ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!

IPL 2020 : BCCI scraps IPL opening ceremony and calls it a waste of money
BCCI scraps opening ceremony, calls it ‘waste of money’ - Report

ಬೆಂಗಳೂರು, ನವೆಂಬರ್ 6: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಆರಂಭೋತ್ಸವ ಯಾವತ್ತಿಗೂ ಆಕರ್ಷಣೀಯವಾಗಿ, ಕುತೂಹಲಕಾರಿಯಾಗಿ ಇರುತ್ತಿತ್ತು. ಆದರೆ ಇನ್ಮುಂದೆ ಐಪಿಎಲ್‌ ಆರಂಭೋತ್ಸವ ಇರಲಾರದು. ಬಿಸಿಸಿಐ ಐಪಿಎಲ್‌ನ ಅದ್ಧೂರಿ ಆರಂಭ ಕಾರ್ಯಕ್ರಮಕ್ಕೆ ಸೋಮವಾರ (ನವೆಂಬರ್ 4) ಅಂತ್ಯ ಹಾಡಿದೆ ಎನ್ನಲಾಗಿದೆ.

ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!

ಬಾಲಿವುಡ್‌ ಶೈಲಿಯಲ್ಲಿ ಅದ್ದೂರಿ ಆರಂಭೋತ್ಸವವನ್ನು ಪ್ರತೀ ಐಪಿಎಲ್ ಟೂರ್ನಿ ವೇಳೆಯೂ ನಡೆಸಲಾಗುತ್ತಿತ್ತು. ಆದರೆ ಆರಂಭೋತ್ಸವನ್ನು 'ಹಣದ ವ್ಯರ್ಥ'ವೆಂದು ಕರೆದಿರುವ ಬಿಸಿಸಿಐ, ಮುಂದಿನ ಐಪಿಎಲ್‌ ಆವೃತ್ತಿಯಿಂದಲೇ ಆರಂಭೋತ್ಸವ ನಡೆಸದಿರುವ ಬಗ್ಗೆ ನಿರ್ಧರಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!

ಐಪಿಎಲ್ ಆರಂಭೋತ್ಸವಕ್ಕೆ ಸುಮಾರು 30 ಕೋಟಿ. ರೂ.ಗಳಷ್ಟು ಹಣ ವ್ಯಯವಾಗುತ್ತಿತ್ತು. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಕಳೆದ ವರ್ಷವೊಂದನ್ನು ಬಿಟ್ಟು ಆರಂಭೋತ್ಸವ ನಡೆಸಲಾಗಿತ್ತು. ಕಳೆದ ವರ್ಷ ಮಾತ್ರ ಆರಂಭೋತ್ಸಕ್ಕೆ ಖರ್ಚಾಗಲಿದ್ದ ಹಣವನ್ನು ಬಿಸಿಸಿಐ, ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ನೀಡಿತ್ತು.

ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!

'ಆರಂಭೋತ್ಸವ ಹಣದ ವ್ಯರ್ಥವಾಗಿ ಕಾಣಿಸುತ್ತಿದೆ. ಕ್ರಿಕೆಟ್ ಪ್ರಿಯರೂ ಅತ್ತ ಅಂಥದ್ದೇನೂ ಆಸಕ್ತಿ ತೋರುತ್ತಿಲ್ಲ,' ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಹಿಂದೆ ಐಪಿಎಲ್ ಅದ್ದೂರಿ ಆರಂಭೋತ್ಸವದಲ್ಲಿ ಕೇಟಿ ಪೆರ್ರಿ (ಅಮೆರಿಕಾದ ಹಾಡುಗಾರ್ತಿ), ಅ್ಯಕಾನ್ (ಅಮೆರಿಕಾ ಸಿಂಗರ್), ಪಿಟ್‌ಬುಲ್ (ಅಮೆರಿಕಾದ ರ್ಯಾಪರ್) ಸಲ್ಮಾನ್ ಖಾನ್, ಕತ್ರೀನಾ ಕೈಫ್ ಇಂಥ ಅನೇಕ ಖ್ಯಾತ ಕಲಾವಿದರು ಮನರಂಜನಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

Story first published: Wednesday, November 6, 2019, 20:11 [IST]
Other articles published on Nov 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X