ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!

England vs West Indies: Rare incident seen in 1st Test match

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಆರಂಭಿಕ ಟೆಸ್ಟ್‌ನಲ್ಲಿ 4 ವಿಕೆಟ್ ಸೋಲನುಭವಿಸಿರುವ ಇಂಗ್ಲೆಂಡ್, ದ್ವಿತೀಯ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಯಾಕೆಂದರೆ ಮೊದಲ ಪಂದ್ಯ ಗೆದ್ದಿರುವ ಕೆರಿಬಿಯನ್ನರು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದ್ದಾರೆ. ಎರಡನೇ ಪಂದ್ಯದಲ್ಲೂ ಸೋತರೆ, ಇಂಗ್ಲೆಂಡ್ ತಂಡ ಸರಣಿ ಸೋಲಿನ ಮುಖಭಂಗ ಅನುಭವಿಸಬೇಕಾಗುತ್ತದೆ.

'ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು''ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು'

ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮೊದಲ ಪಂದ್ಯ ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆದಿತ್ತು. ಕೊರೊನಾವೈರಸ್ ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯವದು. ಇತ್ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಗಮ್ಮತ್ತೊಂದು ನಡೆದಿತ್ತು ಗಮನಿಸಿದ್ದೀರಾ?

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್ ಪಂದ್ಯದ Live ಸ್ಕೋರ್‌ಕಾರ್ಡ್

1
46754

ಆವತ್ತು ಇಂಗ್ಲೆಂಡ್ ತಂಡಕ್ಕೆ ಆಲ್ ರೌಂಡರ್ ಬೆನ್ ಸ್ಟೋಕ್ಸ್ ನಾಯಕರಾಗಿದ್ದರೆ, ವೆಸ್ಟ್ ಇಂಡೀಸ್ ತಂಡಕ್ಕೆ ಆಲ್ ರೌಂಡರ್ ಜೇಸನ್ ಹೋಲ್ಡರ್ ನಾಯಕರಾಗಿದ್ದರು. ಇಬ್ಬರ ಮಧ್ಯೆ ಅಚ್ಚರಿಯ ಕದನ ನಡೆದಿತ್ತು.

ಸ್ಟೋಕ್ಸ್ ವಿಕೆಟ್ ಹೋಲ್ಡರ್‌ಗೆ

ಸ್ಟೋಕ್ಸ್ ವಿಕೆಟ್ ಹೋಲ್ಡರ್‌ಗೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 67.3 ಓವರ್‌ಗೆ 204 ರನ್‌ ಬಾರಿಸಿ ಆಲ್ ಔಟ್ ಆಗಿತ್ತು. ಆಂಗ್ಲ ನಾಯಕ ಬೆನ್ ಸ್ಟೋಕ್ಸ್ 43 ರನ್ ಬಾರಿಸಿ, ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್‌ಗೆ ವಿಕೆಟ್ ನೀಡಿದ್ದರು. ಹೋಲ್ಡರ್ ಎಸೆತಕ್ಕೆ ಸ್ಟೋಕ್ಸ್ ಶೇನ್ ಡೌರಿಚ್‌ಗೆ ಕ್ಯಾಚಿತ್ತಿದ್ದರು. ಆ ಇನ್ನಿಂಗ್ಸ್‌ನಲ್ಲಿ ಹೋಲ್ಡರ್ ಎದುರಾಳಿಗೆ 42 ರನ್ ನೀಡಿ 6 ವಿಕೆಟ್ ಮುರಿದಿದ್ದರು. ಶಾನನ್ ಗೇಬ್ರಿಯಲ್ 4 ವಿಕೆಟ್ ಕಬಳಿಸಿದ್ದರು.

ಹೋಲ್ಡರ್ ವಿಕೆಟ್ ಸ್ಟೋಕ್ಸ್‌ಗೆ

ಹೋಲ್ಡರ್ ವಿಕೆಟ್ ಸ್ಟೋಕ್ಸ್‌ಗೆ

ಇನ್ನಿಂಗ್ಸ್‌ಗೆ ಇಳಿದ ವೆಸ್ಟ್ ಇಂಡೀಸ್ ತಂಡ, ಕಾರ್ಲೋಸ್ ಬ್ರಾಥ್‌ವೇಟ್ 65 ರನ್ ಕೊಡುಗೆಯೊಂದಿಗೆ 102ನೇ ಓವರ್‌ಗೆ 318 ರನ್ ಪೇರಿಸಿ 114 ರನ್ ಮುನ್ನಡೆ ಸಾಧಿಸಿತು. ಗಮ್ಮತ್ತೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆದಿದ್ದ ವಿಂಡೀಸ್ ನಾಯಕ ಜೇಸನ್ ವಿಕೆಟ್ ಆಂಗ್ಲ ನಾಯಕ ಸ್ಟೋಕ್ಸ್‌ಗೆ ಲಭಿಸಿತು. ಸ್ಟೋಕ್ಸ್ ಎಸೆತಕ್ಕೆ ಹೋಲ್ಡರ್, ಜೋಫ್ರಾ ಆರ್ಚರ್‌ಗೆ ಕ್ಯಾಚ್ ನೀಡಿ ಕೇವಲ 5 ರನ್‌ಗೆ ನಿರ್ಗಮಿಸಿದರು.

ಸ್ಟೋಕ್ಸ್ ವಿಕೆಟ್ ಜೇಸನ್‌ಗೆ

ಸ್ಟೋಕ್ಸ್ ವಿಕೆಟ್ ಜೇಸನ್‌ಗೆ

ತಮಾಷೆಯೆಂದರೆ ಆಲ್ ರೌಂಡರ್ ನಾಯಕರಿಬ್ಬರ ಜಿದ್ದಾಜಿದ್ದಿಯ ಸೆಣಸಾಟ ಎರಡು ಇನ್ನಿಂಗ್ಸ್‌ಗಳಲ್ಲಿ ಮುಗಿಯಲಿಲ್ಲ. ಈ ಗಮ್ಮತ್ತು ಮೂರನೇ ಇನ್ನಿಂಗ್ಸ್‌ನಲ್ಲೂ ಮುಂದುವರೆಯಿತು. ಮೂರನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 111.2 ಓವರ್‌ಗೆ 313 ರನ್ ಬಾರಿಸಿತ್ತು. ಜೇಸನ್ ಹೋಲ್ಡರ್ ಓವರ್‌ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಶೈ ಹೋಪ್‌ಗೆ ಕ್ಯಾಚ್ ಕೊಟ್ಟು 46 ರನ್‌ಗೆ ನಿರ್ಗಮಿಸಿದರು.

4ನೇ ಇನ್ನಿಂಗ್ಸ್‌ನಲ್ಲಿ ಏನಾಯಿತು?!

4ನೇ ಇನ್ನಿಂಗ್ಸ್‌ನಲ್ಲಿ ಏನಾಯಿತು?!

ಅಂತಿಮ ಇನ್ನಿಂಗ್ಸ್‌ಗೆ ಇಳಿದಿದ್ದ ವೆಸ್ಟ್ ಇಂಡೀಸ್ ತಂಡ ಗೆಲುವಿನ ಭರಸೆಯಲ್ಲಿತ್ತು. 64.2 ಓವರ್‌ಗಳಲ್ಲಿ ಕೆರಿಬಿಯನ್ನರು 200 ರನ್ ಕಲೆ ಹಾಕುವುದರೊಂದಿಗೆ ಗೆಲುವು ದಾಖಲಿಸಿದರು. ಹಾಗಾದರೆ ಬೆನ್ ಸ್ಟೋಕ್ಸ್-ಜೇಸನ್ ಹೋಲ್ಡರ್ ಕಾಳಗದ ಕತೆ ಏನಾಯಿತು? 4ನೇ ಇನ್ನಿಂಗ್ಸ್‌ನಲ್ಲಿ 14 ರನ್ ಬಾರಿಸಿದ್ದ ಹೋಲ್ಡರ್ ಔಟಾಗಲಿಲ್ಲ. ಬಹುಶಃ ಹೋಲ್ಡರ್ ಔಟಾಗುತ್ತಿದ್ದರೆ ಅವರ ವಿಕೆಟ್ ಸ್ಟೋಕ್ಸ್‌ಗೇ ಲಭಿಸುತ್ತಿತ್ತೇನೋ!

Story first published: Friday, July 17, 2020, 15:16 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X