ಇಂಗ್ಲೆಂಡ್-ಪಾಕಿಸ್ತಾನ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಿದ ಬಾಬರ್ ಅಜಂ

ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಏಳು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವು 10 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 7 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಏಷ್ಯಾಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಬಾಬರ್ ಅಜಮ್ ಕೇವಲ 66 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರು. 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಸುಲಭವಾಗಿ ರನ್ ಗಳಿಸಿದರು. ಪಾಕಿಸ್ತಾನ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.

Pak Vs Eng T20: ಬಾಬರ್ ಅಜಂ ಶತಕ, ವಿಕೆಟ್ ಕಳೆದುಕೊಳ್ಳದೆ 200 ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನPak Vs Eng T20: ಬಾಬರ್ ಅಜಂ ಶತಕ, ವಿಕೆಟ್ ಕಳೆದುಕೊಳ್ಳದೆ 200 ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ

ರಿಜ್ವಾನ್ 51 ಎಸೆತಗಳಲ್ಲಿ 88 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಗೆಲುವಿನೊಂದಿಗೆ ಶುಕ್ರವಾರದ ಮೂರನೇ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಸ್ಟ್ಯಾಂಡ್-ಇನ್ ನಾಯಕ ಮೊಯಿನ್ ಅಲಿ ಕೇವಲ 23 ಎಸೆತಗಳಲ್ಲಿ ಅಜೇಯ 55 ರನ್ ಗಳಿಸುವ ಮೂಲಕ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 199 ರನ್ ಗಳಿಸಿತು. ಶಹನವಾಜ್ ದಹಾನಿ ಪವರ್‌ಪ್ಲೇನಲ್ಲಿ ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ಮಲಾನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು.

ಬಾವರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಮೊದಲನೇ ವಿಕೆಟ್ ಜೊತೆಯಾಟ, ವಿಕೆಟ್ ನಷ್ಟವಿಲ್ಲದೆ ಗೆಲವು, ಬಾಬರ್ ಅಜಂ ಶತಕ ಹಲವು ದಾಖಲೆಗಳು ಸೃಷ್ಟಿಯಾದವು.

ವಿಶ್ವಕಪ್‌ಗೂ ಮುನ್ನ ಫಾರ್ಮ್ ಕಂಡುಕೊಂಡ ಅಜಂ

ವಿಶ್ವಕಪ್‌ಗೂ ಮುನ್ನ ಫಾರ್ಮ್ ಕಂಡುಕೊಂಡ ಅಜಂ

ಏಷ್ಯಾಕಪ್‌ನಲ್ಲಿ ರನ್ ಬರ ಎದುರಿಸಿದ್ದ ಬಾಬರ್ ಅಜಂ ಟೀಕೆಗೆ ಗುರಿಯಾಗಿದ್ದರು. ಪ್ರಮುಖ ಪಂದ್ಯಗಳಲ್ಲಿ ಕೈಕೊಟ್ಟಿದ್ದ ಬಾಬರ್ ಅಜಂ ಸುಲಭವಾಗಿ ಔಟ್‌ ಆಗುತ್ತಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲು ಪಾಕಿಸ್ತಾನ ನಾಯಕನಿಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ವಿಶ್ವಕಪ್ ಸಮೀಪದಲ್ಲಿರುವಾಗಲೇ ಬಾಬರ್ ಅಜಂ ಫಾರ್ಮ್ ಕಳೆದುಕೊಂಡಿದ್ದ ಚಿಂತೆಗೆ ಕಾರಣವಾಗಿತ್ತು, ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಅದ್ಭುತ ಶತಕದ ಮೂಲಕ ವಾಪಸಾಗಿದ್ದಾರೆ.

66 ಎಸೆತಗಳನ್ನು ಎದುರಿಸಿದ ಬಾಬರ್ ಅಜಂ 110 ರನ್ ಗಳಿಸಿದರು. ಇದರಲ್ಲಿ 11 ಬೌಂಡರಿ, 5 ಭರ್ಜರಿ ಸಿಕ್ಸರ್ ಗಳು ಇದ್ದವು.

IND vs AUS 2022: ಒಂದೆರಡು ಪ್ರದರ್ಶನ ನೀಡಿದ ಮಾತ್ರಕ್ಕೆ ಕೆಟ್ಟ ಬೌಲರ್ ಆಗಲಾರ

8000 ರನ್ ಗಳಿಸಿದ ಬಾಬರ್ ಅಜಂ

8000 ರನ್ ಗಳಿಸಿದ ಬಾಬರ್ ಅಜಂ

ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಬಾಬರ್ ಅಜಂ ಮತ್ತೊಂದು ಮಹತ್ವದ ಮೈಲಿಗಲ್ಲು ಮುಟ್ಟಿದರು. ಟಿ20 ಮಾದರಿ ಕ್ರಿಕೆಟ್‌ನಲ್ಲಿ 8000 ರನ್ ಗಳಿಸಿದ ಸಾಧನೆ ಮಾಡಿದರು. ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು.

ಬಾಬರ್ ಅಜಂ ಒಟ್ಟು 218 ಇನ್ನಿಂಗ್ಸ್‌ಗಳಲ್ಲಿ 8000 ರನ್ ಪೂರೈಸಿದರೆ, ವೆಸ್ಟ್ ಇಂಡೀಸ್‌ ದೈತ್ಯ ಕ್ರಿಸ್ ಗೇಲ್ 213 ಇನ್ನಿಂಗ್ಸ್‌ಗಳಲ್ಲಿ 8000 ಸಾವಿರ ರನ್ ಪೂರೈಸುವ ಮೂಲಕ ಮೊದಲನೇ ಸ್ಥಾನದಲ್ಲಿದ್ದಾರೆ. ಶೋಯೆಬ್ ಮಲಿಕ್ 8000 ರನ್ ಗಳಿಸಿದ ಮೊದಲ ಪಾಕಿಸ್ತಾನಿ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

 ಎರಡನೇ ಬಾರಿಗೆ 10 ವಿಕೆಟ್ ಗೆಲುವು

ಎರಡನೇ ಬಾರಿಗೆ 10 ವಿಕೆಟ್ ಗೆಲುವು

ಟಿ20 ಮಾದರಿಯಲ್ಲಿ ಪಾಕಿಸ್ತಾನ ಎರಡನೇ ಬಾರಿ 10 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೊದಲು 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತ ತಂಡದ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತ್ತು.

ಭಾರತ ನೀಡಿದ್ದ 152 ರನ್‌ಗಳ ಗುರಿಯನ್ನು 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿದ್ದರು. ಈಗ ಎರಡನೇ ಬಾರಿಗೆ 10 ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ, ಅದೂ ಕೂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ. ಟಿ20 ಮಾದರಿ ಕ್ರಿಕೆಟ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ಇದೇ ಮೊದಲ ಬಾರಿಗೆ 200 ರನ್ ಚೇಸ್ ಮಾಡಿ ಗೆದ್ದಿರುವುದು ದಾಖಲೆ.

ಪಾಕಿಸ್ತಾನದ ನಾಯಕನಾಗಿ 10ನೇ ಶತಕ

ಪಾಕಿಸ್ತಾನದ ನಾಯಕನಾಗಿ 10ನೇ ಶತಕ

ಅಜಮ್ ಪಾಕಿಸ್ತಾನದ ನಾಯಕನಾಗಿ ಹೆಚ್ಚಿನ ಅಂತರರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದಾರೆ. ಅವರು ಇಂಜಮಾಮ್-ಉಲ್-ಹಕ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಬಾಬರ್ ಈಗ ಪಾಕಿಸ್ತಾನದ ನಾಯಕನಾಗಿ 10 ಶತಕಗಳನ್ನು ಗಳಿಸಿದ್ದಾರೆ.

ಬಾಬರ್ 66 ಎಸೆತಗಳಲ್ಲಿ 110 ರನ್ ಗಳಿಸಿ ತಮ್ಮ ತಂಡವನ್ನು ಆರಾಮದಾಯಕ ಗೆಲುವಿನತ್ತ ಮುನ್ನಡೆಸಿದರು. ಅವರು 166 ಸ್ಟ್ರೈಕ್ ರೇಟ್‌ನೊಂದಿಗೆ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಹೊಡೆದರು. ಬಾಬರ್ 39 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು ಮತ್ತು ನಂತರ 27 ಎಸೆತಗಳಲ್ಲಿ ಮುಂದಿನ 60 ರನ್‌ ಗಳಿಸಿದರು. ಏಷ್ಯಾ ಕಪ್ 2022 ರ ಅಭಿಯಾನದಲ್ಲಿ ನೀರಸ ಪ್ರದರ್ಶನದ ನಂತರ, ಪಾಕಿಸ್ತಾನ ತಂಡ ಮತ್ತು ಅಭಿಮಾನಿಗಳಿಗೆ ತಮ್ಮ ನಾಯಕನು ಮತ್ತೆ ಫಾರ್ಮ್‌ಗೆ ಮರಳಿರುವುದು ಸಂತೋಷ ತಂದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 23, 2022, 1:09 [IST]
Other articles published on Sep 23, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X