ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ಕ್ಕೆ ಟಿ20 ವಿಶ್ವಕಪ್ ಆಯೋಜಿಸಲು ಅವಕಾಶ ನೀಡಿ: ಐಸಿಸಿಗೆ ಪತ್ರ ಬರೆದ ಕ್ರಿಕೆಟ್ ಆಸ್ಟ್ರೇಲಿಯಾ

Ca Tells Icc It Would Like To Host 2021 Edition Of T20 Wc

ಕೊರೊನಾ ವೈರಸ್‌ನ ಕಾರಣದಂದಾಗಿ ಐಸಿಸಿ ಟಿ20 ವಿಶ್ವಕಪ್ ನಡೆಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಮಧ್ಯೆ ಕ್ರಿಕೆಟ್ ಆಸ್ಟ್ರೇಲಿಯಾ ಪತ್ರವೊಂದನ್ನು ಐಸಿಸಿಗೆ ಬರೆದಿದೆ ಎನ್ನಲಾಗುತ್ತಿದೆ. ಈ ಪತ್ರದಲ್ಲಿ ಟಿ20 ವಿಶ್ವಕಪ್ 2020ರ ಆವೃತ್ತಿಯನ್ನು 2021ಕ್ಕೆ ಆಯೋಜನೆ ಮಾಡಲು ಅವಕಾಶವನ್ನು ನೀಡುವಂತೆ ಮನವಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಐಸಿಸಿ ಆಸ್ಟ್ರೇಲಿಯಾದಲ್ಲಿ ನಡೆಯ ಬೇಕಿರುವ ವಿಶ್ವಕಪ್ ಆವೃತ್ತಿಯನ್ನು ಎರಡು ವರ್ಷ ಮುಂಡೂಡಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. ಭಾರತದಲ್ಲಿ ಮುಂದಿನ ವರ್ಷ ಅಂದರೆ 2021ರ ಅಂತ್ಯದ ವೇಳೆಗೆ ಮತ್ತೊಂದು ಟಿ20 ವಿಶ್ವಕಪ್ ನಡೆಸಲು ಈ ಹಿಂದೆಯೇ ನಿರ್ಧಾರವಾಗಿತ್ತು. ಹಾಗಾಗಿ ಒಂದೇ ವರ್ಷದಲ್ಲಿ ಎರಡು ವಿಶ್ವಕಪ್ ನಡೆಸುವ ನಿರ್ಧಾರ ಸರಿಯಲ್ಲ ಎಂದು ತೀರ್ಮಾನಿಸಿ 2022ಕ್ಕೆ ಆಸ್ಟ್ರೇಲಿಯಾದಲ್ಲಿ ಆಯೋಜನೆ ಮಾಡಲು ತೀರ್ಮಾನಿಸಿದ ಎಂದು ವರದಿಯಾಗಿತ್ತು.

ಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳುಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು

ಐಸಿಸಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬರೆದ ಪತ್ರದಲ್ಲಿ ಈ ವರ್ಷ ವಿಶ್ವಕಪ್ ಆಯೋಜನೆಗೆ ಸಾಧ್ಯವಾಗದಿದ್ದರೆ ಯಾವ ಆಯ್ಕೆಗಳು ಯೋಗ್ಯವೆಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಭಿಪ್ರಾಯ ಪಡೆಯಬೇಕೆಂದು ಅದು ಈ ಪತ್ರದಲ್ಲಿ ಕೇಳಿಕೊಂಡಿದೆ. ಇದರ ಜೊತೆಗೆ 2020ರ ವಿಶ್ವಕಪ್ ಆಯೋಜನೆ ಮಾಡುವ ಹಕ್ಕನ್ನು 2022ಕ್ಕೆ ವರ್ಗಾಯಿಸಲು ಬಯಸುವುದಿಲ್ಲ ಎಂದು ಅದು ಹೇಳಿದೆ.

ಇನ್ನು ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ ವಿಶ್ವಕಪ್ ಆಯೋಜನೆಯನ್ನು ಬದಲಾವಣೆ ಮಾಡಿಕೊಳ್ಳು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದನ್ನು ಐಎಎನ್‌ಎಸ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು.

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

ಐಸಿಸಿ ಗುರುವಾರ ನಡೆಸಿದ ಸಭೆಯಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಜೂನ್ 10ರಂದು ಐಸಿಸಿ ಸಬೆ ಸೇರಲಿದ್ದು ಆ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದು ಐಸಿಸಿ ತನ್ನ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿತ್ತು.

Story first published: Friday, May 29, 2020, 16:30 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X