ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ ಆಟಗಾರನ ಬಗ್ಗೆ ಆಸಿಸ್ ನಾಯಕ ಹರ್ಷ!

Australia skipper Pat Cummins praises praises David Warner for excellent performance in 100th test match

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಅಮೋಘ ಗೆಲುವು ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಹಾಗೂ 182 ರನ್‌ಗಳ ಅಂತರದ ಬೃಹತ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಶಕ್ಕೆ ಪಡದುಕೊಂಡಿದೆ.

ಈ ಭರ್ಜರಿ ಗೆಲುವಿನ ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡದ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತಂಡವಾಗಿ ಆಡಿದ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ಯಾಟ್ ಕಮ್ಮಿನ್ಸ್ ಓರ್ವ ಆಟಗಾರನ ಪ್ರದರ್ಶನಕ್ಕೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Aus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾAus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾ

ವಾರ್ನರ್ ಬಗ್ಗೆ ವಿಶೇಷ ಮಾತು

ವಾರ್ನರ್ ಬಗ್ಗೆ ವಿಶೇಷ ಮಾತು

ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ವಿಶೇಷ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 100ನೇ ಟೆಸ್ಟ್ ಒಂದ್ಯವನ್ನಾಡಿದ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ಅಮೋಘ ದ್ವಿಶತಕ ಸಿಡಿಸಿದ್ದರು. ಈ ದ್ವಿಶತಕದ ಪರಿಣಾಮವಾಗಿ ಆಸಿಸ್ ಪಡೆ 575 ರನ್‌ಗಳ ಬೃಹತ್ ಮೊತ್ತಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಇದು ವಾರ್ನರ್ ಅವರ ವಿಶೇಷ ಇನ್ನಿಂಗ್ಸ್‌

ಇದು ವಾರ್ನರ್ ಅವರ ವಿಶೇಷ ಇನ್ನಿಂಗ್ಸ್‌

ಈ ಗೆಲುವು ಸೂಕ್ತ ಸಂದರ್ಭದಲ್ಲಿ ಬಂದಿದೆ. ಸುದೀರ್ಘ ಕಾಲದಿಂದ ದಕ್ಷಿಣ ಆಫ್ರಿಖಾ ಜೊತೆಗೆ ಬಹಳ ನಿಕಟ ಕಾದಾಟವಿದೆ. ಹೀಗಾಗಿ ಈ ಗೆಲುವು ವಿಶೇಷ. ಈ ಪಂದ್ಯದಲ್ಲಿ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಪ್ರದರ್ಶನ ವಿಶೇಷವಾಗಿದೆ. ಸ್ಟಾರ್ಕ್ ಹಾಗೂ ಗ್ರೀನ್ ಕೂಡ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಆದರೆ ಅವರು ಗಾಯಕ್ಕೆ ತುತ್ತಾದರು. ಇನ್ನು ವಾರ್ನರ್ ತಮ್ಮ ಮೊದಲ ಎಸೆತದಿಂದ ಅಂತಿಮ ಹಂತದವರೆಗೂ ಕಿಚ್ಚಿನ ಪ್ರದರ್ಶನ ನೀಡಿದ್ದಾರೆ. ಅವರ 100ನೇ ಟೆಸ್ಟ್ ಪಂದ್ಯ ಅತ್ಯಂತ ಅಮೋಘವಾಗಿತ್ತು" ಎಂದಿದ್ದಾರೆ ಡೇವಿಡ್ ವಾರ್ನರ್.

ದ. ಆಫ್ರಿಕಾ ನೀರಸ ಪ್ರದರ್ಶನ

ದ. ಆಫ್ರಿಕಾ ನೀರಸ ಪ್ರದರ್ಶನ

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 189 ರನ್‌ಗಳಿಗೆ ಆಕೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ದ್ವಿಶತಕ ಅಲೆಕ್ಸ್ ಕ್ಯಾರಿ ಶತಕ ಹಾಗೂ ಸ್ಟೀವ್ ಸ್ಮಿತ್, ಹೆಡ್ ಹಾಗೂ ಗ್ರೀನ್ ಅವರ ಅರ್ಧ ಶತಕದ ನೆರವಿನಿಂದಾಗಿ 575 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಹರಿಣಗಳ ಪಡೆ ಮತ್ತೊಮ್ಮೆ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ದ.ಆಫ್ರಿಕಾ ಕೇವಲ 204 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇನ್ನಿಂಗ್ಸ್ ಹಾಗೂ 182 ರನ್‌ಗಳ ಬೃಹತ್ ಅಂತರದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.

ಆಡುವ ಬಳಗ

ಆಡುವ ಬಳಗ

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಲ್ಯಾನ್ಸ್ ಮೋರಿಸ್, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಥೀನಿಸ್ ಡಿ ಬ್ರುಯಿನ್, ಟೆಂಬಾ ಬವುಮಾ, ಖಯಾ ಝೊಂಡೋ, ಕೈಲ್ ವೆರ್ರಿನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನಾರ್ಕಿಯಾ, ಲುಂಗಿ ಎನ್‌ಗಿಡಿ
ಬೆಂಚ್: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಚ್ ಕ್ಲಾಸೆನ್, ಜೆರಾಲ್ಡ್ ಕೋಟ್ಜಿ, ಸೈಮನ್ ಹಾರ್ಮರ್, ಲಿಜಾಡ್ ವಿಲಿಯಮ್ಸ್

Story first published: Thursday, December 29, 2022, 14:32 [IST]
Other articles published on Dec 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X