ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ- ವಿಂಡೀಸ್ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಮೈದಾನ ನಿಗದಿ?

By Mahesh
BCCI marks Hyderabad or Rajkot as venue for day-night Test, waits for CoA nod

ಬೆಂಗಳೂರುಮ್ ಮಾರ್ಚ್ 18 : ಮುಂದಿನ ನವೆಂಬರ್ ತಿಂಗಳಿನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಮೈದಾನ ಬಹುತೇಕ ನಿಗದಿಯಾಗಿದೆ.

ಹೈದರಾಬಾದ್ ಅಥವಾ ರಾಜ್ ಕೋಟ್ ನಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳು ಹೇಳಿವೆ.

ಆದರೆ, ಕ್ರಿಕೆಟ್ ಆಡಳಿತ ಸಮಿತಿ(ಸಿಒಎ) ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡ ಬಳಿಕ, ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ಮೈಖೇಲ್ ಪ್ರತಿನಿಧಿಗೆ ತಿಳಿಸಿದರು.

ಜೂನ್ ನಲ್ಲಿ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವಾಡಲಿದೆ ಭಾರತವು ತನ್ನ ತವರು ನೆಲದಲ್ಲಿ ಈ ವರ್ಷ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲದೆ, ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 3 ಟಿ20ಐ ಪಂದ್ಯಗಳು ನಿಗದಿಯಾಗಿವೆ.

ಕೊಚ್ಚಿ, ಇಂದೋರ್, ಮುಂಬೈ, ಗುವಾಹಟಿ ಹಾಗೂ ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ನಂತರ ಆಸ್ಟ್ರೇಲಿಯಾ ವಿರುದ್ಧ ಭಾರತ ಪಂದ್ಯಗಳನ್ನಾಡಲಿದೆ.

2019ರಲ್ಲಿ ಭಾರತದಲ್ಲಿ ಆಸ್ಟ್ರೇಲಿಯಾ ಐದು ಅಂತಾರಾಷ್ಟ್ರೀಯ ಪಂದ್ಯ ಹಾಗೂ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

ಏಕದಿನ ಪಂದ್ಯಗಳು:
ಫೆಬ್ರವರಿ 24ರಂದು ಮೊಹಾಲಿ,
ಫೆಬ್ರವರಿ 27ರಂದು ಹೈದಾರಾಬಾದ್
ಮಾರ್ಚ್ 02ರಂದು ನಾಗ್ಪುರ್
ಮಾರ್ಚ್ 05ರಂದು ದೆಹಲಿ
ಮಾರ್ಚ್ 08ರಂದು ರಾಂಚಿ

ಟಿ20 ಪಂದ್ಯಗಳು
ಮಾರ್ಚ್ 10ರಂದು ಬೆಂಗಳೂರು
ಮಾರ್ಚ್ 13ರಂದು ವಿಶಾಖಪಟ್ಟಣಂ

Story first published: Sunday, March 18, 2018, 14:46 [IST]
Other articles published on Mar 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X