ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ

Posted By:
BCCI gives clean chit to Mohammed Shami, can play IPL 11 DD

ಬೆಂಗಳೂರು, ಮಾರ್ಚ್ 22: ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ವೇಗಿ ಮೊಹಮ್ಮದ್ ಶಮಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕ್ಲೀನ್ ಚಿಟ್ ನೀಡಿದೆ. ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಶಮಿ ಭಾಗಿಯಾಗಿದ್ದಾರೆ, ಪಾಕಿಸ್ತಾನಿ ಯುವತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಈ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ನಡೆಸಿದ್ದು, ತನ್ನ ವರದಿಯನ್ನು ನೀಡಿದ್ದು, ಶಮಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಹೀಗಾಗಿ, ವಾರ್ಷಿಕ ಬಿ ಶ್ರೇಣಿ ಗುತ್ತಿಗೆಗೆ ಶಮಿ ಅರ್ಹರಾಗಿದ್ದು, 3 ಕೋಟಿ ರು ಪಡೆಯಬಹುದಾಗಿದೆ. ಕಳೆದ ತಿಂಗಳು ಪ್ರಕಟಗೊಂಡ ಗುತ್ತಿಗೆ ಪಟ್ಟಿಯಲ್ಲಿ ಶಮಿ ಹೆಸರು ಸೇರಿಸಿರಲಿಲ್ಲ.

ಆರೋಪ ಮುಕ್ತರಾಗಿರುವ ಶಮಿ ಅವರು ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಬಹುದಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 22, 2018, 18:41 [IST]
Other articles published on Mar 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ