ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Bangladesh Vs Zimbabwe: ಬೌಲರ್ ತಪ್ಪಿಲ್ಲದಿದ್ದರೂ, ಕೊನೆಯ ಎಸೆತ ನೋ ಬಾಲ್ ಎಂದು ನಿರ್ಣಯಿಸಿದ್ದೇಕೆ?

Bangla Vs Zimbabwe: Why The Last Ball Called No Ball Here The Reason

2022 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ಗ್ರೂಪ್ 2 ಪಂದ್ಯವು ರೋಚಕತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ ಜಿಂಬಾಬ್ವೆ ತಂಡಕ್ಕೆ ಗೆಲುವಿಗೆ 5 ರನ್ ಬೇಕಿದ್ದಾಗ, ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಸ್ಟಂಪ್ ಔಟ್ ಆದರು. ಬಾಂಗ್ಲಾ ದೇಶ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿತ್ತು. ಎರಡೂ ತಂಡಗಳ ಆಟಗಾರರು ಪರಸ್ಪರ ಥ್ಯಾಂಕ್ಸ್ ನೀಡುತ್ತಿದ್ದರು.

ಆದರೆ, ಆಗಲೇ ಪಂದ್ಯದಲ್ಲಿ ಮತ್ತೊಂದು ನಾಟಕೀಯ ತಿರುವು ಸಿಕ್ಕಿತ್ತು, ಮೂರನೇ ಅಂಪೈರ್ ಕೊನೆಯ ಎಸೆತವನ್ನು ಪರಿಶೀಲಿಸಿ ನೋಬಾಲ್ ಎಂದು ಘೋಷಿಸಿದರು. ಮೊಸಾದ್ದಿಕ್ ಹೊಸೈನ್ ಎಸೆತವನ್ನು ಬಾಂಗ್ಲಾದೇಶದ ವಿಕೆಟ್-ಕೀಪರ್ ನೂರುಲ್ ಹಸನ್ ಸ್ಟಂಪ್‌ನ ಮುಂಭಾಗದಲ್ಲಿ ಬಾಲ್ ಸಂಗ್ರಹಿಸಿದ ಕಾರಣ ಅದನ್ನು ನೋಬಾಲ್ ಎಂದು ಘೋಷಣೆ ಮಾಡಲಾಯಿತು.

ನೋ ಬಾಲ್ ಆಗಿದ್ದರಿಂದ ಮುಜರಬಾನಿಯನ್ನು ನಾಟೌಟ್ ಎಂದು ಅಂಪೈರ್ ಘೋಷಿಸಿದರು. ಮೈದಾನದಲ್ಲಿ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳನ್ನು ವಾಪಸ್ ಕರೆಸಿಕೊಂಡರು, ಬಾಂಗ್ಲಾದೇಶವನ್ನು ಮತ್ತೆ ಕೊನೆಯ ಎಸೆತವನ್ನು ಬೌಲ್ ಮಾಡಬೇಕಾಯಿತು.

T20 World Cup 2022: ಒಂದು ವೇಳೆ ರಿಷಬ್ ಪಂತ್ ಪಾಕಿಸ್ತಾನ ತಂಡದಲ್ಲಿದ್ದರೆ, ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗT20 World Cup 2022: ಒಂದು ವೇಳೆ ರಿಷಬ್ ಪಂತ್ ಪಾಕಿಸ್ತಾನ ತಂಡದಲ್ಲಿದ್ದರೆ, ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

ಮಧ್ಯದಲ್ಲಿ ನಾಟಕೀಯ ದೃಶ್ಯಗಳು ಕ್ರಿಕೆಟ್ ಅಭಿಮಾನಿಗಳನ್ನು ಕಂಗೆಡಿಸಿದವು. ಚೆಂಡನ್ನು ಮತ್ತೆ ಏಕೆ ಎಸೆಯಬೇಕು ಎಂದು ಹಲವರು ಪ್ರಶ್ನಿಸಿದರು. ಬಾಂಗ್ಲಾದೇಶ ಎರಡನೇ 'ಕೊನೆಯ ಎಸೆತ'ವನ್ನು ಡಾಟ್ ಬಾಲ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಆದರೆ, ಜಿಂಬಾಬ್ವೆ ಫ್ರೀಹಿಟ್‌ನಲ್ಲಿ ಬೌಂಡರಿ ಗಳಿಸಿದ್ದರೆ, ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು. ಆದರೂ, ನಿರ್ಧಾರವು ಆಟದ ನಿಯಮಗಳಿಗೆ ಅನುಗುಣವಾಗಿದೆ.

Bangla Vs Zimbabwe: Why The Last Ball Called No Ball Here The Reason

ನಿಯಮಗಳು ಹೇಳುವುದೇನು?

ವಿಕೆಟ್ ಕೀಪರ್ ಬಾಲ್ ಅನ್ನು ವಿಕೆಟ್ ಹಿಂದಷ್ಟೇ ಹಿಡಿಯಬೇಕಾ? ವಿಕೆಟ್ ಮುಂದೆ ಬಾಲ್ ಹಿಡಿದರೆ ನೋ ಬಾಲ್ ನೀಡಲಾಗುತ್ತಾ? ಈ ಬಗ್ಗೆ ನಿಯಮಗಳು ಏನು ಹೇಳುತ್ತವೆ ನೋಡೋಣ.

ಎಂಸಿಸಿ ನಿಯಮ 27.3.1 ಪ್ರಕಾರ "ಬಾಲ್ ಆಟಕ್ಕೆ ಬಂದ ಕ್ಷಣದಿಂದ ಬೌಲರ್ ನೀಡಿದ ಚೆಂಡು ಸ್ಟ್ರೈಕರ್‌ನ ಬ್ಯಾಟ್ ಅಥವಾ ವ್ಯಕ್ತಿಯನ್ನು ಮುಟ್ಟುವವರೆಗೆ ಅಥವಾ ವಿಕೆಟ್ ಅನ್ನು ಹಾದುಹೋಗುವವರೆಗೆ ಸ್ಟ್ರೈಕರ್‌ನ ಕೊನೆಯಲ್ಲಿ ವಿಕೆಟ್-ಕೀಪರ್ ಸಂಪೂರ್ಣವಾಗಿ ವಿಕೆಟ್ ಹಿಂದೆ ಉಳಿಯಬೇಕು."

ನಿಯಮ 27.3.2 ಹೇಳುತ್ತದೆ: "ವಿಕೆಟ್-ಕೀಪರ್ ಈ ಕಾನೂನನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ಸ್ಟ್ರೈಕರ್‌ನ ಅಂತಿಮ ಅಂಪೈರ್ ಚೆಂಡಿನ ಎಸೆತದ ನಂತರ ಅನ್ವಯವಾಗುವಷ್ಟು ಬೇಗ ನೋ ಬಾಲ್ ಅನ್ನು ಕರೆಯುತ್ತಾರೆ ಮತ್ತು ಸಂಕೇತಿಸುತ್ತಾರೆ."

ತನ್ನ ತಪ್ಪಿನ ನಂತರವೂ ಬಾಂಗ್ಲಾ ತಂಡ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಅವರು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದರು. ಮೂರು ಪಂದ್ಯಗಳಲ್ಲಿ ಎರಡು ಜಯ ಸಾಧಿಸಿದ್ದಾರೆ.

Story first published: Sunday, October 30, 2022, 18:42 [IST]
Other articles published on Oct 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X