ಈ ಚಿತ್ರ

ಐಪಿಎಲ್‌ 2020 ಟೂರ್ನಿಯಲ್ಲಿ ಫ್ಲೇ ಆಫ್ ಪಂದ್ಯದಲ್ಲಿ ಸೋತು ಆರ್‌ಸಿಬಿ ವಾಪಸ್ಸಾಗಿದೆ. ಈ ಟೂರ್ನಿಯಲ್ಲಿ ಆರ್‌ಸಿಬಿ ಸೋಲಿಗೆ ವಿಶೇಷವಾಗಿ ಕೊಹ್ಲಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಈ ಐಪಿಎಲ್ 2020 ಯಲ್ಲಿ ಕೊಹ್ಲಿ ಬ್ಯಾಟು ಹೆಚ್ಚು ಮಾತನಾಡಲಿಲ್ಲ. ಎರಡು ಪಂದ್ಯಗಳಲ್ಲಿ ಸಿಡಿದರಾದರು, ಅವರ ಬ್ಯಾಟಿಂಗ್‌ನ ಅವಶ್ಯಕತೆ ಹೆಚ್ಚಿಗಿದ್ದ ಮ್ಯಾಚಿನಲ್ಲಿ ಅವರು ತಂಡಕ್ಕೆ ಸಹಾಯ ಮಾಡಲಿಲ್ಲ. ಫ್ಲೇ ಆಫ್‌ ಪಂದ್ಯದಲ್ಲಿಯಂತೂ ಅವರ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಆದರೆ ಎಲ್ಲವೂ ಹುಸಿಯಾಯಿತು.

ಈಗ ಐಪಿಎಲ್ ಮುಗಿದಿದೆ. ಇನ್ನೇನಿದ್ದರೂ ಅಂತರರಾಷ್ಟ್ರೀಯ ಪಂದ್ಯಗಳತ್ತ ಚಿತ್ರ. ಇನ್ನು ದೇಶಕ್ಕಾಗಿ ಆಡಲು ಕೊಹ್ಲಿ ಮಾನಸಿಕವಾಗಿ, ದೈಹಿಕವಾಗಿ ತಯಾರಾಗಬೇಕಿದೆ. ಆದರೆ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಕೊಹ್ಲಿ. ಪತ್ನಿ ಅನುಷ್ಕಾ ಶರ್ಮಾ ಹಂಚಿಕೊಂಡಿರುವ ಇದಕ್ಕೆ ಸಾಕ್ಷ್ಯ ನೀಡುತ್ತಿದೆ.

ಕೊಹ್ಲಿಯ ಚಿತ್ರ ಹಂಚಿಕೊಂಡಿರುವ ಅನುಷ್ಕಾ ಶರ್ಮಾ

ಕೊಹ್ಲಿಯ ಚಿತ್ರ ಹಂಚಿಕೊಂಡಿರುವ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ, ಕೊಳೆಯಾದ ತಮ್ಮ ಶೂಗಳನ್ನು ತೊಳೆದುಕೊಳ್ಳುತ್ತಿರುವ ಚಿತ್ರವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅನುಷ್ಕಾ ಶರ್ಮಾ. ಚಿತ್ರ ನೋಡಿದ ಹಲವರು ಕೊಹ್ಲಿಯ ಶಿಸ್ತಿಗೆ, ಆಟದ ಬಗ್ಗೆ ಇರುವ ಗಂಭೀರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಳೆಯಾದ ಶೂ ತೊಳೆಯುತ್ತಿರುವ ಕೊಹ್ಲಿ

ಕೊಳೆಯಾದ ಶೂ ತೊಳೆಯುತ್ತಿರುವ ಕೊಹ್ಲಿ

ವಿರಾಟ್ ಕೊಹ್ಲಿ, ಕೊಳೆಯಾದ ತಮ್ಮ ಶೂಗಳನ್ನು ಟೂತ್‌ ಬ್ರಷ್‌ ಬಳಸಿ ಸ್ವಚ್ಛಗೊಳಿಸುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಲೆಂದು ಈ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ ಕೊಹ್ಲಿ. ಹಲವು ಬ್ರ್ಯಾಂಡ್‌ಗಳ ರಾಯಭಾರಿ ಆಗಿರುವ ಕೊಹ್ಲಿಗೆ ಹೊಸ ಶೂ ತೆಗೆದುಕೊಳ್ಳುವುದು ದೊಡ್ಡದಲ್ಲ, ಅಥವಾ ಕೆಲಸದವರಿಂದ ಶೂ ತೊಳೆಸಿಕೊಳ್ಳುವುದು ಸಹ ದೊಡ್ಡದಲ್ಲ, ಆದರೆ ಕೊಹ್ಲಿ ತಮ್ಮ ಶೂ ತಾವೇ ತೊಳೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಹಲವು ಕ್ರಿಕೆಟ್ಟಿಗರು ಹೀಗೆಯೇ ಮಾಡುತ್ತಾರೆ

ಹಲವು ಕ್ರಿಕೆಟ್ಟಿಗರು ಹೀಗೆಯೇ ಮಾಡುತ್ತಾರೆ

ಬಹುತೇಕ ಕ್ರಿಕೆಟಿಗರು, ತಮ್ಮ ಕ್ರಿಕೆಟ್ ಸಂಬಂಧಿತ ವಸ್ತುಗಳನ್ನು ತಾವೇ ಸ್ವಚ್ಛಮಾಡಿಕೊಳ್ಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಕ್ರಿಕೆಟ್ ಕಿಟ್ ಅನ್ನು ಬೇರೆಯವರಿಗೆ ಮುಟ್ಟಲೂ ಬಿಡದ ಆಟಗಾರರು ಇದ್ದಾರೆ. ಸಚಿನ್ ಸಹ ತಮ್ಮ ಕ್ರಿಕೆಟ್ ಸಾಮಗ್ರಿಗಳನ್ನು ತಾವೇ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ತಮ್ಮ ಕಾರನ್ನು ಸಹ ಅವರೇ ತೊಳೆಯುತ್ತಿದ್ದರು.

ನವೆಂಬರ್ 27 ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ

ನವೆಂಬರ್ 27 ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ನವೆಂಬರ್ 27 ರಿಂದ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ಮೂರು ಟಿ-20, ಮೂರು ಏಕದಿನ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿರಾಟ್ ಕೊಹ್ಲಿಯು ಟೆಸ್ಟ್ ಸರಣಿಯ ಮಧ್ಯಭಾಗದಲ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

Story first published: Wednesday, November 11, 2020, 11:42 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X