ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ-ಅಫ್ಘಾನಿಸ್ತಾನ ನಡುವೆ ಪಂದ್ಯ, ತಂಡಗಳ ಬಲಾ-ಬಲ ಹೇಗಿದೆ?

Asia cup 2018 Bangladesh Afghanistan match preview

ದುಬೈ, ಸೆಪ್ಟೆಂಬರ್ 20: ನಿನ್ನೆಯಷ್ಟೆ ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್‌ ನೋಡಿದ್ದ ಕ್ರಿಕೆಟ್ ಪ್ರೇಮಿಗಳು ಇಂದು ಮತ್ತೊಂದು ಸಮಬಲದ ತಂಡಗಳ ನಡುವಿನ ಕ್ರಿಕೆಟ್‌ ಫೈಟ್‌ಗೆ ತಯಾರಾಗಬೇಕಿದೆ.

ಇಂದು ಏಷ್ಯಾಕಪ್‌ನ ಬಿ ಗ್ರೂಪ್‌ನಲ್ಲಿ, ಪ್ರತಿಭಾನ್ವಿತ ತಂಡ ಆಫ್ಘಾನಿಸ್ತಾನ ಹಾಗೂ ಕೆಚ್ಚದೆಯ ಆಟಗಾರರ ತಂಡ ಬಾಂಗ್ಲಾದೇಶ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು ಸೆಮಿಫೈನಲ್ ಪ್ರವೇಶಿಸಿವೆ.

ಏಷ್ಯಾಕಪ್ ಅತ್ಯಧಿಕ ರನ್ ಗಳಿಕೆ ಪಟ್ಟಿಗೆ ಮುಷ್ಫಿಕರ್ ರಹೀಂ ಸೇರ್ಪಡೆ ಏಷ್ಯಾಕಪ್ ಅತ್ಯಧಿಕ ರನ್ ಗಳಿಕೆ ಪಟ್ಟಿಗೆ ಮುಷ್ಫಿಕರ್ ರಹೀಂ ಸೇರ್ಪಡೆ

ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ತಮ್ಮ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧವೇ ಆಡಿದ್ದು ಎರಡೂ ತಂಡಗಳು ಶ್ರೀಲಂಕಾಕ್ಕೆ ಮಣ್ಣು ಮುಕ್ಕಿಸಿ ಸೆಮಿಫೈನಲ್ ಪ್ರವೇಶಿಸಿವೆ. ಆದರೆ ಇಂದಿನ ಪಂದ್ಯ ಗ್ರೂಫ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲು ಅತ್ಯಂತ ಅವಶ್ಯಕವಾಗಿದೆ.

ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು

ಬಾಂಗ್ಲಾದೇಶವು ಅನುಭವಿ, ಹೋರಾಟ ಮನೋಭಾವದ ಆಟಗಾರರನ್ನು ಹೊಂದಿದ್ದರೆ. ಅಫ್ಘಾನಿಸ್ತಾನವು ಭಾರಿ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಇದು ಸಮಬಲ ಹೊಂದಿದ ತಂಡಗಳಾಗಿದ್ದು, ಅತ್ಯುತ್ತಮ ಸ್ಪರ್ಧೆಯ ಪಂದ್ಯವನ್ನು ಇಂದು ನಿರೀಕ್ಷಿಸಬಹುದಾಗಿದೆ.

ಬೌಲಿಂಗ್ ಬಲ ಉತ್ತಮ ಬ್ಯಾಟಿಂಗ್‌ನದ್ದೇ ಚಿಂತೆ

ಬೌಲಿಂಗ್ ಬಲ ಉತ್ತಮ ಬ್ಯಾಟಿಂಗ್‌ನದ್ದೇ ಚಿಂತೆ

ಅಫ್ಘಾನಿಸ್ತಾನದ ಬೌಲಿಂಗ್ ವಿಶ್ವದರ್ಜೆಯದ್ದಾಗಿದೆ. ಅಬ್ದುಲ್ ರಶೀದ್ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿಹಾಕುವ ಛಾತಿ ಹೊಂದಿದೆ. ಆದರೆ ಅಪ್ಘಾನ್ ತಂಡಕ್ಕೆ ಬ್ಯಾಟಿಂಗ್‌ನದ್ದೇ ಚಿಂತೆ. ಈ ಅನೌಪಚಾರಿಕವಾದರೂ ಪ್ರಮುಖ ಪಂದ್ಯದಲ್ಲಿ ಅದು ಬ್ಯಾಟಿಂಗ್‌ ಬಲ ಉತ್ತಮಪಡಿಸಿಕೊಳ್ಳಲು ಯತ್ನಿಸಲಿದೆ.

ಪ್ರಮುಖ ಆಟಗಾರರಿಗೆ ಬಾಂಗ್ಲಾ ವಿಶ್ರಾಂತಿ

ಪ್ರಮುಖ ಆಟಗಾರರಿಗೆ ಬಾಂಗ್ಲಾ ವಿಶ್ರಾಂತಿ

ಇದು ಅನೌಪಚಾರಿಕ ಪಂದ್ಯವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ, ಭಾರತದಂತಹಾ ಪ್ರಮುಖ ತಂಡಗಳನ್ನು ಎದುರಿಸಬೇಕಾಗಿರುವ ಕಾರಣ ಬಾಂಗ್ಲಾದೇಶ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಿದೆ. ಲಂಕಾ ವಿರುದ್ಧ ಪಂದ್ಯದಲ್ಲಿ ಶತಕ ಭಾರಿಸಿದ್ದ ಮುಶ್ಫಿಕುರ್ ರಹೀಮ್ ಈ ಪಂದ್ಯದಲ್ಲಿ ಆಡುವಂತಿಲ್ಲ ಅಪ್ಘಾನಿಸ್ತಾನ ಸಹ ತನ್ನ ಸ್ಟಾರ್ ಆಟಗಾರ ರಶೀದ್‌ಗೆ ವಿರಾಮ ನೀಡುವ ಸಾಧ್ಯತೆ ಇದೆ.

ಬಾಂಗ್ಲಾಕ್ಕೆ ಗಾಯಾಳುಗಳ ಸಮಸ್ಯೆ

ಬಾಂಗ್ಲಾಕ್ಕೆ ಗಾಯಾಳುಗಳ ಸಮಸ್ಯೆ

ಮೊದಲ ಪಂದ್ಯದಲ್ಲಿ ಕೈಬೆರಳು ಮುರಿದುಕೊಂಡಿರುವ ತಮೀಮ್ ಇಕ್ಬಾಲ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ನಜಾಮ್ ಹುಸೇನ್ ಬಾಂಗ್ಲಾದ ಆಟುವ ಹನ್ನೊಂದರಲ್ಲಿ ಸ್ಥಾನ ದೊರೆಯಲಿದೆ. ಮುಶ್ಫಿಕುರ್ ರಹೀಮ್‌ ಬದಲಿಗೆ ಮೋಮಿನಲ್ ಹಕೀಮ್ ಅಥವಾ ಆರಿಫುಲ್ ಹಕೀ ಸ್ಥಾನ ಪಡೆಯಲಿದ್ದಾರೆ.

ಮೂಳೆ ಮುರಿದರೂ ಒಂದೇ ಕೈಯಲ್ಲಿ ಬ್ಯಾಟು ಹಿಡಿದು ಆಡಿದ ತಮೀಮ್ ಇಕ್ಬಾಲ್

ಭಾರತದ ವಿರುದ್ಧ ಯಾರಾಡಲಿದ್ದಾರೆ?

ಭಾರತದ ವಿರುದ್ಧ ಯಾರಾಡಲಿದ್ದಾರೆ?

ಈ ಪಂದ್ಯದ ಫಲಿತಾಂಶ ಆಧರಿಸಿ ಸೆಮಿಫೈನಲ್ ನಲ್ಲಿ ಯಾವ ತಂಡ ಯಾವ ತಂಡದ ವಿರುದ್ಧ ಆಡಲಿದೆ ಎಂಬುದು ತಿಳಿಯಲಿದೆ. ಈಗ ಭಾರತವು ಮೊದಲ ತಂಡವಾಗಿ ನಾಲ್ಕರ ಘಟ್ಟ ತಲುಪಿದೆ. ಬಾಂಗ್ಲಾ-ಅಪ್ಘಾನಿಸ್ತಾನ ಪಂದ್ಯದಲ್ಲಿ ಸೋತ ತಂಡದ ಎದುರು ಭಾರತ ಸೆಮಿಫೈನಲ್ ಆಡಲಿದೆ.

ಗೆಲ್ಲುವ ಫೇವರೇಟ್‌ ಯಾರು?

ಗೆಲ್ಲುವ ಫೇವರೇಟ್‌ ಯಾರು?

ಎರಡೂ ತಂಡಗಳು ಸಮಬಲ ಹೊಂದಿವೆ ಆದರೆ ಬಾಂಗ್ಲಾ ತನ್ನ ಕೆಲವು ಸ್ಟಾರ್ ಆಟಗಾರರಿಗೆ ವಿಶ್ವಾಂತಿ ನೀಡಲಿದೆ ಹಾಗಾಗಿ ಅಪ್ಘಾನಿಸ್ತಾನಕ್ಕೆ ಗೆಲ್ಲವ ಅವಕಾಶ ಹೆಚ್ಚಿದೆ ಎನ್ನಬಹುದು. ಆದರೆ ಬಾಂಗ್ಲಾದೇಶ ಸಹ ಸಾಧಾರಣ ತಂಡವಲ್ಲ. ಅದರ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಮತೋಲನೆಯಿಂದ ಕೂಡಿದೆ. ಅಪ್ಘಾನಿಸ್ತಾನ ತಂಡದಲ್ಲಿ ಈ ಸಮತೋಲನೆ ಇಲ್ಲ.

Story first published: Thursday, September 20, 2018, 15:34 [IST]
Other articles published on Sep 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X