ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಪ್ಲೇ ಆಫ್ಸ್‌ ಪಂದ್ಯಗಳಿಂದ 20 ಕೋಟಿ ರೂ. ಜೇಬಿಗಿಳಿಸಲಿರುವ ಬಿಸಿಸಿಐ

BCCI look to pocket Rs 20 cr from IPL playoffs

ಹೊಸದಿಲ್ಲಿ, ಏಪ್ರಿಲ್‌ 30: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2019ರ ಫ್ಲೇ ಆಫ್ಸ್‌ ಪಂದ್ಯಗಳ ಟಿಕೆಟ್‌ ಮಾರಾಟದ ಮೂಲಕ ಒಟ್ಟಾರೆ 20 ಕೋಟಿ ರೂ.ಗಳ ಭಾರಿ ಮೊತ್ತವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಜೇಬಿಗಿಳಿಸಲು ಸಜ್ಜಾಗಿದೆ.

 ಕೊಹ್ಲಿ, ಧೋನಿ ಮೇಲೆ ಅಪಾರ ಗೌರವವಿದೆ: ಆರೊನ್‌ ಫಿಂಚ್‌ ಕೊಹ್ಲಿ, ಧೋನಿ ಮೇಲೆ ಅಪಾರ ಗೌರವವಿದೆ: ಆರೊನ್‌ ಫಿಂಚ್‌

ಟೂರ್ನಿಯ ಗ್ರೂಪ್‌ ಹಂತದಲ್ಲಿನ ಟಿಕೆಟ್‌ಗಳ ಮಾರಾಟದಿಂದ ಬಂದ ಹಣವವನ್ನು ವಿವಿಧ ಫ್ರಾಂಚೈಸಿ ತಂಡಗಳು ಹಂಚಿಕೊಂಡರೆ, ಪ್ಲೇ ಆಫ್ಸ್‌ ಪಂದ್ಯಗಳಿಂದ ಸಂಗ್ರವಾಗುವ ಮೊತ್ತವು ಬಿಸಿಸಿಐ ಪಾಲಾಗುತ್ತದೆ.

 ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

ಅಂದಹಾಗೆ ಈ ಬಾರಿಯ ಐಪಿಎಲ್‌ ಪ್ಲೇ ಆಫ್ಸ್‌ ಪಂದ್ಯಗಳ ಮೂಲಕ ಬಿಸಿಸಿಐ 2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಎದುರು ನೋಡುತ್ತಿದೆ. ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್ಸ್‌ ಹಣಾಹಣಿಗಳಿಂದ ಬಿಸಿಸಿಐ ಒಟ್ಟಾರೆ 18 ಕೋಟಿ ರೂ. ಮೊತ್ತ ಸಂಪಾದಿಸಿತ್ತು. ಇದೀಗ 20 ಕೋಟಿ ರೂ. ಗಳಿಸುವ ಲೆಕ್ಕಾಚಾರದಲ್ಲಿದೆ.

 ಬಿಸಿಸಿಐಗೆ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌ಮೇಲ್‌ ಮೇಲ್‌! ಬಿಸಿಸಿಐಗೆ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌ಮೇಲ್‌ ಮೇಲ್‌!

2019ರ ಸಾಲಿನ ಐಪಿಎಲ್‌ ಟೂರ್ನಿಯ ಫೈನಲ್‌ ಪಂಡ್ಯವು ಈ ಬಾರಿ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೇ 12ರಂದು ನಡೆಯಲಿದೆ. ತಮಿಳುನಾಡು ಕ್ರಿಕೆಟ್‌ ಸಂಸ್ಥೆಯು ಐ, ಜೆ, ಕೆ ಸ್ಟ್ಯಾಂಡ್ಸ್‌ಗಳನ್ನು ತೆರೆಯಲು ಅನುಮತಿಸದ ಕಾರಣ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯ ಬೇಕಿದ್ದ ಫೈನಲ್‌ ಪಂದ್ಯವನ್ನು ಹೈದರಾಬಾದ್‌ಗೆ ವರ್ಗಾಯಿಸಲಾಯಿತು. ಆದರೂ ಕ್ವಾಲಿಫೈಯರ್‌ 1 ಪಂದ್ಯ ಚೆನ್ನೈನಲ್ಲೇ ನಡೆಯಲಿದೆ.

 ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ

ಮೇ 7ರಂದು ಚೆನ್ನೈನಲ್ಲಿ ಕ್ವಾಲಿಫೈಯರ್‌ 1 ಪಂದ್ಯ ನಡೆಯಲಿದ್ದು, ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ 2 ಪಂದ್ಯಗಳು ವೈಝಾಗ್‌ನಲ್ಲಿ ನಡೆಯಲಿವೆ. ಸಾಮಾನ್ಯವಾಗಿ ಪ್ಲೇ ಆಫ್ಸ್‌ ಪಂದ್ಯಗಳನ್ನು ಹಿಂದಿನ ಚಾಂಪಿಯನ್ಸ್‌ ಮತ್ತು ರನ್ನರ್ಸ್‌ಅಪ್‌ ತಂಡಗಳ ತವರಿನಲ್ಲಿ ನಡೆಸಲಾಗುತ್ತದೆ.

Story first published: Tuesday, April 30, 2019, 16:36 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X