ಏಷ್ಯಾ ಕಪ್: ಭಾರತ-ಪಾಕಿಸ್ತಾನ ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ?

ಬೆಂಗಳೂರು, ಸೆಪ್ಟೆಂಬರ್ 14: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 15ರಿಂದ ಪ್ರಾರಂಭವಾಗಲಿದೆ. ಏಷ್ಯಾ ಖಂಡದ ಕ್ರಿಕೆಟ್ ಕಲಿಗಳು ಪರಸ್ಪರ ಎದುರಾಗುವ ಈ ಟೂರ್ನಿಗೆ ಘನವಾದ ಇತಿಹಾಸವಿದೆ.

1984 ರಲ್ಲಿ ಪ್ರಾರಂಭವಾದ ಈ ಟೂರ್ನಿ ಕೇವಲ ಕ್ರಿಕೆಟ್‌ನಿಂದ ಮಾತ್ರವಲ್ಲದೆ ಹಲವು ಕಾರಣಕ್ಕೆ ಮಹತ್ವದ್ದಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಕಾಂಗ್ ತಂಡಗಳು ಭಾಗವಹಿಸಲಿವೆ.

ಕೊನೆಯ ಬಾಲ್ ಗೆ ಸಿಕ್ಸ್ ಬೀಸಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಜಾವೆದ್!

ಆದರೆ ಈ ಟೂರ್ನಿಯ ನಿಜವಾದ ಫೈಟ್‌ ಇರುವುದು ಭಾರತ-ಪಾಕಿಸ್ತಾನ ತಂಡಗಳ ನಡುವೆ. ಈ ಎರಡು ತಂಡಗಳ ಕಾದಾಟ ನೋಡಲೆಂದೇ ಏಷ್ಯಾ ಕಪ್‌ ನಡೆಯುತ್ತಿರುವ ಯುಎಇಗೆ ಕ್ರಿಕೆಟ್ ಅಭಿಮಾನಿಗಳು ಬಂದಿಳಿಯುತ್ತಿದ್ದಾರೆ.

ಭಾರತ - ಪಾಕಿಸ್ತಾನ ಪಂದ್ಯವೊಂದು ಒಂದು ಆಷಸ್‌ ಸರಣಿಗೆ ಸರ ಎನ್ನುತ್ತಾರೆ ಅಂತರರಾಷ್ಟ್ರೀಯ ಕ್ರಿಕೆಟ್ ವಿಶ್ಲೇಷಕರು. ಸೆಪ್ಟೆಂಬರ್ 19ರಂದು ಭಾರತ-ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೈನಲ್‌ನಲ್ಲಿಯೂ ಈ ಎರಡು ತಂಡಗಳು ಮತ್ತೆ ಎದುರು ಬದಲಾಗಲಿ ಎಂಬುದು ಕ್ರಿಕೆಟ್ ಪ್ರೀಯರ ಆಶಯ.

ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು

ಬಹು ವರ್ಷದ ಇತಿಹಾಸ ಇರುವ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳಲ್ಲಿ ಯಾರು ಬಲಿಷ್ಠರು. ಯಾರ ವಿರುದ್ಧ ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ. ಏಷ್ಯಾ ಕಪ್‌ನಲ್ಲಿ ಯಾರು ಬಲಿಷ್ಠರು ಎಂದು ನೀವೇ ನಿರ್ಧರಿಸಿ.

1984 ರಲ್ಲಿ 54 ರನ್‌ ಅಂತರದಲ್ಲಿ ಭಾರತಕ್ಕೆ ಜಯ

1984 ರಲ್ಲಿ 54 ರನ್‌ ಅಂತರದಲ್ಲಿ ಭಾರತಕ್ಕೆ ಜಯ

1984 ರಲ್ಲಿ ನಡೆದಿದ್ದ ಮೊದಲ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ಸೋಲಿಸಿ ಕಪ್ ಎತ್ತಿ ಹಿಡಿದಿತ್ತು. ಈ ಸರಣಿಯಲ್ಲಿ ಶ್ರೀಲಂಕಾ ಸಹ ಭಾಗವಹಿಸಿತ್ತು. ಸುನಿಲ್ ಗವಾಸ್ಕರ್ ನಾಯಕತ್ವದ ಆಗಿನ ಭಾರತ ತಂಡವು ಪಾಕಿಸ್ತಾನ ತಂಡವನ್ನು 54 ರನ್‌ಗಳಿಂದ ಸೋಲಿಸಿತು.

1988 ನಾಲ್ಕು ವಿಕೆಟ್‌ನಿಂದ ಭಾರತಕ್ಕೆ ಜಯ

1988 ನಾಲ್ಕು ವಿಕೆಟ್‌ನಿಂದ ಭಾರತಕ್ಕೆ ಜಯ

1988 ರಲ್ಲಿ ಭಾರತವು ಮತ್ತೆ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಏಷ್ಯಾಕಪ್‌ ಗೆದ್ದಿತು. ನಾಲ್ಕು ವಿಕೆಟ್‌ ಅಂತರದಿಂದ ಪಾಕಿಸ್ತಾನವು ಭಾರತದ ಮುಂದೆ ತಲೆ ಬಾಗಿತು. ಆ ನಂತರದ ಮೊದಲ ಸರಣಿಯಲ್ಲಿ ಭಾರತ ಭಾಗವಹಿಸಲಿಲ್ಲ. ಅದರ ನಂತರದ ಸರಣಿಯಲ್ಲಿ ಪಾಕಿಸ್ತಾನ ಭಾಗವಹಿಸಲಿಲ್ಲ ಹಾಗಾಗಿ ಎರಡು ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಎದುರಾಗಲಿಲ್ಲ.

ಮೊದಲ ಏಷ್ಯಾ ಕಪ್‌ನ ಮೊದಲ ಪಂದ್ಯವನ್ನೇ ಗೆದ್ದು ಬೀಗಿತ್ತು ಭಾರತ

11 ವರ್ಷದ ನಂತರ ಭಾರತ ವಿರುದ್ಧ ಪಾಕ್‌ಗೆ ಜಯ

11 ವರ್ಷದ ನಂತರ ಭಾರತ ವಿರುದ್ಧ ಪಾಕ್‌ಗೆ ಜಯ

ಭಾರತದ ವಿರುದ್ಧ ಏಷ್ಯಾ ಕಪ್‌ನಲ್ಲಿ ಗೆಲುವು ಸಾಧಿಸಲು ಪಾಕಿಸ್ತಾನವು ಬರೋಬ್ಬರಿ 11 ವರ್ಷ ಕಾಯಬೇಕಾಯಿತು. 1995 ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನವು ಭಾರತದ ವಿರುದ್ಧ ಗೆದ್ದಿತು. ಇಂಜಮಾಮ್ ಉಲ್ ಹಕ್ ಹಾಗೂ ವಾಸಿಮ್ ಅಕ್ರಮ್ ಅವರುಗಳು ಉತ್ತಮ ಬ್ಯಾಟಿಂಗ್‌ನಿಂದ ಪಾಕ್‌ 269 ರನ್ ಗಳಿಸಿತು. ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ ಅಕ್ರಂ 169 ರನ್‌ಗಳಿಗೆ ಭಾರತವನ್ನು ಆಲ್‌ಔಟ್ ಮಾಡಿತು.

1997 ರಲ್ಲಿ ಪಾಕ್‌ನ ಮಾನ ಉಳಿಸಿದ ಮಳೆ

1997 ರಲ್ಲಿ ಪಾಕ್‌ನ ಮಾನ ಉಳಿಸಿದ ಮಳೆ

1997 ರಲ್ಲಿ ಶ್ರೀಲಂಕಾ ದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತವು ಪಾಕ್ ವಿರುದ್ಧ ಅತ್ಯುತ್ತಮವಾಗಿ ಆಡುತ್ತಿದ್ದ ಆದರೆ ಮಳೆ ಬಂದು ಪಂದ್ಯವೇ ರದ್ದಾಗಿಬಿಟ್ಟಿತು. ಕರ್ನಾಟಕದ ವೇಗಿ ವೆಂಕಟೇಶ್ ಪ್ರಸಾದ್ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಪಾಕ್‌ ಕೇವಲ 37 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಆಗ ಬಂದ ಮಳೆ ಪಾಕಿಸ್ತಾನದ ಮಾನ ಕಾಪಾಡಿತು.

ಪಾಕಿಸ್ತಾನಕ್ಕೆ ಗೆಲುವು ತಂದು ಕೊಟ್ಟ ಯೂಸಫ್‌

ಪಾಕಿಸ್ತಾನಕ್ಕೆ ಗೆಲುವು ತಂದು ಕೊಟ್ಟ ಯೂಸಫ್‌

2000 ರಲ್ಲಿ ಬಾಂಗ್ಲಾದಲ್ಲಿ ಏಷ್ಯಾಕಪ್ ನಡೆಯಿತು. ಆಗ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿತು. ಮೊಹಮ್ಮದ್ ಯೂಸುಫ್ ಸೆಂಚುರಿ ಭಾರಿಸಿ ತಂಡದ ಮೊತ್ತವನ್ನು 295 ರನ್‌ಗಳಿಗೇರಿಸಿದರು. ಭಾರತದ ಪರ ಅಜಯ್ ಜಡೇಜಾ 93 ರನ್ ಗಳಿಸಿದ್ದು ಬಿಟ್ಟರೆ ಇನ್ನಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಪಾಕಿಸ್ತಾನದ ಅಬ್ದುಲ್ ರಜಾಕ್ ಉತ್ತಮ ಬೌಲಿಂಗ್ ಮಾಡಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು.

ಶೊಯೆಬ್ ಮಲ್ಲಿಕ್ ಭರ್ಜರಿ ಆಟ

ಶೊಯೆಬ್ ಮಲ್ಲಿಕ್ ಭರ್ಜರಿ ಆಟ

ಶ್ರೀಲಂಕಾದಲ್ಲಿ 2004ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವು ದೊಡ್ಡ ಗೆಲುವು ಸಾಧಿಸಿತು. ಆಗತಾನೆ ಪಾಕ್ ತಂಡಕ್ಕೆ ಬಂದಿದ್ದ ಶೊಯೆಬ್ ಮಲ್ಲಿಕ್‌ ಜೀವನ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶಿಸಿ ಪಾಕಿಸ್ತಾನಕ್ಕೆ ಗೆಲುವು ದೊರಕಿಸಿದ್ದರು. ಅವರು 127 ಎಸೆತದಲ್ಲಿ 143 ರನ್ ಭಾರಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಒಂದು ಸಿಕ್ಸರ್‌ ಇತ್ತು. ಗುರಿ ಬೆನ್ನತ್ತಿದ್ದ ಭಾರತ ಬಹುಬೇಗ ವಿಕೆಟ್ ಕಳೆದುಕೊಂಡಿತು. ಸಚಿನ್ ತೆಂಡೂಲ್ಕರ್ ಅಲ್ಪ ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ.

ಪರಸ್ಪರ ಒಂದೊಂದು ಪಂದ್ಯ ಗೆದ್ದ ಭಾರತ-ಪಾಕ್‌

ಪರಸ್ಪರ ಒಂದೊಂದು ಪಂದ್ಯ ಗೆದ್ದ ಭಾರತ-ಪಾಕ್‌

2008 ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆದಿತ್ತು. ಈ ಸರಣಿಯಲ್ಲಿ ಭಾರತ ಪಾಕ್ ವಿರುದ್ದ ಜಯ ಗಳಿಸಿತು. ಇಲ್ಲಿ ಸಹ ಮತ್ತೆ ಶೊಯೆಬ್ ಮಲ್ಲಿಕ್ ಶತಕ ಸಿಡಿಸಿ ಭಾರತವನ್ನು ಕಾಡಿದರು. ಆದರೆ ಸೆಹ್ವಾಗ್ ಮತ್ತು ಸುರೇಶ್ ರೈನಾ ಬ್ಯಾಟಿಂಗ್ ಮುಂದೆ ಪಾಕಿಸ್ತಾನದ ಬೌಲರ್‌ಗಳ ಆಟ ನಡೆಯಲಿಲ್ಲ ಭಾರತವು 6 ವಿಕೆಟ್‌ಗಳಿಂದ ಗೆದ್ದಿತು. ಆದರೆ ಇದೇ ಸರಣಿಯಲ್ಲಿ ಮತ್ತೊಮ್ಮೆ ಭಾರತ ಪಾಕಿಸ್ತಾನ ಎದುರಾದವು ಆಗ ಪಾಕಿಸ್ತಾನ ಗೆದ್ದು ಮುಯ್ಯಿ ತೀರಿಸಿಕೊಂಡಿತು. ಪಾಕಿಸ್ತಾನ 8 ವಿಕೆಟ್‌ಗಳಿಂದ ಪಂದ್ಯ ಗೆದ್ದಿತು. ಯೂನಿಸ್ ಖಾನ್ ಶತಕ ಗಳಿಸಿದರು.

ಹರ್ಭಜನ್ ಸಿಕ್ಸರ್ ಮರೆಯುವುದುಂಟೆ

ಹರ್ಭಜನ್ ಸಿಕ್ಸರ್ ಮರೆಯುವುದುಂಟೆ

ಈ ಪಂದ್ಯ ಕ್ರಿಕೆಟ್ ಪ್ರಿಯರು ಮರೆಯಲು ಸಾಧ್ಯವಿಲ್ಲ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 267 ರನ ಗಳಿಸಿತು. ಭಾರತ ಪರ ಮಹೇಂದ್ರ ಸಿಂಗ್ ಧೋನಿ ಮತ್ತು ಗೌತಮ್ ಗಂಭೀರ್ ಅರ್ಧ ಶತಕ ಗಳಿಸಿದರು. ಆದರೆ ಪಂದ್ಯ ಗೆಲ್ಲಿಸಿದ್ದು ಸ್ಪಿನ್ನರ್ ಹರ್ಭಜನ್ ಸಿಂಗ್. ಶೊಯೆಬ್ ಅಖ್ತರ್ ಹಾಗೂ ಅಮಿರ್ ಸೊಹೆಲ್ ಅವರ ಬೌಲಿಂಗ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸಿ ಒಂದು ಚೆಂಡು ಉಳಿದಿರುವಂತೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು ಹರ್ಭಜನ್ ಸಿಂಗ್.

ಸಚಿನ್-ಕೊಹ್ಲಿ ಜೋಡಿ ಮುಂದೆ ಪಾಕ್ ಪರಾಭವ

ಸಚಿನ್-ಕೊಹ್ಲಿ ಜೋಡಿ ಮುಂದೆ ಪಾಕ್ ಪರಾಭವ

ಆರಂಭಿಕ ಬ್ಯಾಟ್ಸ್‌ಮನ್‌ ನಸೀರ್ ಮತ್ತು ಜೆಮ್ಶೆದ್ ಅವರ ಶತಕದ ನೆರವಿನಿಂದ ಪಾಕಿಸ್ತಾನ 329 ರನ್ ಗಳಿಸಿದರು. ಬ್ಯಾಟಿಂಗ್‌ಗೆ ಇಳಿದ ಭಾರತ ಗಂಭೀರ್ ವಿಕೆಟ್‌ ಅನ್ನು ಖಾತೆ ತೆರೆಯುವ ಮುನ್ನವೇ ಕಳೆದುಕೊಂಡಿತು. ಆ ನಂತರ ಸಚಿನ್ ಮತ್ತು ಕೊಹ್ಲಿ ಜೋಡಿ ಪಾಕಿಸ್ತಾನ ಬೌಲರ್‌ಗಳ ದಾಳಿಯನ್ನು ಚಚ್ಚಿ ಚೆಂಡಾಡಿದರು. ಸಚಿನ್ ಅರ್ಧ ಶತಕ ಗಳಿಸಿ ಔಟಾದರೆ, ಕೊಹ್ಲಿ 148 ಎಸೆತಕ್ಕೆ 183 ರನ್ ಭಾರಿಸಿ ಔಟಾದರು ಅವರ ಇನ್ನಿಂಗ್ಸ್‌ನಲ್ಲಿ 22 ಬೌಂಡರಿಗಳಿದ್ದವು. ಭಾರತವು 13 ಚೆಂಡು ಉಳಿದಿರುವಂತೆ 6 ವಿಕೆಟ್‌ಗಳಿಂದ ಗೆದ್ದಿತು.

ಕೊನೆಯ ಓವರ್‌ನಲ್ಲಿ ಸಿಕ್ಸರ್‌ ಭಾರಿಸಿದ ಅಫ್ರಿಧಿ

ಕೊನೆಯ ಓವರ್‌ನಲ್ಲಿ ಸಿಕ್ಸರ್‌ ಭಾರಿಸಿದ ಅಫ್ರಿಧಿ

ಇದು ಅತ್ಯಂತ ಕಡಿಮೆ ಸ್ಕೋರಿನ ಪಂದ್ಯವಾಗಿತ್ತು. ಭಾರತವು 50 ಓವರ್‌ನಲ್ಲಿ ಕೇವಲ 245 ರನ್ ಗಳಿಸಿತು. ಪಾಕಿಸ್ತಾನ ಸಹ ಲಘು-ಬಗನೆ ವಿಕೆಟ್ ಕಳೆದುಕೊಂಡಿತಾದರೂ ಮೊಹಮ್ಮದ್ ಹಫೀಜ್ 117 ಬಾಲ್ ಎದುರಿಸಿ 75 ರನ್ ಗಳಿಸಿ ಪಾಕಿಸ್ತಾನವನ್ನು ಪಾರು ಮಾಡಿಬಿಟ್ಟರು. ಅಫ್ರಿದಿ 18 ಎಸೆತಕ್ಕೆ 34 ರನ್ ಸಿಡಿಸಿ ಪಾಕ್‌ ಅನ್ನು ಗೆಲುವಿನ ದಡ ದಾಟಿಸಿದರು.

ಕೊಹ್ಲಿ ಸಂಯಮದ ಆಟದಿಂದ ಗೆಲುವು

ಕೊಹ್ಲಿ ಸಂಯಮದ ಆಟದಿಂದ ಗೆಲುವು

2016ರಲ್ಲಿ ಟಿ20 ಸರಣಿ ಆಯೋಜಿಸಲಾಗಿತ್ತು. ಭಾರತವು ಪಾಕಿಸ್ತಾನವನ್ನು ಕೇವಲ 83 ರನ್‌ಗೆ ಆಲ್‌ಔಟ್ ಮಾಡಿತು. ಆದರೆ ಪಾಕ್ ಸಹ ತಿರುಗೇಟು ನೀಡಿ ಕೇವಲ 8 ರನ್‌ಗೆ ಭಾರತದ ಮೂರು ವಿಕೆಟ್ ಕಬಳಿಸಿತು. ಆಗ ಬಂದ ಕೊಹ್ಲಿ ಭಾರತದ ಇನ್ನಿಂಗ್ಸ್‌ ಸಂಭಾಳಿಸಿ ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು. ಅವರು 51 ಎಸೆತದಲ್ಲಿ 49 ರನ್ ಗಳಿಸಿದರು. ಭಾರತ ಇನ್ನೂ 27 ಎಸೆತ ಇದ್ದಂತೆ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019 ಊಹಿಸು
Match 32 - June 25 2019, 03:00 PM
ಇಂಗ್ಲೆಂಡ್
ಆಸ್ಟ್ರೇಲಿಯಾ
Predict Now

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, September 14, 2018, 19:03 [IST]
Other articles published on Sep 14, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more