ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟೂರ್ನಿ ಮಾದರಿ ಬದಲಾವಣೆ ಸುದ್ದಿಯನ್ನು ತಳ್ಳಿಹಾಕಿದ ಬಿಸಿಸಿಐ

Bcci Denies Talks Of Ranji Trophy Format Change

ರಣಜಿ ಟೂರ್ನಮೆಂಟ್‌ನ ಮಾದರಿಯಲ್ಲಿ ಬದಲಾವಣೆಯನ್ನು ತರಲಾಗುತ್ತಿದೆ ಅದಕ್ಕಾಗಿ ಸಿದ್ದತೆಗಳು ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಇದು ನಿಜವಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ರಣಜಿ ಟೂರ್ನಿಯ ಮಾದರಿಯಲ್ಲಿ ಯಾವುದೇ ರೀತಿಯ ಬದಲಾವಣೆ ತರುವ ಚಿಂತನೆಗಳು ಇಲ್ಲ ಎಂದು ತಿಳಿಸಿದೆ.

ರಣಜಿ ಟ್ರೋಫಿಯಲ್ಲಿ ಬದಲಾವಣೆ ತರಲು ನಾವು ಯಾವುದೇ ಪ್ರಸ್ತಾವನೆಯನ್ನು ಕಳುಹಿಸಿಲ್ಲ ಎಂದು ಬಿಸಿಸಿಐನ ಅಧಿಕಾರಿ ಸಬಾ ಕರಿಮ್ ಹೇಳಿದ್ದಾರೆ. ನನಗೆ ಯಾವುದೇ ಮಾಹಿತಿಯಿಲ್ಲ. ನಾನು ಯಾವುದೇ ಬದಲಾವಣೆಗೆ ಸಂಬಂಧಪಟ್ಟಂತೆ ಪ್ರಸ್ತಾವನೆಯನ್ನು ಕಳುಹಿಸಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಈಗ ಇರುವ ಮಾದರಿಯಲ್ಲಿ ರಣಜಿ ಪಂದ್ಯಗಳು ನಾಲ್ಕು ವಿಭಾಗಗಳಾಗಿ ಮಾಡಿ ಆ ವಿಭಾಗಗಳ ಮಧ್ಯೆ ತಂಡಗಳು ಕಾದಾಟವನ್ನು ನಡೆಸುತ್ತದೆ. ಗ್ರೂಪ್ ಎ ಮತ್ತು ಬಿ ತಲಾ 9 ತಂಡಗಳನ್ನು ಹೊಂದಿದ್ದರೆ, ಗ್ರೂಪ್ ಸಿ ಮತ್ತು ಡಿ ತಲಾ ಹತ್ತು ತಂಡಗಳನ್ನು ಹೊಂದಿದೆ.

ಇದೇ ವರ್ಷ ಐಪಿಎಲ್ ನಡೆಯುತ್ತೆ ಅಂತಿದ್ದಾರೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆಇದೇ ವರ್ಷ ಐಪಿಎಲ್ ನಡೆಯುತ್ತೆ ಅಂತಿದ್ದಾರೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ

ಈ ಮಾದರಿಯನ್ನು ಬದಲಾಯಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿತ್ತು, ಆದರೆ ಬಿಸಿಸಿಐ ಈ ಬದಲಾವಣೆಯ ಪ್ರಸ್ತಾಪವಾಗಿಲ್ಲ, ಆ ರೀತಿಯ ಯೋಚನೆಗಳು ನಮ್ಮ ಮುಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಮುಂದಿನ ರಣಜಿ ಟ್ರೋಫಿ ಈ ಹಿಂದೆ ಇದ್ದ ಮಾದರಿಯಲ್ಲೇ ಮುಂದುವರಿಯಲಿದೆ.

2019-20ನೇ ಸಾಲಿನ ರಣಜಿ ಟ್ರೋಫಿಯ ವಿಜೇತ ತಂಡವಾಗಿ ಸೌರಾಷ್ಟ್ರ ಹೊರಹೊಮ್ಮಿತ್ತು. ಕೊರೊನಾ ವೈರಸ್‌ನ ಕಾರಣದಿಂದಾಗಿ ರಣಜಿಯ ಫೈನಲ್ ಪಂದ್ಯ ವೀಕ್ಷಕರಿಲ್ಲದೇ ನಡೆದಿತ್ತು. ಬಳಿಕ ಕೊರೊನ ವೈರಸ್‌ನ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು.

Story first published: Thursday, May 28, 2020, 15:36 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X