
ಏಕದಿನ ಮಾದರಿ ಟೂರ್ನಿ
2023ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ನಡೆಯಲಿದ್ದು, ಏಕದಿನ ಮಾದರಿಯಲ್ಲಿ ಆಡಿದರೆ ತಂಡಗಳು ವಿಶ್ವಕಪ್‌ಗೆ ಸಿದ್ಧತೆ ನಡೆಸಿದಂತೆ ಕೂಡ ಇರಲಿದೆ.
ಕಳೆದ ಎರಡು ಆವೃತ್ತಿಯಲ್ಲಿ ಅನುಸರಿಸಿದ ಸ್ವರೂಪವನ್ನೇ ಈ ಬಾರಿಯೂ ಮುಂದುವರೆಸಲು ತೀರ್ಮಾನಿಸಲಾಗಿದೆ. ಏಷ್ಯಾಕಪ್ 16ನೇ ಆವೃತ್ತಿಯಲ್ಲಿ ಒಟ್ಟು 13 ಪಂದ್ಯಗಳನ್ನು ಆಡಲಾಗುತ್ತದೆ. ಗುಂಪು ಹಂತದ ಟಾಪ್ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
Rishabh Pant: ರಿಷಬ್ ಪಂತ್‌ಗೆ ಲಂಡನ್‌ನಲ್ಲಿ ನಡೆಯಲಿದೆ ಶಸ್ತ್ರಚಿಕಿತ್ಸೆ : 9 ತಿಂಗಳು ಕ್ರಿಕೆಟ್ ಆಡೋದೆ ಅನುಮಾನ!
|
ಪ್ರೀಮಿಯರ್ ಕಪ್ ವಿಜೇತ ತಂಡ ಏಷ್ಯಾಕಪ್‌ಗೆ
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಏಷ್ಯಾಕಪ್‌ಗೆ ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಏಷ್ಯಾಕಪ್‌ನಲ್ಲಿ ಭಾಗವಹಿಸಲು ಸಹವರ್ತಿ ರಾಷ್ಟ್ರಗಳು ಪುರುಷರ ಪ್ರೀಮಿಯರ್ ಕಪ್ ಟೂರ್ನಿ ಆಡಲಿದ್ದಾರೆ. ಈ ಟೂರ್ನಿಯಲ್ಲಿ ವಿಜೇತ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆಯಲಿದೆ.
ಪ್ರೀಮಿಯರ್ ಕಪ್‌ನಲ್ಲಿ ಏಷ್ಯಾದ 10 ತಂಡಗಳು ಭಾಗವಹಿಸಲಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, 20 ಪಂದ್ಯಗಳು ನಡೆಯಲಿವೆ. 2022ರ ಆವೃತ್ತಿಯಲ್ಲಿ ಹಾಂಗ್ ಕಾಂಗ್ ಅರ್ಹತೆ ಪಡೆದುಕೊಂಡಿತ್ತು. ಆದರೆ, ಈ ಬಾರಿ ಏಕದಿನ ಮಾದರಿಯಲ್ಲಿ ನಡೆಯುವುದರಿಂದ ಸ್ಪರ್ಧೆ ಮತ್ತಷ್ಟು ಕಠಿಣವಾಗಿರಲಿದೆ.

ಏಷ್ಯಾಕಪ್ ಗೆಲ್ಲಲು ಸಿದ್ಧತೆ
2022ರ ಏಷ್ಯಾಕಪ್‌ನಲ್ಲಿ ಕಪ್ ಗೆಲ್ಲುವ ತಂಡವಾಗಿ ಅಭಿಯಾನ ಆರಂಭಿಸಿದ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಸ್ಪರ್ಧೆಯಿಂದಲೇ ಹೊರಬಿದ್ದಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ಶ್ರೀಲಂಕಾ ಮುಖಾಮುಖಿಯಾಗಿದ್ದವು, ಪಾಕಿಸ್ತಾನವನ್ನು ಮಣಿಸಿ ಶ್ರೀಲಂಕಾ ಏಷ್ಯಾಕಪ್ ಚಾಂಪಿಯನ್ ಎನಿಸಿಕೊಂಡಿದೆ.
ಈಗಾಗಲೇ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ಆರಂಭಿಸಿರುವ ಟೀಂ ಇಂಡಿಯಾಗೆ ಏಷ್ಯಾಕಪ್ ಪೂರ್ವಭಾವಿ ಪರೀಕ್ಷೆಯಂತಿರಲಿದೆ. 2023ರ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ, ಹೆಚ್ಚಿನ ವಿಶ್ವಾಸದಿಂದ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ನೋಡುತ್ತದೆ.
ಮಹಿಳಾ ಟಿ20 ಏಷ್ಯಾಕಪ್ ಜೂನ್ ನಲ್ಲಿ ನಡೆಯಲಿದ್ದು, ಪುರುಷರ ಏಷ್ಯಾಕಪ್ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಅಂಡರ್ 19 ವಿಶ್ವಕಪ್ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತದೆ.