ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ

Posted By:
BCCI announces India squad for T20i series against South africa, Raina Returns

ಬೆಂಗಳೂರು, ಜನವರಿ 28: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ 16 ಸದಸ್ಯರ ಟೀಂ ಇಂಡಿಯಾವನ್ನು ಭಾನುವಾರ ಬೆಳಗ್ಗೆ ಪ್ರಕಟಿಸಲಾಗಿದೆ. ಸುರೇಶ್ ರೈನಾ ತಂಡಕ್ಕೆ ಮರಳಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಮುಂಬೈನಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿದಂತೆ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕರಾಗಿದ್ದು, ರೋಹಿತ್ ಶರ್ಮ ಉಪ ನಾಯಕರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ಶನಿವಾರ(ಜನವರಿ 27) ದಂದು ಮುಕ್ತಾಯವಾಗಿದ್ದು, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಕೊನೆ ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಇದಲ್ಲದೆ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 3 ಟಿ20ಐ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ.

BCCI announces squad for T20i series against South africa, Raina Returns

ಟಿ20 ವೇಳಾಪಟ್ಟಿ
* ಮೊದಲ ಟಿ20 ಪಂದ್ಯ, ಫೆಬ್ರವರಿ 18ರಂದು ಜೋಹಾನ್ಸ್ ಬರ್ಗ್.
* 2ನೇ ಟಿ20 ಪಂದ್ಯ, ಫೆಬ್ರವರಿ 21ರಂದು ಸೆಂಚುರಿಯನ್.
* 3ನೇ ಟಿ20 ಪಂದ್ಯ, ಫೆಬ್ರವರಿ 24ರಂದು ಕೇಪ್ ಟೌನ್.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ ನಾಯಕ), ಕೆಎಲ್ ರಾಹುಲ್, ಸುರೇಶ್ ರೈನಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಜಯದೇವ್ ಉನದ್ಕತ್, ಶಾರ್ದೂಲ್ ಠಾಕೂರ್.

Story first published: Sunday, January 28, 2018, 11:58 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ