ಆಸ್ಟ್ರೇಲಿಯಾದಿಂದ 288 ರನ್ ಗುರಿ, ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ

Posted By:
Australia sets 288 runs target for Indian women cricket team to win

ವಡೋದರಾ, ಮಾರ್ಚ್ 15: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಮೂರು ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವನಿತೆಯರ ಮುಂದೆ 288 ರನ್‌ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ವನಿತೆಯರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 288 ರನ್ ಗುರಿ ನೀಡಿದೆ. ಮೊದಲ ಪಂದ್ಯ ಸೋತಿರುವ ಭಾರತ ಸರಣಿಯನ್ನು ಜೀವಂತವಾಗಿಡಲು ಈ ಪಂದ್ಯದಲ್ಲಿ ಜಯ ಸಾಧಿಸಲೇ ಬೇಕಾದ ಒತ್ತಡದಲ್ಲಿದೆ.

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ್ತಿ ಬೋಲ್ಟನ್ ಈ ಪಂದ್ಯದಲ್ಲಿಯೂ ಅತ್ಯುತ್ತಮ ಆಟವಾಡಿ ಭಾರತದ ಬೌಲರ್‌ಗಳನ್ನು ಕಾಡಿದರು ಅವರು, 88 ಎಸೆತಗಳನ್ನು ಎದುರಿಸಿ 84 ರನ್ ಗಳಿಸಿದರು ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು.

Australia sets 288 runs target for Indian women cricket team to win

ಅವರನ್ನು ಹೊರತುಪಡಿಸಿ ಇ.ಪೆರ್ರಿ 70 ಎಸೆತದಲ್ಲಿ ಅಷ್ಟೇ ರನ್ ಸಿಡಿಸಿ ಕೊನೆಯ ವರೆಗೂ ಔಟಾಗದೇ ಉಳಿದರು. ಆರನೇ ಬ್ಯಾಟ್ಸ್‌ಮನ್‌ ಆಗಿ ಸ್ಕ್ರೀಜಿಗಿಳಿದ ಬೆತ್ ಮೂನಿ ಕೇವಲ 40 ಎಸೆದಲ್ಲಿ 56 ರನ್ ಗಳಿಸಿ ರನ್ ಗಳಿಕೆಯ ವೇಗ ಹೆಚ್ಚಿಸಿದರು. ಹೀಲಿ 19, ಲಾನಿಂಗ್ 24, ಕೆರಿ 16 ರನ್ ಗಳಿಸಿದರು.

ಭಾರತದ ಪರ ಶಿಖಾ ಪಾಂಡೆ 3 ವಿಕೆಟ್ ಗಳಿಸಿದರು. ಪೂನಂ ಯಾದವ್ 2 ವಿಕೆಟ್, ಹರ್ಮನ್‌ಪ್ರೀತ್ ಕೌರ್ ಮತ್ತು ಏಕ್ತಾ ಬಿಸ್ಟಾ ತಲಾ ಒಂದು ವಿಕೆಟ್ ಗಳಿಸಿದರು.

ಕಳೆದ ಪಂದ್ಯದಲ್ಲಿ ಗಾಯದಿಂದಾಗಿ ಅಲಭ್ಯರಾಗಿದ್ದ ಮಿಥಾಲಿ ರಾಜ್ ಈ ಪಂದ್ಯದಲ್ಲಿ ಆಡುತ್ತಿದ್ದು, ಗೆಲ್ಲುವ ವಿಶ್ವಾಸದಿಂದ ರನ್‌ ಚೇಸ್‌ಗೆ ಇಳಿಯಲಿದ್ದಾರೆ ಭಾರತದ ವನಿತೆಯರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 15, 2018, 13:11 [IST]
Other articles published on Mar 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ