ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನ ನಿವೃತ್ತಿಗೂ ಮುನ್ನ ಒಂದು ಬಾರಿಯಾದ್ರೂ IPLನಲ್ಲಿ ಅವಕಾಶ ನೀಡಿ: ಸಿಕಂದರ್ ರಾಜಾ ಫ್ಯಾನ್ಸ್ ಒತ್ತಾಯ

Sikandar raza

ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ 1ರನ್‌ಗಳ ರೋಚಕ ಗೆಲುವು ದಾಖಲಿಸಿದ ಜಿಂಬಾಬ್ವೆ ತಂಡವು ಟಿ20 ವಿಶ್ವಕಪ್‌ಗೆ ಮತ್ತಷ್ಟು ಮೆರುಗು ನೀಡಿದೆ. ಬಲಿಷ್ಟ ಪಾಕಿಸ್ತಾನಕ್ಕೆ ತಂಡಕ್ಕೆ ಶಾಕ್ ನೀಡಿದ ಜಿಂಬಾಬ್ವೆ ಸದ್ಯ ಹಾಟ್‌ ಟಾಪಿಕ್ ಅನ್ನೋದ್ರಲ್ಲಿ ಅನುಮಾನವಿಲ್ಲ.

ಕಳೆದೆರಡು ವಿಶ್ವಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಜಿಂಬಾಬ್ವೆ ತಂಡವು ಸೂಪರ್‌ 12ಗೆ ಅರ್ಹತೆ ಪಡೆದ್ದಿಲ್ಲದೆ, ಪಾಕಿಸ್ತಾನವನ್ನೇ ಮುಗ್ಗರಿಸುವಂತೆ ಮಾಡಿದೆ. ಅರ್ಹತಾ ಸುತ್ತಿನಲ್ಲಿ ಗ್ರೂಪ್‌ Bನಲ್ಲಿ ಟಾಪರ್ ಆಗಿದ್ದ ಜಿಂಬಾಬ್ವೆ, ಸೂಪರ್ 12 ಗುಂಪಿನಲ್ಲಿ ಒಂದು ಸೋಲನ್ನ ಕಾಣದೆ 3 ಪಾಯಿಂಟ್ಸ್‌ನೊಂದಿಗೆ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದೆ.

ಜಿಂಬಾಬ್ವೆಯ ಈ ಅದ್ಭುತ ಪ್ರದರ್ಶನದ ಹಿಂದೆ ಆಲ್‌ರೌಂಡರ್ ಸಿಕಂದರ್ ರಾಜಾ ಆಟವನ್ನು ಮರೆಯುವಂತಿಲ್ಲ. ಪಾಕ್‌ ವಿರುದ್ಧ ಜಿಂಬಾಬ್ವೆ ಪರ ಬ್ಯಾಟಿಂಗ್‌ನಲ್ಲಿ ಮಂಕಾದ್ರೂ ಸಹ ಬೌಲಿಂಗ್‌ನಲ್ಲಿ ಮಿಂಚಿದ ಸಿಕಂದರ್ ರಾಜಾ 4 ಓವರ್‌ಗಳಲ್ಲಿ 25ರನ್ ನೀಡಿ 3 ವಿಕೆಟ್ ಸಂಪಾದಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ್ರು.

1 ರನ್‌ಗಳ ರೋಚಕ ಗೆಲುವು ಪಡೆದ ಜಿಂಬಾಬ್ವೆ

1 ರನ್‌ಗಳ ರೋಚಕ ಗೆಲುವು ಪಡೆದ ಜಿಂಬಾಬ್ವೆ

ಜಿಂಬಾಬ್ವೆ ನೀಡಿದ್ದ 130ರನ್ ಗುರಿಯನ್ನ ಬೆನ್ನತ್ತಿದ ಪಾಕಿಸ್ತಾನ ಪವರ್‌ಪ್ಲೇ ಓವರ್‌ಗಳ ಒಳಗೆ ಓಪನರ್ಸ್‌ಗಳಿಬ್ಬರನ್ನು ಕಳೆದುಕೊಂಡಿತು. ಟಾಪ್ ಆರ್ಡರ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ ಪರ ಓಪನರ್ಸ್ ಕೈ ಕೊಟ್ಟ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಅಂತಿಮ ಎಸೆತದಲ್ಲಿ 3ರನ್‌ಗಳು ಬೇಕಿದ್ದ ವೇಳೆಯಲ್ಲಿ ಒಂದು ರನ್‌ಗಳಷ್ಟ ಕಲೆಹಾಕಿದ ಶಾಹಿನ್ ಅಫ್ರಿದಿ ನಂತರದ ಓಟದಲ್ಲಿ ರನೌಟ್ ಆದ್ರು. ಪರಿಣಾಮ ಜಿಂಬಾಬ್ವೆ ತಂಡವು 1ರನ್‌ಗಳ ರೋಚಕ ಗೆಲುವು ಸಂಪಾದಿಸಿತು. ಈ ಮೂಲಕ ವಿಶ್ವಕಪ್‌ನಲ್ಲಿ ಸೆಮಿಸ್‌ಗೆ ತಲುಪಲು ಜಿಂಬಾಬ್ವೆ ಪ್ರಬಲ ಪೈಪೋಟಿ ತಂಡವಾಗಿ ಮಾರ್ಪಟ್ಟಿದೆ.

ವಿರಾಟ್ ಕೊಹ್ಲಿ ಅದ್ಭುತ ಆಟಗಾರ, ಏನನ್ನೂ ಸಾಭೀತುಪಡಿಸಬೇಕಾಗಿಲ್ಲ: ರೋಜರ್ ಬಿನ್ನಿ

ಸಿಕಂದರ್ ರಾಜಾಗೆ ಒಮ್ಮೆಯಾದ್ರೂ ಐಪಿಎಲ್‌ನಲ್ಲಿ ಅವಕಾಶ ನೀಡಿ

ಸಿಕಂದರ್ ರಾಜಾಗೆ ಒಮ್ಮೆಯಾದ್ರೂ ಐಪಿಎಲ್‌ನಲ್ಲಿ ಅವಕಾಶ ನೀಡಿ

ಪಾಕಿಸ್ತಾನ ವಿರುದ್ಧದ ಅದ್ಭುತ ಪ್ರದರ್ಶನದ ಬಳಿಕ ಜಿಂಬಾಬ್ವೆ ಆಟಗಾರ ಸಿಕಂದರ್ ರಾಜಾಗೆ ಒಂದು ಬಾರಿ ಐಪಿಎಲ್‌ನಲ್ಲಿ ಅವಕಾಶ ನೀಡಿ ಎಂದು ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಒತ್ತಾಯಿಸಿದ್ದಾರೆ. 36 ವರ್ಷದ ಸಿಕಂದರ್ ರಾಜಾ ಪ್ರಸ್ತುತ ಐಪಿಎಲ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ವಯಸ್ಸಿನಲ್ಲಿಯೂ ಜಿಂಬಾಬ್ವೆ ತಂಡದ ಮ್ಯಾಚ್ ವಿನ್ನರ್ ಆಗಿ ರಾಜಾ ಮಿಂಚುತ್ತಿದ್ದಾರೆ.

ವಿಶ್ವಕಪ್ ಮುಖಭಂಗದ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಂಡ ವಿಂಡೀಸ್ ನಾಯಕ ಪೂರನ್

ಶಾಕಿಂಗ್ ಸುದ್ದಿಯನ್ನು ತಿಳಿಸಿದ್ದ ಜಿಂಬಾಬ್ವೆ ಸೂಪರ್ ಸ್ಟಾರ್

ಶಾಕಿಂಗ್ ಸುದ್ದಿಯನ್ನು ತಿಳಿಸಿದ್ದ ಜಿಂಬಾಬ್ವೆ ಸೂಪರ್ ಸ್ಟಾರ್

ಇತ್ತೀಚೆಗಷ್ಟೇ ಸಿಕಂದರ್ ರಾಜಾ ಶಾಕಿಂಗ್ ಸುದ್ದಿಯನ್ನು ಹೊರಹಾಕಿದ್ರು. ಟ್ಯೂಮರ್‌ನಿಂದಾಗಿ ತನ್ನ ವೃತ್ತಿಜೀವನ ಮುಗಿದು ಹೋಗಿತ್ತು ಎಂದು ಭಾವಿಸಿದ್ದೆ ಎಂದು ರಾಜಾ ರಿವೀಲ್ ಮಾಡಿದ್ದರು.

''ನಾನು ಸ್ಕ್ಯಾನಿಂಗ್ ಒಳಗಾದ ವೇಳೆಯಲ್ಲಿ ಟ್ಯೂಮರ್ ಇರುವುದು ತಿಳಿಯಿತು. ಇದ್ರಿಂದಾಗಿ ಕ್ಯಾನ್ಸರ್‌ ನಿಂದಾಗಿ ತನ್ನ ವೃತ್ತಿಜೀವನ ಮುಗಿದುಹೋಯ್ತು ಎನ್ನುವಷ್ಟರಲ್ಲಿ ರಿಪೋರ್ಟ್‌ ಕ್ಯಾನ್ಸರ್ ಇಲ್ಲ ಎಂದು ಬಂದ ಬಳಿಕ ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ'' ಎಂದು ಹೇಳಿದ್ದಾರೆ.

ಇದರ ಜೊತೆಗೆ ನಾನು ಈಗಾಗಲೇ ಸಾಕಷ್ಟು ಬಾರಿ ಸರ್ಜರಿಗೆ ಒಳಗಾಗಿದ್ದರೂ, ಇನ್ನೂ ಕ್ರಿಕೆಟ್ ಆಡುತ್ತಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಮಾತುಗಳನ್ನೆಲ್ಲಾ ಕೇಳಿದ ಬಳಿಕ ಅಭಿಮಾನಿಗಳು ಜಿಂಬಾಬ್ವೆ ಅನುಭವಿ ಆಟಗಾರನಿಗೆ ಒಮ್ಮೆಯಾದ್ರೂ ಐಪಿಎಲ್‌ನಲ್ಲಿ ಆಡಲು ಅವಕಾಶ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

Story first published: Saturday, October 29, 2022, 14:04 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X