ಮ್ಯಾಥ್ಯೂ ವೇಡ್‌ಗೆ 'ಭಾರತ ರತ್ನ' ಕೊಡಬೇಕು: ಸೋಲಿನ ಬಳಿಕ ಭಾರೀ ಟ್ರೋಲ್ ಆದ ಪಾಕಿಸ್ತಾನ

ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತದೆದುರು ಐತಿಹಾಸಿಕ ಗೆಲುವು ಸಾಧಿಸಿದ ಪಾಕಿಸ್ತಾನ ಭರ್ಜರಿ ಪ್ರದರ್ಶನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು. ಅಜೇಯವಾಗಿ ಸೆಮೀಸ್ ತಲುಪಿದ ಏಕೈಕ ತಂಡವಾಗಿದ್ದ ಪಾಕ್‌ ಫೈನಲ್‌ಗೇರಲು ಒಂದೇ ಹೆಜ್ಜೆ ಉಳಿದಿತ್ತು. ಆದ್ರೆ ಕಾಂಗರೂಗಳ ಸಂಘಟಿತ ಪ್ರದರ್ಶದೆದುರು ಬಾಬರ್ ಟೀಮ್ ಮಂಕಾಗಿ ಹೋಯಿತು.

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ನ. 11)ರಂದು ನಡೆದ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನದ ಕಪ್ ಗೆಲ್ಲುವ ಕನಸು ನುಚ್ಚು ನೂರಾಯಿತು. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೂ ಒಳಗಾಗಿದೆ.

ಆಸ್ಟ್ರೇಲಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ , ಪಾಕ್‌ನ ಯುವ ಸ್ಟಾರ್ ಬೌಲರ್ ಶಾಹೀನ್ ಅಫ್ರಿದಿಗೆ ಮೂರು ಸಿಕ್ಸರ್‌ಗಳನ್ನು ಅಟ್ಟಿದ್ದು ಮಾತ್ರ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಟ್ರಂಪ್ ಕಾರ್ಡ್ ಬೌಲರನ್ನ ಟಾರ್ಗೆಟ್ ಮಾಡಿದ ವೇಡ್‌ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ರು. ಇದು ಆಸೀಸ್ ಸೆಮೀಸ್ ತಲುಪಲು ಮತ್ತೊಂದು ಮೆಟ್ಟಿಲಾಯಿತು.

ಮತ್ತೊಂದೆಡೆ ಪಾಕಿಸ್ತಾನ ಪರ ಮ್ಯಾಥ್ಯೂ ವೇಡ್ ಕ್ಯಾಚ್ ಕೈ ಚೆಲ್ಲಿದ ಹಸನ್ ಅಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಪಾಕ್ ಸೋಲಿಗೆ ಆ ಒಂದು ಕ್ಯಾಚ್ ಕೈ ಚೆಲ್ಲಿದ್ದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

"ನಾವು ಮೊದಲ ಇನ್ನಿಂಗ್ಸ್​ನಲ್ಲಿ ಯೋಜನೆ ಮಾಡಿದ್ದ ರೀತಿಯಲ್ಲೇ ಸಾಗಿದೆವು. ಅಂದುಕೊಂಡಂತೆ ಎದುರಾಳಿಗೆ ಸವಾಲಿನ ಮೊತ್ತದ ಟಾರ್ಗೆಟ್ ಅನ್ನೇ ನೀಡಿದೆವು. ಆದರೆ, ಎದುರಾಳಿಗೆ ನೀಡಿದಂತಹ ಇಂತಹ ಅವಕಾಶ ಬೆಲೆತೆರಬೇಕಾಗಿ ಬಂತು. ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಹಸನ್ ಅಲಿ ಬಿಟ್ಟ ಆ ಒಂದು ಕ್ಯಾಚ್. ಈ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು" ಎಂದು ಬಾಬರ್ ಅಜಮ್ ಹೇಳಿದ್ದಾರೆ.

ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಭಾನುವಾರ (ನ. 14) ಬದ್ಧವೈರಿ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಆದ್ರೆ ಈ ಹಂತಕ್ಕೇರಲು ಪ್ರಮುಖ ಕಾರಣವಾದ ಮ್ಯಾಥ್ಯೂ ವೇಡ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದಕ್ಕೆ ಸಾಲದೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗಳು ಹರಿದಾಡಿವೆ.

ಅದರಲ್ಲೂ ವಿಶೇಷವಾಗಿ ಭಾರತೀಯ ಅಭಿಮಾನಿಗಳು ಪಾಕಿಸ್ತಾನ ತಂಡದ ಸೋಲನ್ನ ಸಂಭ್ರಮಿಸಿದ್ದಾರೆ. ಬಾಬರ್ ಅಜಮ್, ಹಸನ್ ಅಲಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಇ ಜೊತೆಗೆ ಮ್ಯಾಥ್ಯೂ ವೇಡ್‌ಗೆ ಭಾರತ ರತ್ನ ಕೊಡಬೇಕು ಎಂದು ತಮಾಷೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ಭಾರತವು ಪಂದ್ಯ ಗೆದ್ದ ರೀತಿಯಲ್ಲಿ ಪಟಾಕಿ ಹೊಡೆದು ಪಾಕ್ ಸೋಲನ್ನ ಸಂಭ್ರಮಿಸಿದ್ದಾರೆ.

ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ (67) ಮತ್ತು ನಾಯಕ ಬಾಬರ್ ಅಜಮ್ (39) ಆರಂಭಿಕ ವಿಕೆಟ್‌ಗೆ 71 ರನ್‌ಗಳ ಜೊತೆಯಾಟದೊಂದಿಗೆ ಪಾಕಿಸ್ತಾನವು ಬಲವಾದ ಆರಂಭವನ್ನು ಪಡೆಯಿತು. ರಿಜ್ವಾನ್ ಮತ್ತು ಫಖರ್ ಜಮಾನ್ (32 ಎಸೆತಗಳಲ್ಲಿ 55) ಅವರ ಅದ್ಭುತ ಅರ್ಧಶತಕಗಳು ಪಾಕಿಸ್ತಾನವನ್ನು 176 ರನ್‌ಗೆ ಹೆಚ್ಚಿಸಿತು. ರಿಜ್ವಾನ್ ಮತ್ತು ಜಮಾನ್ ಹೊರತುಪಡಿಸಿ, ಅಜಮ್ (34 ಎಸೆತಗಳಲ್ಲಿ 39) ಸಹ ಬ್ಯಾಟಿಂಗ್‌ನೊಂದಿಗೆ ಅಮೂಲ್ಯ ಕೊಡುಗೆ ನೀಡಿದರು.

ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಅಭಿಮಾನಿಗಳು ಪಾಕಿಸ್ತಾನದ ಬಗ್ಗೆ ಸಾಕಷ್ಟು ಕೋಪಗೊಂಡಿದ್ದರು ಮತ್ತು ಅಜಮ್ ನೇತೃತ್ವದ ಪಾಕ್ ತಂಡವನ್ನು ಟ್ವಿಟ್ಟರ್‌ನಲ್ಲಿ ಟ್ರೋಲ್ ಮಾಡಿದ್ದಾರೆ. ಅದರಲ್ಲೂ ಭಾರತೀಯರು ಇದು ಆಸ್ಟ್ರೇಲಿಯದ ಗೆಲುವಲ್ಲ ಟೀಮ್ ಇಂಡಿಯಾದ ವಿಜಯ ಎಂದು ಸಂಭ್ರಮಿಸಿದರು. ಹಾಗಿದ್ದಾರೆ ಪಾಕಿಸ್ತಾನ ತಂಡವನ್ನು ಏನೆಲ್ಲಾ ಟ್ರೋಲ್ ಮಾಡಲಾಗಿದೆ ಎಂದು ಈ ಕೆಳಗೆ ತಿಳಿಯಿರಿ.

For Quick Alerts
ALLOW NOTIFICATIONS
For Daily Alerts
Story first published: Friday, November 12, 2021, 19:11 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X