ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI ಚುನಾವಣೆ ಮತ್ತು AGM ಕುರಿತು ದಿನಾಂಕ ಘೋಷಣೆ: ಅ.18ರಂದು ಮುಂಬೈನಲ್ಲಿ ಚುನಾವಣೆ

Sourav ganguly and BCCI

ಮುಂಬರುವ ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಅಂದೇ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಚುನಾವಣೆಯೂ ನಡೆಯಲಿದೆ. ಜೊತೆಗೆ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಕೂಡ ನಡೆಯಲಿದೆ.

ಬಿಸಿಸಿಐ ಈಗಾಗಲೇ ವಾರ್ಷಿಕ ಸಭೆಗಳ ನೋಟಿಸ್‌ಗಳನ್ನು ರಾಜ್ಯ ಸಂಸ್ಥೆಗಳಿಗೆ ಕಳುಹಿಸಿದೆ. ನೋಟೀಸ್‌ನಲ್ಲಿ ಚುನಾವಣೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಲ್ಲಿ ಬಿಸಿಸಿಐ ಅನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಈ ಸಭೆ ನಿರ್ಧರಿಸುತ್ತದೆ. ಬಿಸಿಸಿಐ ಪರ ಪ್ರಸ್ತುತ ಐಸಿಸಿಯಲ್ಲಿ ಸೌರವ್ ಗಂಗೂಲಿ ಮತ್ತು ಜೈ ಶಾ ಪ್ರತಿನಿಧಿಸುತ್ತಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಸ್ಪರ್ಧಿಸುತ್ತಾರೆಯೇ?

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಸ್ಪರ್ಧಿಸುತ್ತಾರೆಯೇ?

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದನ್ನು ಅಕ್ಟೋಬರ್ 18 ರಂದು ನೋಡಬಹುದು ಮತ್ತು ಅವರು ಸ್ಪರ್ಧಿಸಿದರೆ ಅವರೇ ಬಹುತೇಕ ಗೆಲ್ಲಬಹುದು. ಆದರೆ, ಮೂಲವೊಂದರ ಪ್ರಕಾರ ಸೌರವ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಮತ್ತು ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವ ಅಮಿತ್ ಶಾ ಪುತ್ರ ಜಯ್ ಶಾ ಮುಂದಿನ ಅಧ್ಯಕ್ಷರಾಗಲಿದ್ದಾರೆ.

ಜಯ್ ಷಾ ಭಾರತೀಯ ಕ್ರಿಕೆಟ್‌ನ ಅತ್ಯುನ್ನತ ಹುದ್ದೆಯನ್ನು ಪಡೆದರೆ ಪ್ರಸ್ತುತ ಖಜಾಂಚಿ ಅರುಣ್ ಧುಮಾಲ್ ಅವರನ್ನು ಕಾರ್ಯದರ್ಶಿಯಾಗಿ ನೋಡಬಹುದು. ವರ್ಷದ ಕೂಲಿಂಗ್ ಅವಧಿಯನ್ನು ಪೂರ್ಣಗೊಳಿಸಿರುವ ಬಿಸಿಸಿಐ ಮಾಜಿ ಖಜಾಂಚಿ ಅನಿರುದ್ಧ್ ಚೌಧರಿ ಸ್ಪರ್ಧಿಸಬಹುದು. ರೋಹನ್ ಜೇಟ್ಲಿಯನ್ನು ಮಂಡಳಿಯಲ್ಲಿ ಯಾವುದೇ ಪ್ರಮುಖ ಸ್ಥಾನದಲ್ಲಿ ಕಾಣಬಹುದು. ರಾಜೀವ್ ಶುಕ್ಲಾ ಅವರನ್ನು ಐಪಿಎಲ್ ಅಧ್ಯಕ್ಷರಾಗಿ ಕಾಣಬಹುದು.

ಮಹಿಳಾ IPL ಲೀಗ್ ಕುರಿತು ಸೌರವ್ ಗಂಗೂಲಿ ಸ್ಪಷ್ಟನೆ: ಸದ್ಯದಲ್ಲೇ ಟೂರ್ನಿ ಕುರಿತು ಘೋಷಣೆ

ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದೆ AGM

ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದೆ AGM

ಬಿಸಿಸಿಐ ನಿಯಮಗಳ ಪ್ರಕಾರ, ವಾರ್ಷಿಕ ಸಭೆಯನ್ನು ಪ್ರತಿ ವರ್ಷ ನಡೆಸಬೇಕು ಮತ್ತು ದಿನಾಂಕ ಮತ್ತು ಸ್ಥಳವನ್ನು ಅಧ್ಯಕ್ಷರು ನಿಗದಿಪಡಿಸುತ್ತಾರೆ. ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ವಾರ್ಷಿಕ ಸಾಮಾನ್ಯ ಸಭೆಗಳು ಮತ್ತು ಚುನಾವಣೆಗಳಿಗೆ ಪ್ರತಿನಿಧಿಗಳ ಹೆಸರನ್ನು ಕಳುಹಿಸಲು ರಾಜ್ಯ ಸಂಸ್ಥೆಗಳನ್ನು ಕೇಳಲಾಗಿದೆ. ಸೌರವ್ ಗಂಗೂಲಿ ಅವರು ಬಂಗಾಳದಿಂದ CAB ಅನ್ನು ಪ್ರತಿನಿಧಿಸುತ್ತಿದ್ದಾರೆ. ಹೊಸ ನಿಯಮಗಳು ಮಂಡಳಿಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಪ್ರತಿನಿಧಿಸಲು ಅವಕಾಶ ನೀಡುತ್ತವೆ. ಅದರಂತೆ, ಸೌರವ್ ಯಾವುದೇ ಕಾರಣಕ್ಕೂ ಪ್ರತಿನಿಧಿಸಲು ಸಾಧ್ಯವಾಗದಿದ್ದರೆ ಸಿಎಬಿ ಪರವಾಗಿ ಅಭಿಷೇಕ್ ದಾಲ್ಮಿಯಾ ಮಂಡಳಿಯ ಸಭೆಗೆ ಹಾಜರಾಗುತ್ತಾರೆ.

'ನನ್ನ ಮಗಳು ಸನಾ ಕ್ರಿಕೆಟ್ ಆಡಿದ್ದರೆ, ಈಕೆಯಂತಾಗಲಿ ಎಂದು ಹೇಳುತ್ತಿದ್ದೆ'; ಸೀಕ್ರೆಟ್ ಬಿಚ್ಚಿಟ್ಟ ಸೌರವ್ ಗಂಗೂಲಿ

ಅಕ್ಟೋಬರ್ 18ರಂದು ಬಿಸಿಸಿಐ ಚುನಾವಣೆ!

ಅಕ್ಟೋಬರ್ 18ರಂದು ಬಿಸಿಸಿಐ ಚುನಾವಣೆ!

"ಇದೀಗ ನಾವು ಬಿಸಿಸಿಐ ಚುನಾವಣೆಯನ್ನು ಅಕ್ಟೋಬರ್ 18 ರಂದು ನಡೆಸಲು ನಿರ್ಧರಿಸಿದ್ದೇವೆ. ಚುನಾವಣಾ ಅಧಿಕಾರಿಯ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ವಾರ್ಷಿಕ ಸಭೆಯಲ್ಲಿ ಮಂಡಳಿಯು ಹೊಸ ಸಲಹಾ ಸಮಿತಿಯನ್ನೂ ರಚಿಸಲಿದೆ. ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರು ತಮ್ಮ ಸ್ಥಾನಗಳಿಗೆ ಮರು ಆಯ್ಕೆಯಾದರೆ 2025 ರವರೆಗೆ ಅಧಿಕಾರದಲ್ಲಿ ಇರುತ್ತಾರೆ.

Story first published: Thursday, September 22, 2022, 23:11 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X