ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಖೇಲ್ ಆಯ್ಕೆಯ ಐಪಿಎಲ್ 2018ರ ಶ್ರೇಷ್ಠ XI

By ಮೈಖೇಲ್ ತಂಡ

ಬೆಂಗಳೂರು, ಜೂನ್ 03: ಹತ್ತು ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಉತ್ತಮ ವೇದಿಕೆ ಒದಗಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ಅಂತಿಮವಾಗಿ ವಿಜೃಂಭಿಸಿದ್ದು, ಹಿರಿಯರ ತಂಡ ಎಂದರೆ ತಪ್ಪಾಗಲಾರದು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂಭತ್ತಕ್ಕೂ ಅಧಿಕ ಮಂದಿ 30 ಪ್ಲಸ್ ವಯಸ್ಸಿನವರಿದ್ದರು ಎಂಬುದು ವಿಶೇಷ.

ಕೆಎಲ್ ರಾಹುಲ್ ಅವರು ನಿರೀಕ್ಷೆಗೂ ಮೀರಿ ಉತ್ತಮವಾಗಿ ಆಡಿದರು.36 ವರ್ಷ ವಯಸ್ಸಿನ ಶೇನ್ ವಾಟ್ಸನ್ ಅವರು ಅನಿರೀಕ್ಷಿತ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠರೆನಿಸಿದರು.

ಐಪಿಎಲ್ 2018: ವಾಟ್ಸನ್ ನಿಂದ ಕೃಷ್ಣ ತನಕ ಅನಿರೀಕ್ಷಿತವಾಗಿ ಮಿಂಚಿದ XIಐಪಿಎಲ್ 2018: ವಾಟ್ಸನ್ ನಿಂದ ಕೃಷ್ಣ ತನಕ ಅನಿರೀಕ್ಷಿತವಾಗಿ ಮಿಂಚಿದ XI

2018ರಲ್ಲಿ ನಿರೀಕ್ಷೆಗೂ ಮೀರಿ, ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ, ಗಮನ ಸೆಳೆದರೆ, ಐಪಿಎಲ್ ಹರಾಜಿನಲ್ಲಿ ಹೆಚ್ಚು ಸದ್ದು ಮಾಡದ ಆಟಗಾರರು, ಮೈದಾನದಲ್ಲಿ ಆರ್ಭಟಿಸಿದರು. ಮೈಖೇಲ್ ಆಯ್ಕೆಯ ಶ್ರೇಷ್ಠ ಹನ್ನೊಂದು ಆಟಗಾರರ ಪಟ್ಟಿ ಇಲ್ಲಿದೆ...

ಕೆಎಲ್ ರಾಹುಲ್ (ಕಿಂಗ್ಸ್ ಎಲೆವನ್ ಪಂಜಾಬ್)

ಕೆಎಲ್ ರಾಹುಲ್ (ಕಿಂಗ್ಸ್ ಎಲೆವನ್ ಪಂಜಾಬ್)

ಕರ್ನಾಟಕದ ಬಲಗೈ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡುತ್ತಾ 14 ಪಂದ್ಯಗಳಲ್ಲಿ 659ರನ್ ಗಳಿಸಿದ್ದು. 158 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನಿರಂತರವಾಗಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಲ್ಲದೆ, ತ್ವರಿತಗತಿಯಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್)

ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್)

2017ರಲ್ಲಿ ಆರ್ ಸಿಬಿ ಪರ ಆಡಿದ್ದ ಶೇನ್ ವಾಟ್ಸನ್ 11.16 ರನ್ ಸರಾಸರಿಯಂತೆ 67ರನ್ ಹಾಗೂ 10.02 ಎಕಾನಮಿ ರೇಟ್ ನಂತೆ 4 ವಿಕೆಟ್ ಗಳಿಸಿದ್ದರು. ಈ ಬಾರಿ ಐಪಿಎಲ್ ಆಡುವುದೇ ಅನುಮಾನ ಎನಿಸಿದ್ದಾಗ, ಚೆನ್ನೈ ತಂಡ ಸೇರಿದರು.

36 ವರ್ಷ ವಯಸ್ಸಿನ ಶೇನ್ ವಾಟ್ಸನ್ 2008ರಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದಂತೆ 2018ರಲ್ಲೂ ಮಿಂಚಿದರು. 154.60 ಸ್ಟ್ರೈಕ್ ರೇಟ್ ನಂತೆ 555ರನ್ ಚೆಚ್ಚಿದರು. 15 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧ ಶತಕ ಬಾರಿಸಿ, ಚೆನ್ನೈ ತಂಡವು ಕಪ್ ಎತ್ತಲು ನೆರವಾದರು.

ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದರಾಬಾದ್)

ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದರಾಬಾದ್)

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು. 16 ಪಂದ್ಯಗಳಿಂದ 735ರನ್ ಚೆಚ್ಚಿ ಕಿತ್ತಳೆ ಟೋಪಿ ಧರಿಸಿದರು. 8 ಅರ್ಧಶತಕ ಬಾರಿಸಿದರು.

ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದಲ್ಲದೆ, ತಂಡವನ್ನು ಫೈನಲ್ ಹಂತಕ್ಕೇರಿಸಿದರು. ಎಲ್ಲಾ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ಚೆನ್ನೈ ವಿರುದ್ಧ ಫೈನಲ್ ಪಂದ್ಯ ಸೇರದಂತೆ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತು.

ಅಂಬಟಿ ರಾಯುಡು (ಚೆನ್ನೈ ಸೂಪರ್ ಕಿಂಗ್ಸ್)

ಅಂಬಟಿ ರಾಯುಡು (ಚೆನ್ನೈ ಸೂಪರ್ ಕಿಂಗ್ಸ್)

ಮುಂಬೈ ಇಂಡಿಯನ್ಸ್ ತಂಡದಿಂದ ಕೈ ಬಿಟ್ಟ ಪ್ರತಿಭೆ ಅಂಬಟಿ ರಾಯುಡು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದರು. 16 ಪಂದ್ಯಗಳನ್ನಾಡಿ 602ರನ್ ಬಾರಿಸಿದರು. 32 ವರ್ಷ ವಯಸ್ಸಿನ ರಾಯುಡು ಮೂರು ಅರ್ಧಶತಕ ಹಾಗೂ ಒಂದು ಶತಕ ಗಳಿಸಿದರು.

ಇನ್ನಿಂಗ್ಸ್ ಆರಂಭಿಸುವಂತೆ ಎಂಎಸ್ ಧೋನಿ ಸೂಚಿಸಿದ್ದು, ಅಂಬಟಿ ರಾಯುಡುಗೆ ವರದಾನವಾಯಿತು. ರಾಯುಡು ಮತ್ತೊಮ್ಮೆ ಟೀಂ ಇಂಡಿಯಾ ಸೇರಲು ಸಹಕಾರಿಯಾಯಿತು.

ರಿಷಬ್ ಪಂತ್ (ಡೆಲ್ಲಿ ಡೇರ್ ಡೆವಿಲ್ಸ್)

ರಿಷಬ್ ಪಂತ್ (ಡೆಲ್ಲಿ ಡೇರ್ ಡೆವಿಲ್ಸ್)

ಐಪಿಎಲ್ ನ ಉದಯೋನ್ಮುಖ ಆಟಗಾರ, ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂಬ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಾ 684ರನ್ ಗಳಿಸಿದ್ದು, ಕೇನ್ ವಿಲಿಯಮ್ಸನ್ ನಂತರದ ಸ್ಥಾನ ಗಳಿಸಿದ್ದಾರೆ. 173.60 ಸ್ಟೈಕ್ ರೇಟ್ ನಂತೆ ರನ್ ಚೆಚ್ಚಿದ ರಿಷಬ್ ಪಂತ್ ಅವರು ಈ ಬಾರಿಯ ಉತ್ತಮ ಯುವ ಆಟಗಾರನಾಗಿ ಹೊರಹೊಮ್ಮಿದರು.

ಎಂಎಸ್ ಧೋನಿ(ನಾಯಕ, ಚೆನ್ನೈ ಸೂಪರ್ ಕಿಂಗ್ಸ್)

ಎಂಎಸ್ ಧೋನಿ(ನಾಯಕ, ಚೆನ್ನೈ ಸೂಪರ್ ಕಿಂಗ್ಸ್)

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರು ಮತ್ತೊಮ್ಮೆ ಚೆನ್ನೈ ಪರ ನಾಯಕರಾಗಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದರು. 150.66 ಸ್ಟ್ರೈಕ್ ರೇಟ್ ನಂತೆ 455ರನ್ ಬಾರಿಸಿದರು. ವಿಕೆಟ್ ಕೀಪರ್ ಆಗಿ 14 ವಿಕೆಟ್ ಕಬಳಿಸಿದ್ದಾರೆ. ಫೈನಲ್ ತನಕ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು.

ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್)

ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್)

ಮುಂಬೈ ಇಂಡಿಯನ್ಸ್ ನ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು 13 ಪಂದ್ಯಗಳಿಂದ 18 ವಿಕೆಟ್ ಹಾಗೂ 260ರನ್ ಗಳಿಸಿದರು. ತಂಡಕ್ಕೆ ಹಲವು ಬಾರಿ ತಿರುವು ನೀಡಬಲ್ಲ ಸನ್ನಿವೇಶ ತಂದ ಹಾರ್ದಿಕ್ ಪಾಂಡ್ಯ ಅವರಿಗೆ ಇತರೆ ಆಟಗಾರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ.

ರಷೀದ್ ಖಾನ್ (ಸನ್ ರೈಸರ್ಸ್ ಹೈದರಾಬಾದ್)

ರಷೀದ್ ಖಾನ್ (ಸನ್ ರೈಸರ್ಸ್ ಹೈದರಾಬಾದ್)

ಆಫ್ಘನಿಸ್ತಾನದ ಲೆಗ್ ಸ್ಪಿನ್ನರ್ ರಷೀದ್ ಖಾನ್ ಅವರು ಐಪಿಎಲ್ 2018ರಲ್ಲಿ 17 ಪಂದ್ಯಗಳಿಂದ 21 ವಿಕೆಟ್ ಕಿತ್ತು ಭರ್ಜರಿ ಪ್ರದರ್ಶನ ನೀಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕ್ವಾಲಿಫೈಯರ್ 02 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್, ಫೀಲ್ಡಿಂಗ್ ನಲ್ಲೂ ಮಿಂಚಿದರು.

ಆಂಡ್ಯೂ ಟೈ (ಕಿಂಗ್ಸ್ ಎಲೆವನ್ ಹೈದರಾಬಾದ್)

ಆಂಡ್ಯೂ ಟೈ (ಕಿಂಗ್ಸ್ ಎಲೆವನ್ ಹೈದರಾಬಾದ್)

ಪರ್ಪಲ್ ಕ್ಯಾಪ್ ವಿಜೇತ ಕಿಂಗ್ಸ್ ಎಲೆವನ್ ಪಂಜಾಬ್ ಬೌಲರ್ ಆಂಡ್ರ್ಯೂ ಟೈ ಅವರು 14 ಪಂದ್ಯಗಳಿಂದ 24 ವಿಕೆಟ್ ಕಿತ್ತಿದ್ದಲ್ಲದೆ 18.66 ಸರಾಸರಿಯಂತೆ 8 ಎಕಾನಾಮಿಯಲ್ಲಿ ಬೌಲ್ ಮಾಡಿದರು. ಟೈ ಅವರ ಸ್ಲೋ ಎಸೆತಗಳನ್ನು ಎದುರಿಸಲಾಗದೆ ಅನೇಕ ಆಟಗಾರರು ತಡವರಿಸಿದರು.

ಉಮೇಶ್ ಯಾದವ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಉಮೇಶ್ ಯಾದವ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಟೀಂ ಇಂಡಿಯಾದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು 14 ಪಂದ್ಯಗಳಲ್ಲಿ 20 ವಿಕೆಟ್ ಕಿತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಧಾರವಾಗಿದ್ದರು. ಉಮೇಶ್ ಅವರನ್ನು ಟೆಸ್ಟ್ ಬೌಲರ್ ಎಂದೇ ಎಲ್ಲರೂ ಪರಿಗಣಿಸಿರುವ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿ, ಟೀಕಾಕಾರರ ಬಾಯಿ ಮುಚ್ಚಿಸಿದರು.

ಮುಜೀಬ್ ಉರ್ ಜದ್ರಾನ್ (ಕಿಂಗ್ಸ್ XI ಪಂಜಾಬ್)

ಮುಜೀಬ್ ಉರ್ ಜದ್ರಾನ್ (ಕಿಂಗ್ಸ್ XI ಪಂಜಾಬ್)

17 ವರ್ಷ ವಯಸ್ಸಿನ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಮುಜೀರ್ ಉರ್ ಜದ್ರಾನ್ ಅವರು 11 ಪಂದ್ಯಗಳಿಂದ 10 ವಿಕೆಟ್ ಗಳಿಸಿದರು. ಕಿಂಗ್ಸ್ ಎಲೆವನ್ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. 6.99 ಎಕಾನಾಮಿ ದರದಂತೆ ಬೌಲ್ ಮಾಡಿ ವಿಕೆಟ್ ಕಿತ್ತ ಜದ್ರಾನ್ ಅವರು ಮುಂಬರುವ ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ.

Story first published: Sunday, June 3, 2018, 17:08 [IST]
Other articles published on Jun 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X