ಈ ಪಾಕ್ ಕ್ರಿಕೆಟಿಗ ಕೊಹ್ಲಿಯನ್ನು ಮೀರಿ ನಿಲ್ಲುವ ಶಕ್ತಿ ಹೊಂದಿದ್ದಾನೆ: ರಮೀಜ್ ರಾಜಾ

ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನದ ಮೂಲಕ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಈ ಮೂಲಕ ಎಲ್ಲಾ ಯುವ ಕ್ರಿಕೆಟಿಗರಿಗೂ ವಿರಾಟ್ ಕೊಹ್ಲಿ ಮಾದರಿಯಾಗಿದ್ದಾರೆ. ತಾವೂ ಆತನಂತೆಯೇ ಆಗಬೇಕು ಎಂಬ ಹಂಬಲವನ್ನು ಯುವ ಕ್ರಿಕೆಟಿಗರು ಹೊಂದಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರ ವಿಶ್ಲೇಷಕ ರಮೀಜ್ ರಾಜಾ ಕೊಹ್ಲಿಯನ್ನು ಮೀರಿಸುವಂತಾ ಆಟಗಾರ ಪಾಕಿಸ್ತಾನದಲ್ಲಿ ಇದ್ದಾನೆ ಎಂದಿದ್ದಾರೆ. ಆತ ಮುಂದೊಂದು ದಿನ ವಿರಾಟ್ ಕೊಹ್ಲಿಯ ದಾಖಲೆಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಹೊಂದಿದ್ದಾನೆ ಎಂದಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕನೂ ಆಗಿರುವ ರಮೀಜ್ ರಾಜಾ ಹೇಳಿದ ಪಾಕಿಸ್ತಾನದ ಆಟಗಾರ ಯಾರು? ರಾಜ ಹೇಳಿದ್ದೇನು ಮುಂದೆ ಓದಿ..

ರಾಜಾ ಹೇಳಿದ ಪಾಕ್ ಕ್ರಿಕೆಟಿಗ

ರಾಜಾ ಹೇಳಿದ ಪಾಕ್ ಕ್ರಿಕೆಟಿಗ

ವಿರಾಟ್ ಕೊಹ್ಲಿಯ ದಾಖಲೆಗಳನ್ನು ಹಿಂದಿಕ್ಕುವ ಸಾಮರ್ಥ್ಯವಿರುವ ಕ್ರಿಕೆಟಿಗ ಎಂದು ರಮೀಜ್ ರಾಜಾ ಹೇಳಿದ್ದು ಪಾಕಿಸ್ತಾನ ಕ್ರಿಕೆಟ್‌ನ ಬಾಬರ್ ಅಜಂ ಬಗ್ಗೆ. ಸದ್ಯ ಪಾಕ್ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿರುವ ಈ ಕ್ರಿಕೆಟಿಗ ಪಾಕಿಸ್ತಾನ ಕ್ರಿಕೆಟ್‌ನ ಪಾಲಿನ ಆಶಾಕಿರಣವಾಗಿದ್ದಾರೆ.

ಇದು ಮುಂದಿನ ದಾರಿ

ಇದು ಮುಂದಿನ ದಾರಿ

'ಬಾಬರ್ ಸದ್ಯ ಇರುವ ಫಾರ್ಮ್‌ನ್ನು ಕಾಪಾಡಿಕೊಳ್ಳಬೇಕು. ತನ್ನ ಆಟದ ರೀತಿ ಮತ್ತು ರನ್‌ಗಳಿಸುವುದನ್ನು ಮುಂದುವರಿಸಿದರೆ ಆತ ಕೊಹ್ಲಿಯನ್ನು ಮೀರಿ ಮುಂದೆ ಹೋಗಬಹುದು, ಆತ ತನ್ನ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳಬೇಕು, ರನ್‌ಗಳಿಸು ಬಗ್ಗೆ ಮತ್ತು ತಂಡ ಗೆಲ್ಲುವ ಬಗ್ಗೆ ಯೋಚಿಸಬೇಕು, ಆಗ ಮಾತ್ರ ದೀರ್ಘಕಾಲದವರೆಗೆ ಉತ್ತಮ ಆಟಗಾರನಾಗಿ ಉಳಿಯುತ್ತಾನೆ' ಎಂದು ರಮೀಜ್ ರಾಜಾ ಹೇಳಿದ್ದಾರೆ.

ಬಾಬರ್ ಏನು ಬೇಕಾದರೂ ಸಾಧಿಸಬಹುದು

ಬಾಬರ್ ಏನು ಬೇಕಾದರೂ ಸಾಧಿಸಬಹುದು

ರಮೀಜ್ ರಾಜಾ ಮಾತನಾಡುತ್ತಾ "ಬಾಬರ್ ಅಜಮ್‌ಗೆ ಯಾವುದೇ ಮಿತಿಯಿಲ್ಲ. ಅವನು ಏನು ಬೇಕಾದರೂ ಸಾಧಿಸಬಹುದು. ಆದರೆ ಆತನಿಗೆ ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿಯಾಗಬೇಕು, ಅದನ್ನು ಪಡೆಯದ ಹೊರತು ಆತ ಸಾಮರ್ಥ್ಯಕ್ಕೆ ಆಟವನ್ನು ಆಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಸಾಕಷ್ಟು ಶ್ರಮ ವಹಿಸಬೇಕು

ಸಾಕಷ್ಟು ಶ್ರಮ ವಹಿಸಬೇಕು

ಕೆಲ ಸಮಯದ ಹಿಂದೆ ಬಾಬರ್ ಅಜಮ್ ವಿರಾಟ್ ಕೊಹ್ಲಿಯ ರೀತಿಯಲ್ಲಿ ದಂತಕತೆಯಾಗಲು ಬಯಸುತ್ತೇನೆ ಎಂದು ಸ್ವತಃ ಹೇಳಿಕೊಂಡಿದ್ದರು. ಆದರೆ ಭಾರತೀಯ ನಾಯಕನನ್ನು ಹೊಂದಿಸಬೇಕಾದರೆ ಬಾಬರ್ ಅಜಂ ಸಾಕಷ್ಟು ಶ್ರಮವಹಿಸಬೇಕು ಎಂದು ಹೇಳಿದ್ದಾರೆ.

ಕೊಹ್ಲಿ ಜೊತೆಗೆ ಹೋಲಿಕೆ ಬಾಬರ್‌ಗೆ ಇಷ್ಟವಿಲ್ಲ

ಕೊಹ್ಲಿ ಜೊತೆಗೆ ಹೋಲಿಕೆ ಬಾಬರ್‌ಗೆ ಇಷ್ಟವಿಲ್ಲ

ಕೊಹ್ಲಿಯ ಜೊತೆಗೆ ಬಾಬರ್ ಹೋಲಿಕೆ ಮಾಡಲಾಗುತ್ತಿದೆ. ಆದರೆ ಬಾಬರ್‌ಗೆ ಈ ಹೋಲಿಕೆ ಇಷ್ಟವಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ಸ್ವತಃ ಬಾಬರ್ ಅಜಂ ಕೊಹ್ಲಿಯನ್ನು ಶ್ರೇಷ್ಟ ಆಟಗಾರ ಎಂದು ಪರಿಗಣಿಸಿದ್ದಾರೆ, ಈ ಸಂದರ್ಭದಲ್ಲಿ ತನ್ನ ಮತ್ತು ಕೊಹ್ಲಿ ನಡುವೆ ಹೋಲಿಕೆಯಿಲ್ಲ ಎಂದು ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 14, 2020, 12:15 [IST]
Other articles published on Apr 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X