ಗೇಲ್ 'ಗುಪ್ತಾಂಗ' ಕಂಡು ಆಘಾತದಿಂದ ಕಣ್ಣೀರಿಟ್ಟೆ: ಮಸಾಜರ್

Posted By:

ಸಿಡ್ನಿ, ಅಕ್ಟೋಬರ್ 25: ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ 'ಗುಪ್ತಾಂಗ' ಪ್ರದರ್ಶನ ಈಗ ಕೋರ್ಟಿ ಮೆಟ್ಟಿಲೇರಿದ್ದು, ಈ ವಿವಾದ ಕುರಿತಂತೆ ಮಹಿಳಾ ಮಸಾಜರ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಮಸಾಜ್ ಮಾಡಲ್ ಹೋದಾಗ ನಡೆದ ಸಂಭಾಷಣೆ, ಆಘಾತವನ್ನು ವಿವರಿಸಿದ್ದಾರೆ.

ಮಸಾಜ್ ವೇಳೆ ಗೇಲ್ 'ಗುಪ್ತಾಂಗ' ಪ್ರದರ್ಶನ, ಏನಿದು ಆರೋಪ?

ಮೈದಾನದ ಹೊರಗಿನ ಚಟುವಟಿಕೆ ಯಾವಾಗಲೂ ಚರ್ಚೆಗೆ ಗ್ರಾಸವಾಗುತ್ತದೆ. ಮೋಜು, ಮಸ್ತಿಯ ಜೀವನಕ್ಕೆ ಹೆಸರಾದ ಗೇಲ್ ಅವರು ಮಸಾಜ್ ಮಾಡಿಸಿಕೊಳ್ಳಲು ಹೋದಾಗ ಮಹಿಳಾ ಥೆರಪಿಸ್ಟ್ ಮುಂದೆ ತಮ್ಮ ಗುಪ್ತಾಂಗ ಪ್ರದರ್ಶಿಸಿದರು ಎಂದು ಆರೋಪಿಸಲಾಗಿದೆ.

ಫೇಸ್ ಫಾಕ್ಸ್ ಮೀಡಿಯಾ ನ್ಯೂಸ್ ಪೇಪರ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಹಾಗೂ ದಿ ಕೆನ್ ಬೆರಾ ಟೈಮ್ಸ್ ಮುಂತಾದ ಮಾಧ್ಯಮಗಳು ಮಾಡಿರುವ ಸರಣಿ ವರದಿಗಳನ್ನು ಗೇಲ್ ಪರ ವಕೀಲರು ಅಲ್ಲಗೆಳೆದಿದ್ದಾರೆ.

ಆದರೆ, ನ್ಯೂಸೌತ್ ವೇಲ್ಸ್ ಕೋರ್ಟಿನ ಮುಂದೆ ಮಸಜಾರ್ ನೀಡಿರುವ ಹೇಳಿಕೆಯಲ್ಲಿ ಗೇಲ್ ಅವರ ಜತೆಗಿನ 2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ ನಡೆದ ಘಟನೆ ವಿವರಗಳು ಬೇರೆ ಕಥೆಯನ್ನು ಹೇಳುತ್ತಿವೆ.

ಏನಿದು ಆರೋಪ?

ಏನಿದು ಆರೋಪ?

2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ ಈ ಘಟನೆ ನಡೆದಿದ್ದು, ಮಸಾಜ್ ಮಾಡಲು ಬಂದಿದ್ದ ಮಹಿಳಾ ಥೆರಪಿಸ್ಟ್ ಅವರಿಗೆ ಗೇಲ್ ಅವರು ತಮ್ಮ ದೇಹ ಸಿರಿ ಪ್ರದರ್ಶಿಸಿದ್ದರು ಎನ್ನಲಾಗಿದೆ. ಈ ಕುರಿತಂತೆ ಫೇಸ್ ಫಾಕ್ಸ್ ಮೀಡಿಯಾ ನ್ಯೂಸ್ ಪೇಪರ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಹಾಗೂ ದಿ ಕೆನ್ ಬೆರಾ ಟೈಮ್ಸ್ ಮುಂತಾದ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸಿದ್ದವು.

ಗೇಲ್ ಪರ ವಕೀಲರ ವಾದವೇನು?

ಗೇಲ್ ಪರ ವಕೀಲರ ವಾದವೇನು?

ಸರಣಿ ವರದಿ ಮಾಡಿ ಗೇಲ್ ಅವರ ಮಾನ ಕಳೆಯಲಾಗಿದೆ ಎಂದು ನ್ಯೂ ಸೌಥ್ ವೇಲ್ಸ್ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಜಾರಿಯಲ್ಲಿದ್ದು, ಗೇಲ್ ಮೇಲಿನ ಆರೋಪಗಳೆಲ್ಲವೂ ನಿರಾಧಾರವಾಗಿದ್ದು, ಗೇಲ್ ಅವರ ಘನತೆ, ಗೌರವಕ್ಕೆ ಧಕ್ಕೆ ತರಲು ಮಾಡಿರುವ ಹುನ್ನಾರ ಎಂದು ಗೇಲ್ ಪರ ಬ್ಯಾರಿಸ್ಟರ್ ಬ್ರೂಸ್ ಮೆಕ್ ಕ್ಲಿನ್ಟೋಕ್ ಹೇಳಿದ್ದಾರೆ.

ಗೇಲ್ ಮೇಲೆ ಅನುಮಾನ ಏಕೆ?

ಗೇಲ್ ಮೇಲೆ ಅನುಮಾನ ಏಕೆ?

ಈ ವರದಿಗಳು ಬಂದ ಕೆಲ ದಿನಗಳಲ್ಲೇ ಗೇಲ್ ಅವರು ಟಿವಿ ವರದಿಗಾರ್ತಿಯೊಬ್ಬರ ಕ್ಷಮೆಯಾಚಿಸಿದ ಪ್ರಸಂಗ ನಡೆದಿತ್ತು. ಟಿವಿ ವರದಿಗಾರ್ತಿ ಲೈವ್ ಕವರೇಜ್ ನಲ್ಲಿದ್ದಾಗ 'ಡ್ರಿಂಕ್ಸ್ ಗೆ ಹೋಗೋಣ ಬಾ' ಎಂದು ಗೇಲ್ ನಗುತ್ತಾ ಕರೆದಿದ್ದರು. ನಂತರ 'ನಾಚಿಕೊಳ್ಳಬೇಡ' ಎಂಬರ್ಥದಲ್ಲಿ ಮಾತನಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ನಂತರ ಈ ಬಗ್ಗೆ ಗೇಲ್ ಕ್ಷಮೆ ಯಾಚಿಸಿದ್ದರು. ಹೀಗಾಗಿ, ಈ ರೀತಿ ನಡೆದುಕೊಳ್ಳುವುದು ಗೇಲ್ ಗೆ ಹೊಸದೇನಲ್ಲ ಎಂದು ವಾದಿಸಲಾಗಿದೆ.

ಮಸಾಜರ್ ಲೀನ್ ರಸೆಲ್ ಹೇಳಿಕೆ

ಗೇಲ್ : 'ಏನನ್ನು ದಿಟ್ಟಿಸಿ ನೋಡುತ್ತಿದ್ದೀಯಾ?' ಎಂದು ಕೇಳಿದರು.
'ನಾನು 'ಟವೆಲ್' ಎಂದು ಉತ್ತರಿಸಿದೆ.
ತಕ್ಷಣ ಅವರು ಅವರ ಗುಪ್ತಾಂಗದ ಮೇಲಿದ್ದ ಟವೆಲ್ ಎಳೆದುಬಿಟ್ಟರು.

ನಾನು ಅವರ ಶಿಶ್ನದ ಅರ್ಧ ಭಾಗವನ್ನು ನೋಡಿದೆ. ಅವರು ನಗುತ್ತಿದ್ದರು.ಮಸಾಜ್ ಮಾಡಲಾರೆ ಕ್ಷಮಿಸಿ ಎಂದು ಹೇಳಿ, ಅಲ್ಲಿಂದ ಹೊರಟೆ.

ಇದಾದ ಬಳಿಕ ನಾನು ವೆಸ್ಟ್ ಇಂಡೀಸ್ ನ ಫಿಜಿಯೋ ಥೆರಪಿಸ್ಟ್ ಗೆ ಘಟನೆ ಬಗ್ಗೆ ಹೇಳಿದೆ. ನನಗೆ ತೀವ್ರವಾಗಿ ಆಘಾತವಾಯಿತು. ನಂತರ ನನ್ನ ರೂಮಿಗೆ ಹೋಗಿ ಮಕ್ಕಳಂತೆ ಗಳಗಳನೆ ಕಣ್ಣೀರಿಟ್ಟೆ ಎಂದು ಕೋರ್ಟ್ ಮುಂದೆ ಲೀನ್ ರಸೆಲ್ ಹೇಳಿದ್ದಾರೆ.

Story first published: Wednesday, October 25, 2017, 17:45 [IST]
Other articles published on Oct 25, 2017
Please Wait while comments are loading...