ಆರ್‌ಸಿಬಿ ತಂಡದಲ್ಲಿಯೇ ಉಳಿಯುತ್ತೇನೆ ಎಂದ ಕೊಹ್ಲಿಗೆ ಕಹಿ ಸತ್ಯ ಹೇಳಿದ ಡೇಲ್ ಸ್ಟೇಯ್ನ್

ಟೀಮ್ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ ಭಾನುವಾರ ರಾತ್ರಿ ಆರ್‌ಸಿಬಿ ನಾಯಕತ್ವದಿಂದಲೂ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ವಿರಾಟ್ ಕೊಹ್ಲಿ ತೆಗೆದುಕೊಂಡ ಈ ನಿರ್ಧಾರ ಐಪಿಎಲ್ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಇದೇ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಮೇಲೆ ತಾವು ಹೊಂದಿರುವ ಒಲವನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದು ಐಪಿಎಲ್‌ನಲ್ಲಿ ಕೊನೆಯ ಪಂದ್ಯವನ್ನಾಡುವವರೆಗೂ ತಾನು ಆರ್‌ಸಿಬಿ ಆಟಗಾರನಾಗಿಯೇ ಉಳಿಯುವೆ ಎಂಬ ಮಾತನ್ನು ಹೇಳಿದ್ದಾರೆ.

ಐಪಿಎಲ್: ಕೊಹ್ಲಿ ರಾಜೀನಾಮೆ ನಂತರ ಆರ್‌ಸಿಬಿ ನಾಯಕ ಯಾರು? ರೇಸ್‌ನಲ್ಲಿದ್ದಾರೆ ಈ 3 ಆಟಗಾರರುಐಪಿಎಲ್: ಕೊಹ್ಲಿ ರಾಜೀನಾಮೆ ನಂತರ ಆರ್‌ಸಿಬಿ ನಾಯಕ ಯಾರು? ರೇಸ್‌ನಲ್ಲಿದ್ದಾರೆ ಈ 3 ಆಟಗಾರರು

ಆರ್‌ಸಿಬಿ ತಂಡದ ಬಗ್ಗೆ ವಿರಾಟ್ ಆಡಿದ ಈ ಮಾತುಗಳು ಕೇವಲ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರವಲ್ಲ ಮಾಜಿ ಕ್ರಿಕೆಟಿಗ ಡೇಲ್ ಸ್ಟೇಯ್ನ್ ಹೃದಯಕ್ಕೂ ತಟ್ಟಿದೆ. ಆರ್‌ಸಿಬಿ ಮೇಲೆ ವಿರಾಟ್ ಕೊಹ್ಲಿ ಹೊಂದಿರುವ ಬದ್ಧತೆಯನ್ನು ನೋಡಲು ತುಂಬಾ ಸಂತಸವಾಗುತ್ತದೆ ಎಂದಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಯ ಬಗ್ಗೆಯೂ ಡೇಲ್ ಸ್ಟೇಯ್ನ್ ಮನದಾಳದ ಮಾತುಗಳನ್ನಾಡಿದ್ದಾರೆ.

ಕೊಹ್ಲಿ ನಾಯಕತ್ವ ಬಿಟ್ಟುಕೊಡಬೇಕಾದ ಅಗತ್ಯವೇ ಇರಲಿಲ್ಲ, ಯಾಕೆ ಈ ನಿರ್ಧಾರ?; ದಿಗ್ಗಜ ಕ್ರಿಕೆಟಿಗನ ಬೇಸರಕೊಹ್ಲಿ ನಾಯಕತ್ವ ಬಿಟ್ಟುಕೊಡಬೇಕಾದ ಅಗತ್ಯವೇ ಇರಲಿಲ್ಲ, ಯಾಕೆ ಈ ನಿರ್ಧಾರ?; ದಿಗ್ಗಜ ಕ್ರಿಕೆಟಿಗನ ಬೇಸರ

"ಆರ್‌ಸಿಬಿ ತಂಡಕ್ಕಾಗಿ ವಿರಾಟ್ ಕೊಹ್ಲಿ ಇಷ್ಟು ಪ್ರಮಾಣದ ಬದ್ಧತೆಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಸಂತಸವಾಗುತ್ತದೆ. ಆತ ಆರ್‌ಸಿಬಿ ತಂಡದ ಪರವಾಗಿ ಟ್ರೋಫಿಯನ್ನು ಗೆಲ್ಲುವುದನ್ನು ಬಯಸುತ್ತಾರೆ. ಅವರು ಆರ್‌ಸಿಬಿ ತಂಡಕ್ಕಾಗಿ ಹಲವು ವರ್ಷಗಳನ್ನು ನೀಡಿದ್ದಾರೆ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ಅವರು ಬಿಡುವುದಿಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಇದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಡೇಲ್ ಸ್ಟೇಯ್ನ್.

ಐಪಿಎಲ್: ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯ ವೀಕ್ಷಿಸಿದ ನಟ ಕಿಚ್ಚ ಸುದೀಪ್ ದಂಪತಿಐಪಿಎಲ್: ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯ ವೀಕ್ಷಿಸಿದ ನಟ ಕಿಚ್ಚ ಸುದೀಪ್ ದಂಪತಿ

ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ವಿಚಾರವನ್ನು ಕೂಡ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಹೇಳಿದ್ದಾರೆ. "ಆರ್‌ಸಿಬಿ ತಂಡದಲ್ಲಿಯೇ ಉಳಿಯಬೇಕಾ ಅಥವಾ ತೊರೆಯಬೇಕಾ ಎಂಬ ಸಂಗತಿ ಕೇವಲ ವಿರಾಟ್ ಕೊಹ್ಲಿಗೆ ಮಾತ್ರವೇ ಸಂಬಂಧಿಸಿದ್ದಲ್ಲ" ಎಂದಿದ್ದಾರೆ. "ಅಂತಿಮ ದಿನಗಳಲ್ಲಿ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಹಾಗೂ ಕೋಚ್‌ಗಳು ನಿಮ್ಮ ಪ್ರದರ್ಶನಕ್ಕೆ ಬೆಂಕಿಯುಂಡೆಯಂತಾಗುತ್ತಾರೆ. ಕ್ರಿಸ್ ಗೇಲ್ ಕೂಡ ತಂಡವನ್ನು ಬಿಟ್ಟಿರುವುದನ್ನು ನಾವು ನೋಡಿದ್ದೇವೆ. ಜೀವನದುದ್ದಕ್ಕೂ ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ ಆಡಿದ ಡೇವಿಡ್ ಬೆಕ್‌ಹ್ಯಾಮ್ ಹೊರಬಿದ್ದಿರುವುದನ್ನು ಕೂಡ ನಾವು ನೋಡಿದ್ದೇವೆ" ಎಂದು ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಬಹಿರಂಗವಾಯ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಜೀನಾಮೆಗೆ ಕಾರಣವಾದ ಆ 2 ಅಂಶಗಳು!ಬಹಿರಂಗವಾಯ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಜೀನಾಮೆಗೆ ಕಾರಣವಾದ ಆ 2 ಅಂಶಗಳು!

"ಏನಾಗಲಿದೆ ಎಂಬುದು ನಿಮಗೆನಿಜಕ್ಕೂ ತಿಳಿಯುವುದಿಲ್ಲ. ಈ ಖ್ಯಾತ ಆಟಗಾರರು ತಮ್ಮ ಕ್ಲಬ್‌ಗಳಿಗಾಗಿ ಸುದೀರ್ಘ ಕಾಲ ಆಡಿದ್ದರು. ನಿಮಗೆ ಗೊತ್ತಿರುವಂತೆ ವಿರಾಟ್ ಕೊಹ್ಲಿ ದೆಹಲಿಯವರು, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಅಂತಿಮ ಅವಧಿಯನ್ನು ನಮ್ಮೊಂದಿಗೆ ಪೂರ್ಣಗೊಳಿಸಿ ಎಂದು ಹೇಳಲೂಬಹುದು" ಎಂದಿದ್ದಾರೆ ಡೇಲ್ ಸ್ಟೇಯ್ನ್

For Quick Alerts
ALLOW NOTIFICATIONS
For Daily Alerts
Story first published: Monday, September 20, 2021, 16:13 [IST]
Other articles published on Sep 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X