47ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಒಲ್ಲೆಯೆಂದ ಸಚಿನ್ ತೆಂಡೂಲ್ಕರ್

ಮುಂಬೈ, ಏಪ್ರಿಲ್ 23: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತನ್ನ 47 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಏಪ್ರಿಲ್ 24ಕ್ಕೆ ಸಚಿನ್ 47ರ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಆದರೆ ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸೂಚಿಸಿ ಸಚಿನ್ ತನ್ನ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ.

ತಂಡಕ್ಕೆ ಆಯ್ಕೆಯಾಗದ್ದಕ್ಕೆ ರಾತ್ರಿಯಿಡೀ ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿತಂಡಕ್ಕೆ ಆಯ್ಕೆಯಾಗದ್ದಕ್ಕೆ ರಾತ್ರಿಯಿಡೀ ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿ

'ಇದು ಹುಟ್ಟುಹಬ್ಬ ಆಚರಿಸಲು ಸರಿಯಾದ ಸಮಯವಲ್ಲ. ಹುಟ್ಟು ಹಬ್ಬ ಆಚರಿಸದೆ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ನರ್ಸ್‌ಗಳಿಗೆ, ಅರೆವೈದ್ಯರಿಗೆ, ಪೊಲೀಸರಿಗೆ, ರಕ್ಷಣಾ ಸಿಬ್ಬಂದಿಗೆ ಗೌರವ ಸೂಚಿಸುವುದು ಅರ್ಥಪೂರ್ಣ ಎಂದು ಸಚಿನ್ ಭಾವಿಸಿದ್ದಾರೆ,' ಎಂದು ಸಚಿನ್‌ಗೆ ಹತ್ತಿರದ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

ಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳುಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳು

ಸಚಿನ್ ತೆಂಡೂಲ್ಕರ್ ಅವರು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 50 ಲಕ್ಷ ರೂ. ದೇಣಿಗೆ ನೀಡಿದ್ದರು. ಅಲ್ಲದೆ ಅನೇಕ ಪರಿಹಾರ ಕಾರ್ಯಗಳಲ್ಲಿ ಸಚಿನ್ ಕೈ ಜೋಡಿಸಿದ್ದಾರೆ. ಸಚಿನ್ ಕೆಲವು ಚಾರಿಟಿಗಳನ್ನೂ ನಡೆಸುತ್ತಿದ್ದಾರೆ.

ಐಪಿಎಲ್‌ನಲ್ಲಿ ತನ್ನ ಫೇವರಿಟ್ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ಪೃಥ್ವಿ ಶಾಐಪಿಎಲ್‌ನಲ್ಲಿ ತನ್ನ ಫೇವರಿಟ್ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ಪೃಥ್ವಿ ಶಾ

'ಇಂಥ ಹೊತ್ತಿನಲ್ಲಿ ಬರ್ತ್‌ ಡೇ ಆಚರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲೇ ಸಚಿನ್‌ ಇಚ್ಛಿಸಲಾರರು,' ಎಂದು ಮೂಲ ತಿಳಿಸಿದೆ. ಸಚಿನ್ ಹುಟ್ಟುಹಬ್ಬದ ಹೊತ್ತಿನಲ್ಲಿ ಸಚಿನ್ ಅಭಿಮಾನಿಗಳ ಕ್ಲಬ್‌ ಒಂದು 40 ಅಪರೂಪದ ಚಿತ್ರಗಳನ್ನು ಕ್ರಿಕೆಟ್ ಅಭಿಮಾನಿಗಳ ಮುಂದಿಡಲಿದೆ. ಇನ್ನೊಂದು ಕ್ಲಬ್ ಸಚಿನ್ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ತನ್ನ ಆರಾದ್ಯನ ಹುಟ್ಟುಹಬ್ಬವನ್ನು ಆರಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, April 23, 2020, 10:02 [IST]
Other articles published on Apr 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X