ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs SA 2nd Test: ಇಂಗ್ಲೆಂಡ್‌ಗೆ ಇನ್ನಿಂಗ್ಸ್‌ ಸೇರಿದಂತೆ 85ರನ್‌ಗಳ ಭರ್ಜರಿ ಗೆಲುವು, ಸರಣಿ ಸಮಬಲ

England win

ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಇಂಗ್ಲೆಂಡ್ ಇನ್ನಿಂಗ್ಸ್ ಸೇರಿದಂತೆ 85ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಲಾರ್ಡ್ಸ್‌ ಅಂಗಳದಲ್ಲಿ ಅನುಭವಿಸಿದ್ದ ಇನ್ನಿಂಗ್ಸ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಎರಡನೇ ದಿನದಾಟದಂತ್ಯಕ್ಕೆ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಲ್ಲಿ ಮುನ್ನಡೆ ಸಾಧಿಸಲು 241ರನ್ ಬೇಕಾಗಿತ್ತು. ಆದ್ರೆ ಇಂಗ್ಲೆಂಡ್ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ 179ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಇನ್ನಿಂಗ್ಸ್ ಸೇರಿದಂತೆ 85ರನ್‌ಗಳಿಂದ ಮುಗ್ಗರಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯು 1-1ರಿಂದ ಸಮಬಲಗೊಂಡಿದೆ.

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ 179ರನ್‌ಗೆ ಆಲೌಟ್‌

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ 179ರನ್‌ಗೆ ಆಲೌಟ್‌

ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಡೀನ್ ಎಲ್ಗರ್ ಪಡೆ ಉತ್ತಮ ಆರಂಭ ನೀಡುವ ಮುನ್ಸೂಚನೆ ನೀಡಿತಾದ್ರೂ ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮೊದಲ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದ್ರು. ಡೀನ್ ಎಲ್ಗರ್ 11ರನ್‌ಗೆ ಔಟಾಗುತ್ತಿದ್ದಂತೆ, ದಕ್ಷಿಣ ಆಫ್ರಿಕಾ ವಿಕೆಟ್ ಪತನ ಶುರುವಾಯಿತು.

ಹರಿಣಗಳ ಪರ ಕೀಗನ್ ಪೀಟರ್ಸನ್ 42, ಸರೆಲ್ ಎರ್ವಿ 25, ಏಡನ್ ಮರ್ಕಾಮ್ 6, ರಾಸ್ಸಿ ವ್ಯಾನ್ ಡರ್ರೆ ಡಸ್ಸೆನ್ 41, ಕೈಲ್ ವೆರ್ರೆನ್ನೆ ಅಜೇಯ 17, ಸಿಮೊನ್ ಹಾರ್ಮರ್ 16, ಕೇಶವ್ ಮಹಾರಾಜ್ 2, ಕಗಿಸೊ ರಬಾಡ 2, ಲುಂಗಿ ಎನ್‌ಗಿಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲಿ 179ರನ್‌ಗೆ ಆಲೌಟ್ ಆಯಿತು.

415ರನ್ ಕಲೆಹಾಕಿದ್ದ ಇಂಗ್ಲೆಂಡ್

415ರನ್ ಕಲೆಹಾಕಿದ್ದ ಇಂಗ್ಲೆಂಡ್

ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್ ಅಮೋಘ ಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ಬೆನ್ ಫೋಕ್ಸ್ ಉತ್ತಮ ಜೊತೆಯಾಟದ ನೆರವಿನಿಂದಾಗಿ ಇಂಗ್ಲೆಂಡ್ ದೊಡ್ಡ ಲೀಡ್ ಪಡೆಯಲು ಸಾಧ್ಯವಾಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಿಡಿಸಿದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಇಂಗ್ಲೆಂಡ್ ನಾಯಕನಾಗಿ ಆಯ್ಕೆಯಾದ ಬಳಿಕ ಮೊಟ್ಟ ಮೊದಲ ಶತಕ ಸಿಡಿಸಿದರು. ಬೆನ್‌ಫೋಕ್ಸ್‌ ಜೊತೆಗೆ ಆರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬೆನ್‌ ಸ್ಟೋಕ್ಸ್‌ 158 ಎಸೆತಗಳಲ್ಲಿ ಮೂರಂಕಿ ಗಡಿದಾಟಿದರು. ಒಟ್ಟಾರೆ 163 ಎಸೆತಗಳಲ್ಲಿ 103 ರನ್ ಕಲೆಹಾಕಿದ್ದು, 6 ಬೌಂಡರಿ ಮತ್ತು 3 ಸಿಕ್ಸರ್ ಜೊತೆಗೆ 103ರನ್ ಕಲೆಹಾಕಿದರು.

ಇನ್ನು ಮತ್ತೊಂದೆಡೆ ಬೆನ್‌ ಫೋಕ್ಸ್ ಕೊನೆಯವರೆಗೂ ಅಜೇಯರಾಗಿ ಉಳಿದು 217 ಎಸೆತಗಳಲ್ಲಿ 113 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳಿದ್ದವು. ಈ ಇಬ್ಬರು ಬ್ಯಾಟರ್‌ಗಳ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 400ರ ಗಡಿದಾಟಿತು. ಸ್ಟುವರ್ಟ್ ಬ್ರಾಡ್ 21, ರಾಭಿನ್‌ಸನ್ 17ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಜ್ಯಾಕ್‌ ಲೀಚ್ 11ರನ್‌ಗೆ ಔಟಾಗ್ತಿದ್ದಂತೆ ಇಂಗ್ಲೆಂಡ್ 415ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. 264ರನ್ ಲೀಡ್ ಪಡೆಯಿತು.

151ರನ್‌ಗೆ ಆಲೌಟ್ ಆಗಿದ್ದ ದಕ್ಷಿಣ ಆಫ್ರಿಕಾ

151ರನ್‌ಗೆ ಆಲೌಟ್ ಆಗಿದ್ದ ದಕ್ಷಿಣ ಆಫ್ರಿಕಾ

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್‌ ಸೇರಿದಂತೆ ಭರ್ಜರಿ ಗೆಲುವು ಸಾಧಿಸಿದ್ದ ಡೀನ್ ಎಲ್ಗರ್ ನಾಯಕತ್ವದ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಮೇಲೆ ಎಡವಿತು. ಅನುಭವಿ ಬೌಲರ್‌ಗಳಾದ ಜೇಮ್ಸ್‌ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ದಾಳಿಗೆ ನೆಲಕಚ್ಚಿದ ದಕ್ಷಿಣ ಆಫ್ರಿಕಾ 151ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಹರಿಣಗಳ ಪರ ಬೌಲರ್ ಕಗಿಸೊ ರಬಾಡ 36ರನ್‌ಗಳಿಸಿದ್ದೇ ಹೆಚ್ಚು. ಇಂಗ್ಲೆಂಡ್ ಪರ ಆ್ಯಂಡರ್ಸನ್ ಹಾಗೂ ಬ್ರಾಡ್ ತಲಾ 3 ವಿಕೆಟ್ ಪಡೆದರೆ, ಸ್ಟೂಕ್ಸ್‌ 2, ರಾಬಿನ್‌ಸನ್ ಮತ್ತು ಜ್ಯಾಕ್ ಲೀಚ್ ತಲಾ 1 ವಿಕೆಟ್ ಪಡೆದರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗೆ ತಿಳಿಯಿರಿ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗೆ ತಿಳಿಯಿರಿ

ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಏಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಸೈಮನ್ ಹಾರ್ಮರ್ , ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ

ಬೆಂಚ್‌: ಲುಥೋ ಸಿಪಾಮ್ಲಾ, ಮಾರ್ಕೊ ಜಾನ್ಸೆನ್, ಖಯಾ ಜೊಂಡೋ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್


ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್

ಬೆಂಚ್‌: ಮ್ಯಾಟಿ ಪಾಟ್ಸ್ , ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

Story first published: Saturday, August 27, 2022, 22:54 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X