ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ಆಡುವ ಪ್ರತಿಭೆಯುಳ್ಳ ಇಬ್ಬರು MI ಆಟಗಾರರನ್ನು ಹೆಸರಿಸಿದ ಮಾಜಿ ವೇಗಿ

 Dominic Cork Named Two MI Players Who Can Play For India

ಐಪಿಎಲ್ ಪಂದ್ಯಾವಳಿಗಳು ಭಾರತದ ಹಲವಾರು ಯುವ ಪ್ರತಿಭೆಗಳಿಗೆ ತಮ್ಮ ಕ್ರಿಕೆಟ್ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿದೆ.

ಐಪಿಎಲ್‌ ಟೂರ್ನಿಗಳಿಂದಲೇ ಆಯ್ಕೆದಾರರ ಗಮನ ಸೆಳೆದು ಭಾರತ ತಂಡಕ್ಕೆ ಪ್ರವೇಶಿಸಿದ ಹಲವು ಆಟಗಾರರಿದ್ದಾರೆ. ಈ ಟೂರ್ನಿಯಲ್ಲಿಯೂ ಕೆಲವು ಆಟಗಾರರು ತಮ್ಮ ಆಟದಿಂದ ಗಮನ ಸೆಳೆದಿದ್ದಾರೆ.

ವಿಶ್ವ ಕ್ರಿಕೆಟಿಗರು ಐಪಿಎಲ್ ಅನ್ನು ಗಮನಿಸುತ್ತಿದ್ದು, ಕೆಲವು ಯುವ ಆಟಗಾರರ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಡಾಮಿನಿಕ್ ಕಾರ್ಕ್ ಸಹ ಐಪಿಎಲ್ ಅನ್ನು ಗಮನಿಸುತ್ತಿದ್ದು, ಭಾರತ ತಂಡಕ್ಕೆ ಆಯ್ಕೆ ಆಗುವ ಪ್ರತಿಭೆಯುಳ್ಳ ಇಬ್ಬರು ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೆಸರಿಸಿದ್ದಾರೆ ಡಾಮಿನಿಕ್.

ಸೂರ್ಯಕುಮಾರ್ ಯಾದವ್, ರಾಹುಲ್ ಚಾಹರ್

ಸೂರ್ಯಕುಮಾರ್ ಯಾದವ್, ರಾಹುಲ್ ಚಾಹರ್

ಅತ್ಯುತ್ತಮ ಬೌಲರ್ ಆಗಿದ್ದ ಡಾಮಿನಿಕ್, ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರಾಹುಲ್ ಚಾಹರ್ ಹಾಗೂ ಸೂರ್ಯಕುಮಾರ್ ಯಾದವ್ ಅವರುಗಳಿಗೆ ಭಾರತ ತಂಡಕ್ಕೆ ಆಡುವ ಸಾಮರ್ಥ್ಯ, ಪ್ರತಿಭೆ ಇದೆ ಎಂದಿದ್ದಾರೆ. ಇಬ್ಬರೂ ಖಂಡಿತ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದಿದ್ದಾರೆ ಡಾಮಿನಿಕ್.

ಸೂರ್ಯಕುಮಾರ್ ಯಾದವ್ ಗೆ ಪ್ರತಿಭೆ ಇದೆ ಎಂದ ಡಾಮಿನಿಕ್

ಸೂರ್ಯಕುಮಾರ್ ಯಾದವ್ ಗೆ ಪ್ರತಿಭೆ ಇದೆ ಎಂದ ಡಾಮಿನಿಕ್

ಸೂರ್ಯಕುಮಾರ್ ಯಾದವ್ ಬಗ್ಗೆ ಈಗಾಗಲೇ ಚರ್ಚೆಗಳಾಗಿವೆ. ಆಸ್ಟ್ರೇಲಿಯಾ ಟೂರ್‌ಗೆ ಸೂರ್ಯಕುಮಾರ್ ಯಾದವ್ ಆಯ್ಕೆ ಆಗಬೇಕಿತ್ತು ಎನ್ನಲಾಗುತ್ತಿದೆ. ಡಾಮಿನಿಕ್ ಸಹ ಈ ವಾದದ ಬೆನ್ನಿಗಿದ್ದಾರೆ. ಅವರ ಪ್ರಕಾರವೂ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ರಾಹುಲ್

ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ರಾಹುಲ್

ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ 2018 ರಿಂದ ಮುಂಬೈ ಪರ ಆಡುತ್ತಿದ್ದು, ಅದಕ್ಕೂ ಮುನ್ನಾ ಪುಣೆ ರೈಸರ್ಸ್ ಪರವಾಗಿ ಮೂರು ಐಪಿಎಲ್ ಪಂದ್ಯಗಳನ್ನಾಡಿದ್ದರು. ಅಂಡರ್ 19 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಹುಲ್ ಚಾಹರ್‌ ಭಾರತ ತಂಡಕ್ಕೆ ಆಡುವ ಸಾಮರ್ಥ್ಯವಿದೆ ಎಂದಿದ್ದಾರೆ ಡಾಮಿನಿಕ್. ರಾಹುಲ್ ಚಾಹರ್ ಆಸ್ಟ್ರೇಲಿಯಾದ ಸರಣಿಗೆ ಆಯ್ಕೆ ಆಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನು ಮೆಚ್ಚಿಕೊಂಡ ಡಾಮಿನಿಕ್

ಮುಂಬೈ ಇಂಡಿಯನ್ಸ್ ತಂಡವನ್ನು ಮೆಚ್ಚಿಕೊಂಡ ಡಾಮಿನಿಕ್

ಡಾಮಿನಿಕ್ ಮುಂಬೈ ಇಂಡಿಯನ್ಸ್ ತಂಡವನ್ನು ಸಹ ಮೆಚ್ಚಿಕೊಂಡಿದ್ದಾರೆ. ಆ ತಂಡವು ಹೊಸ ಪ್ರತಿಭೆಗಳನ್ನು ನಿಯಮಿತವಾಗಿ ಭಾರತಕ್ಕ ಕೊಡುಗೆ ನೀಡುತ್ತಿದೆ ಎಂದಿದ್ದಾರೆ. ಇಂದು (ನವೆಂಬರ್ 10) ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ 2020 ಫೈನಲ್ ಪಂದ್ಯ ನಡೆಯುತ್ತಿದ್ದು ಮುಂಬೈ, ಗೆಲ್ಲುವ ನೆಚ್ಚಿನ ತಂಡವಾಗಿದೆ.

Story first published: Tuesday, November 10, 2020, 19:25 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X