ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪಂದ್ಯ: ದಿನೇಶ್ ಕಾರ್ತಿಕ್ ಮಾಡಿದ ಎಡವಟ್ಟಿಗೆ ಕೆರಳಿದ ಅಭಿಮಾನಿಗಳು!

AUS vs IND warm-up match: Fans angry on Dinesh Karthiks catch drop

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದೆ. ಅಂತಿಮವಾಗಿ ಡೆತ್ ಓವರ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೊದಲ ಅಭ್ಯಾಸ ಪಂದ್ಯವನ್ನು ಭಾರತ ಯಶಸ್ವಿಯಾಗಿ ಮುಗಿಸಿದೆ.

ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮೇಲೆ ಅಭಿಮಾನಿಗಳು ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ. ಬ್ಯಾಟಿಂಗ್‌ನಲ್ಲಿ ಡಿಕೆ ಮಿಂಚಿದ್ದರೂ ವಿಕೆಟ್ ಕೀಪಿಂಗ್‌ನಲ್ಲಿ ಮಾಡಿದ ಒಂದು ಎಡವಟ್ಟು ಅಭಿಮಾನಿಗಳನ್ನು ಕೆರಳಿಸಿದೆ. ಈಗಾಗಲೇ ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್‌ನಲ್ಲಿ ಹೊಸ ತಲೆನೋವು ತಂದಿಟ್ಟಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

T20 World Cup: ದುರ್ಬಲ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡಿದ ಐದು ಪ್ರಮುಖ ಪಂದ್ಯಗಳು ಇವುT20 World Cup: ದುರ್ಬಲ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡಿದ ಐದು ಪ್ರಮುಖ ಪಂದ್ಯಗಳು ಇವು

ಸುಲಭ ಕ್ಯಾಚ್ ಕೈಚೆಲ್ಲಿದ ಡಿಕೆ

ಸುಲಭ ಕ್ಯಾಚ್ ಕೈಚೆಲ್ಲಿದ ಡಿಕೆ

ಅಭ್ಯಾಸ ಪಂದ್ಯದಲ್ಲಿ ಭಾರತ ನೀಡಿದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಆರೋನ್ ಫಿಂಚ್ ಅದ್ಭುತ ಪ್ರದರ್ಶನ ನೀಡಿದ್ದರು. ಭಾರತೀಯ ಬೌಲರ್‌ಗಳು ಕೂಡ ಆಗಾರ ವಿಕೆಟ್ ಕಬಳಿಸುತ್ತಾ ಪಂದ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಪೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಅಗ್ಗಕ್ಕೆ ಔಟ್ ಮಾಡುವ ಅವಕಾಶವವನ್ನು ಭಾರತ ಕಳೆದುಕೊಂಡಿತು. 11 ಓವರ್‌ನಲ್ಲಿ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ಅನ್ನು ಡಿಕೆ ಕೈಚೆಲಿದ್ದರು. ಯುಜುವೇಂದ್ರ ಚಾಹಲ್ ಅವರ ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟ್ ಮಾಡುವ ಅವಕಾಶವನ್ನು ಭಾರತ ಕಳೆದುಕೊಂಡಿತು.

ಕೆಂಡವಾದ ಅಭಿಮಾನಿಗಳು

ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ಅನ್ನು ದಿನೇಶ್ ಕಾರ್ತಿಕ್ ಕೈಚೆಲ್ಲಿದರು ಎಂದು ಅಭಿಮಾನಿಗಳು ಕೆಂಡವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಿಕೆ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ಸುಲಭದ ಕ್ಯಾಚ್‌ಅನ್ನು ಈ ಹಂತದಲ್ಲಿ ಹಿಡಿಯಲೇಬೇಕು ಎಂದಿದ್ದಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು. ದಿನೇಶ್ ಕಾರ್ತಿಕ್ ಅವರ ವಿಕೆಟ್ ಕೀಪಿಂಗ್ ಭಾರತ ತಂಡಕ್ಕೆ ಹೊಸ ತಲೆನೋವು ತಂದುಕೊಟ್ಟಿದೆ ಎಂದಿದ್ದಾರೆ ಮತ್ತೋರ್ವ ಅಭಿಮಾನಿ.

ಬ್ಯಾಟಿಂಗ್‌ನಲ್ಲಿ ಮಿಂಚಿದ ಕೆಎಲ್, ಸೂರ್ಯಕುಮಾರ್

ಬ್ಯಾಟಿಂಗ್‌ನಲ್ಲಿ ಮಿಂಚಿದ ಕೆಎಲ್, ಸೂರ್ಯಕುಮಾರ್

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕೆಎಲ್ ರಾಹುಲ್ 33 ಎಸೆತಗಳಲ್ಲಿ 57 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 50 ರನ್ ಬಾರಿಸಿ ಮಿಂಚಿದರು. ಈ ಇಬ್ಬರು ದಾಂಡಿಗರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಈ ಅಭ್ಯಾಸ ಪಂದ್ಯದಲ್ಲಿ 186 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ರೋಚಕ ಗೆಲುವು ಸಾಧಿಸಿದ ಭಾರತ

ರೋಚಕ ಗೆಲುವು ಸಾಧಿಸಿದ ಭಾರತ

ಭಾರತ ತಂಡ ನೀಡಿದ ಸವಾಲಿನ ಮೊತ್ತವನ್ನು ಆಸ್ಟ್ರೇಲಿಯಾ ಅದ್ಭುತವಾಗಿ ಬೆನ್ನಟ್ಟಲು ಆರಂಭಿಸಿತ್ತು. ಅದರಲ್ಲೂ ಆಸಿಸ್ ನಾಯಕ ಆರೋನ್ ಫಿಂಚ್ ಈ ಪಂದ್ಯದಲ್ಲಿ 76 ರನ್‌ಗಳನ್ನು ಸಿಡಿಸುವ ಮೂಲಕ ಆಸಿಸ್ ಬಳಗಕ್ಕೆ ಆಸರೆಯಾದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ ಭಾರತ ತಂಡ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಅಂತಿಮ ಓವರ್ ಮಾತ್ರವೇ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಶಮಿ ಮೂರು ವಿಕೆಟ್ ಕಿತ್ತು ಮಿಂಚಿದರು.

Story first published: Monday, October 17, 2022, 14:59 [IST]
Other articles published on Oct 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X