ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗಿಂತ ಟಿ20 ವಿಶ್ವಕಪ್ ಹಾಗೂ ಆಶಸ್ ಮುಖ್ಯ ಎಂದ ಇಂಗ್ಲೆಂಡ್ ಕ್ರಿಕೆಟಿಗ

Chris Woakes says the T20 World Cup and the Ashes are more important than the IPL

ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಂದ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಹೊರಗುಳಿದಿದ್ದಾರೆ. ಅದರಲ್ಲೂ ಮೂವರು ಆಟಗಾರರಾದ ಕ್ರಿಸ್ ವೋಕ್ಸ್, ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲನ್ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಈ ನಿರ್ಧಾರದ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಪ್ರತಿಕ್ರಿಯೆ ನೀಡಿದ್ದು ಐಪಿಎಲ್‌ನಿಂದ ಹಿಂದಕ್ಕೆ ಸರಿಯಲು ಕಾಣವನ್ನು ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡದ ಈ ಆಟಗಾರ ಐಪಿಎಲ್‌ನಿಮದ ಹಿಂದಕ್ಕೆ ಸರಿಯಲು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬದ್ಧತೆಯನ್ನು ಮುಂದಿಟ್ಟಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನ ತಂಡದಲ್ಲಿ ಆಡುವ ಸಲುವಾಗಿ ಹಾಗೂ ಅದಾದ ಬಳಿಕ ಆಶಸ್ ಸರಣಿಗೆ ಸಂಪೂರ್ಣವಾಗಿ ಫಿಟ್ ಆಗಿರುವ ದೃಷ್ಠಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ ಕ್ರಿಸ್ ವೋಕ್ಸ್.

"ಟಿ20 ವಿಶ್ವಕಪ್ ಹಾಗೂ ಆಶಸ್ ಟೆಸ್ಟ್ ಸರಣಿ ಸಣ್ಣ ಅವಧಿಯಲ್ಲಿ ಬರುವ ಎರಡು ದೊಡ್ಡ ಟೂರ್ನಿಗಳಾಗಿದೆ. ನಾನು ಐಪಿಎಲ್‌ನ ಭಾಗವಾಗುವುದಕ್ಕೆ ಇಷ್ಟಪಡುತ್ತೇನೆ. ಆದರೆ ಯಾವುದನ್ನಾದರೂ ಬಿಟ್ಟುಕೊಡಬೇಕಿದೆ. ಒಂದು ವಿಶ್ವಕಪ್ ಹಾಗೂ ಒಂದು ಆಶಸ್ ಇದು 2019ರ ಬೇಸಿಗೆ ಋತುವಿನಂತೆಯೇ ದೊಡ್ಡ ಚಳಿಗಾಲದ ಋತುವಾಗಿದೆ" ಎಂದಿದ್ದಾರೆ ಇಂಗ್ಲೀಷ್ ಕ್ರಿಕೆಟರ್ ಕ್ರಿಸ್ ವೋಕ್ಸ್.

"ಕೋವಿಡ್ ಸಂದರ್ಭದಲ್ಲಿ ನಿಜಕ್ಕೂ ಕಠಿಣ ಪರಿಸ್ಥಿತಿಯಿದೆ. ಎಲ್ಲರೂ ಅಂದುಕೊಂಡಷ್ಟು ಸಾಮಾನ್ಯವಾಗಿಲ್ಲ. ಆದರೆ ಕ್ರಿಕೆಟ್‌ನ ದೃಷ್ಟಿಕೋನದಿಮದ ನೋಡಿದರೆ ತುಂಬಾ ರೋಮಾಂಚನಕಾರಿಯಾಗಿದೆ" ಎಂದು ಕ್ರಿಸ್ ವೋಕ್ಸ್ ಪ್ರತಿಕ್ರಿಯೆಯನ್ನು ದಿ ಗಾರ್ಡಿಯನ್ ಉಲ್ಲೇಖಿಸಿ ವರದಿ ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ವೋಕ್ಸ್ ತಾನು ಟಿ20 ವಿಶ್ವಕಪ್‌ನ ತಂಡದ ಭಾಗವಾಗಿರುವ ಬಗ್ಗೆ ಮಾಹಿತಿಯಿರಲಿಲ್ಲ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಮೊದಲಾರ್ಧದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕ್ರಿಸ್ ವೋಕ್ಸ್ ಐದು ವಿಕೆಟ್ ಸಂಪಾದಿಸಿದ್ದಾರೆ. ಕ್ರಿಸ್ ವೋಕ್ಸ್ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಅಲಭ್ಯವಾಗಿರುವ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಸ್ಟ್ರೇಲಿಯಾದ ವೇಗಿ ಬೆನ್ ಡ್ವಾರ್ಶುಸ್ ಅವರನ್ನು ಬದಲಿ ಆಟಗಾರನಾಗಿ ಸೇರ್ಪಡೆಗೊಳಿಸಿದೆ.

ಇನ್ನು 32ರ ಹರೆಯದ ಕ್ರಿಸ್ ವೋಕ್ಸ್ ಈ ಬಾರಿಯ ಬೇಸಿಗೆ ಋತಿವಿನಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರವೇ ಪಾಲ್ಗೊಂಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ ಸರಣಿ ಓವಲ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಕಣಕ್ಕಿಳಿದಿದ್ದರು. ಗಾಯಗೊಂಡಿದ್ದ ವೋಕ್ಸ್ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಬಳಿಕ ಚೇತರಿಸಿಕೊಂಡು ಸ್ಯಾಮ್ ಕರನ್ ಸ್ಥಾನದಲ್ಲಿ ಆಡಲು ಇಳಿದರು. ಈ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರಿಸ್ ವೋಕ್ಸ್ ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಗಮನಾರ್ಹ ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದ ವೋಕ್ಸ್ ನಂತರ ಅರ್ಧ ಶತಕದ ಕೊಡುಗೆಯನ್ನು ಕೂಡ ನೀಡಿ ಮಿಂಚಿದ್ದಾರೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

ಆರು ಮಂದಿ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಿಂದ ಹೊರಗುಳಿಯಲಿ ನಿರ್ಧರಿಸಿಸದ ಬಳಿಕವೂ ಇಂಗ್ಲೆಂಡ್‌ನ 10 ಮಂದಿ ಆಟಗಾರರು ಈ ಬಾರಿಯ ಐಪಿಎಲ್‌ನ ಭಾಗವಾಗಿದ್ದಾರೆ ಎಂಬುದು ಗಮನಾರ್ಹ. ಮೊಯೀನ್ ಅಲಿ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಸ್ಯಾಮ್ ಕರನ್ (ಸಿಎಸ್‌ಕೆ) ಶೀಘ್ರದಲ್ಲೇ ದುಬೈಗೆ ತೆರಳಲು ಸಜ್ಜಾಗಿದ್ದಾರೆ. ಅವರೊಂದಿಗೆ ಟಾಮ್ ಕರನ್ (ಡೆಲ್ಲಿ ಕ್ಯಾಪಿಟಲ್ಸ್), ಜಾರ್ಜ್ ಗಾರ್ಟನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಇಯಾನ್ ಮಾರ್ಗನ್ (ಕೋಲ್ಕತಾ ನೈಟ್ ರೈಡರ್ಸ್), ಕ್ರಿಸ್ ಜೋರ್ಡಾನ್ (ಪಂಜಾಬ್ ಕಿಂಗ್ಸ್), ಆದಿಲ್ ರಶೀದ್ (ಪಂಜಾಬ್ ಕಿಂಗ್ಸ್), ಲಿಯಾಮ್ ಲಿವಿಂಗ್ಸ್ಟೋನ್ (ರಾಜಸ್ಥಾನ್ ರಾಯಲ್ಸ್), ಸ್ಯಾಮ್ ಬಿಲ್ಲಿಂಗ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಮತ್ತು ಜೇಸನ್ ರಾಯ್ (ಸನ್‌ರೈಸರ್ಸ್ ಹೈದರಾಬಾದ್) ಕೂಡ ಐಪಿಎಲ್‌ನ ಭಾಗವಾಗಿರಲಿದ್ದಾರೆ.

Story first published: Tuesday, September 14, 2021, 0:06 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X